ಇತ್ತೀಚಿನ ಸುದ್ದಿ
ನೆಲ್ಯಾಡಿ ವಿಶ್ವವಿದ್ಯಾಲಯ ಕಾಲೇಜು: ‘ಉದ್ಯೋಗ ನೋಂದಣಿ ಹಾಗೂ ವೃತ್ತಿ ಮಾರ್ಗದರ್ಶನ’ ಕಾರ್ಯಕ್ರಮ
30/08/2024, 14:15
ಮಂಗಳೂರು(reporterkarnataka.com): ನೆಲ್ಯಾಡಿ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಗುರುವಾರ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಯೋಗದೊಂದಿಗೆ ಕಾಲೇಜಿನ ವಿದ್ಯಾರ್ಥಿಗಳಿಗೆ ‘ಉದ್ಯೋಗ ನೋಂದಣಿ ಹಾಗೂ ವೃತ್ತಿ ಮಾರ್ಗದರ್ಶನ’ ಕಾರ್ಯಕ್ರಮದಡಿ ತರಬೇತು ಕಾರ್ಯಕ್ರಮ ನಡೆಯಿತು.
ಮಂಗಳೂರು ಸಂಸ್ಥೆಯ ಕೌನ್ಸಿಲರ್ ಕಂ ಟ್ರೈನರ್ ಮಂಜೂಷ ಅವರು ಕಾಲೇಜಿನ ಸಂಯೋಜಕರಾದ ಡಾ. ಸುರೇಶ್ ಅವರ ಅನುಮತಿಯೊಂದಿಯೊಂದಿಗೆ ಕಾಲೇಜಿನ ವಿದ್ಯಾರ್ಥಿಗಳಿಗೆ
ತರಬೇತು ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾರ್ಥಿಗಳನ್ನು ಉದ್ಯೋಗಕ್ಕೆ ನೋಂದಣಿ ಮಾಡಿಸುವುದರ ಮೂಲಕ ಉದ್ಯೋಗ ಕಾರ್ಡ್ ನೀಡಿ ವಿದ್ಯಾರ್ಥಿಗಳಿಗೆ ಅದರ ಉಪಯುಕ್ತತೆ ಹಾಗೂ ಬಳಸುವಿಕೆಯ ಕುರಿತಂತೆ ಮಾಹಿತಿ ನೀಡಿದರು. ಇದರೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಮಾಹಿತಿ ಒದಗಿಸುವುದರೊಂದಿಗೆ, ಹೇಗೆ ಸಂದರ್ಶನ ಎದುರಿಸುವುದು ಎಂಬುದರ ಕುರಿತು ಪ್ರಾತ್ಯಕ್ಷಿಕೆಯನ್ನು ನೀಡುವುದರೊಂದಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಡಾ.ಸೀತಾರಾಮ ಪಿ. (ಮುಖ್ಯಸ್ಥರು, ಇತಿಹಾಸ ವಿಭಾಗ) ಸ್ವಾಗತಿಸಿದರು.ಪಾವನ ರೈ (ಉಪನ್ಯಾಸಕಿ, ವಾಣಿಜ್ಯ ವಿಭಾಗ) ವಂದಿಸಿದರು. ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.