ಇತ್ತೀಚಿನ ಸುದ್ದಿ
ನೂತನ ಸಂಸದೆ, ನಟಿ ಕಂಗನಾ ರಣಾವತ್ ಗೆ ಸಿಐಎಸ್ಎಫ್ ಮಹಿಳಾ ಸಿಬ್ಬಂದಿಯಿಂದ ಕಪಾಳಮೋಕ್ಷ: ಕಾರಣ ಏನು ಗೊತ್ತೇ?
06/06/2024, 22:12
ಚಂಡಿಘಡ(reporterkarnataka.com): ವರ್ಷದ ಹಿಂದಿನ ಹಗೆಯಲ್ಲಿ ಸಿಐಎಸ್ಎಫ್ ಮಹಿಳಾ ಸಿಬ್ಬಂದಿಯೊಬ್ಬರು ನೂತನ ಸಂಸದೆ, ಬಾಲಿವುಡ್ ನಟಿ ಕಂಗನಾ ರಣಾವತ್ ಮೇಲೆ ಚಂಡಿಘಡ ವಿಮಾನ ನಿಲ್ದಾಣದಲ್ಲಿ ಹಲ್ಲೆ ನಡೆಸಿದ ಘಟನೆ ನಡೆದಿದೆ.
ವರ್ಷದ ಹಿಂದೆ ದೆಹಲಿ ಹೊರ ವಲಯದಲ್ಲಿ ರೈತರ ಪ್ರತಿಭಟನೆ ವೇಳೆ ನಟಿ ಕಂಗನಾ ರಣವಾತ್ ರೈತರಿಗೆ ಅವಮಾನ ಮಾಡುವ ರೀತಿ ಹೇಳಿಕೆ ನೀಡಿದ್ದರು ಎಂದು ಆರೋಪಿಸಿ ಸಿಐಎಸ್ಎಫ್ ಮಹಿಳಾ ಸಿಬ್ಬಂದಿ ಕುಲ್ವಿಂದರ್ ಕೌರ್ ಕಪಾಳಮೋಕ್ಷ ಮಾಡಿದ್ದಾರೆ. ಚಂಡೀಗಢದಿಂದ ದೆಹಲಿಗೆ ಹೊರಟಿದ್ದ ವೇಳೆ ಬೋರ್ಡಿಂಗ್ ಸಂದರ್ಭದಲ್ಲಿ ಘಟನೆ ನಡೆದಿದೆ.
ದೆಹಲಿಯಲ್ಲಿ ಎನ್‌ಡಿಎ ಸಭೆಗೆ ತೆರಳಲು ಚಂಡೀಘಡ ವಿಮಾನ ನಿಲ್ದಾಣಕ್ಕೆ ಕಂಗನಾ ಆಗಮಿಸಿದ್ದರು.