ಇತ್ತೀಚಿನ ಸುದ್ದಿ
ಮೂಡಿಗೆರೆ: ಅಪ್ಪ ಕಡಿಯುತ್ತಿದ್ದ ಮರ ಬಿದ್ದು ಮಗ ಸ್ಥಳದಲ್ಲೇ ದಾರುಣ ಸಾವು
08/06/2024, 20:13
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮರ ಕಡಿಯುವಾಗ ಮರ ಬಿದ್ದು ಯುವಕ ಸಾವಕ ಸಾವನ್ನಪ್ಪಿದ ದಾರುಣ ಘಟನೆ ಮೂಡಿಗೆರೆ ತಾಲೂಕಿನ ಹೆಗ್ಗುಡ್ಲು ಎಸ್ಟೇಟಿನಲ್ಲಿ ನಡೆದಿದೆ.
ಅಬ್ದುಲ್ ಅಜೀಜ್ (20) ಮೃತ ದುರ್ದೈವಿ.ಕೇರಳದಿಂದ ಟಿಂಬರ್ ಕಡಿಯಲು ಅಪ್ಪ-ಮಗ ಬಂದಿದ್ದರು. ಅಪ್ಪ ಕಡಿದ ಮರ ಮಗನ ತಲೆ ಬಿದ್ದು ಮಗ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಅಪ್ಪ ಮರ ಹತ್ತಿ ಮರ ಕಡಿಯುತ್ತಿದ್ದರು.ಆಗ ಮೇಲಿಂದ ಅದೇ ಮರ ಬಿದ್ದು ಮಗ ದಾರುಣವಾಗಿ ಸಾವನ್ಬಪ್ಪಿದ್ದಾನೆ.
ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.