5:57 AM Monday1 - September 2025
ಬ್ರೇಕಿಂಗ್ ನ್ಯೂಸ್
ದಂತ ವೈದ್ಯಕೀಯ ಸೇವೆ ಹಳ್ಳಿ ಹಳ್ಳಿಗಳಿಗೂ ತಲುಪಲಿ: ಡೆಂಟಿಸ್ಟ್‌ ಶೃಂಗಸಭೆ-2025 ಸಮಾವೇಶದಲ್ಲಿ ಸಚಿವ… ಗೂಡ್ಸ್ ವಾಹನದಲ್ಲಿ ಗಾಂಜಾ ಮಾರಾಟಕ್ಕೆ ಯತ್ನ: ಮಾಲು ಸಹಿತ ಆರೋಪಿ ಬಂಧನ Kodagu | ‘ಹುಡುಗಿ, ಆಂಟಿ ಸರ್ವಿಸ್…’ ಎಂದು ಜಾಲತಾಣದಲ್ಲಿ ಹರಿಯ ಬಿಟ್ಟ: ಮಡಿಕೇರಿ… Kerala | ವಯನಾಡು ತಮರಶೆರಿ ಘಾಟ್ ಬಳಿ ಭೂಕುಸಿತ: ಬದಲಿ ಮಾರ್ಗಕ್ಕೆ ಸಲಹೆ ಕೆಪಿಟಿಸಿಎಲ್ ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್ ಹುದ್ದೆಗಳ ಅಯ್ಕೆ ಪಟ್ಟಿ… ಕೊಚ್ಚಿಯಲ್ಲಿ ಕೌಶಲ್ಯ ಶೃಂಗಸಭೆ | ಪದವಿಗಳಲ್ಲ, ಭವಿಷ್ಯದ ಬಾಗಿಲು ತೆರೆಯುವುದು ಕೌಶಲ್ಯತೆ: ಸಚಿವ… Kodagu | ಗೋಣಿಕೊಪ್ಪದಲ್ಲಿ ಅಸ್ಸಾಂ ವ್ಯಕ್ತಿಯಿಂದ ಅಂಗಡಿ ಶಟರ್ ಮುರಿದು 32 ಹೊಸ… ಮಡಿಕೇರಿ – ವಿರಾಜಪೇಟೆ ಮುಖ್ಯರಸ್ತೆಯ ಮೇಕೇರಿ ಬಳಿ ಮಣ್ಣು ಕುಸಿತ: ವಾಹನ ಸಂಚಾರ… ಅ. 9ರಿಂದ 23ರವರೆಗೆ ಹಾಸನಾಂಬೆ ಉತ್ಸವ; ಈ ಬಾರಿ ದೇವಿ ದರ್ಶನ ನಿಯಮ… ಜಾತ್ಯತೀತತೆಯ ಸಂಕೇತವಾಗಿರುವ ನಾಡ ಹಬ್ಬ, ಧಾರ್ಮಿಕವಲ್ಲ: ಡಾ. ಪುರುಷೋತ್ತಮ ಬಿಳಿಮಲೆ

ಇತ್ತೀಚಿನ ಸುದ್ದಿ

ನಿಡುವಾಳೆ ಶ್ರೀ ರಾಮೇಶ್ವರ ಕ್ಷೇತ್ರದಲ್ಲಿ ಕಾರ್ತಿಕ ದೀಪೋತ್ಸವ: ಬೆಳಗಿದ 3 ಸಾವಿರಕ್ಕೂ ಹೆಚ್ಚು ಹಣತೆ

01/12/2024, 21:34

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಶ್ರೀ ರಾಮೇಶ್ವರ ಕ್ಷೇತ್ರ ನಿಡುವಾಳೆಯಲ್ಲಿ ಕಾರ್ತಿಕ ದೀಪೋತ್ಸವ ಜರುಗಿತು.
ವಿದ್ಯುದ್ದೀಪ, ತಳಿರು ತೋರಣಗಳಿಂದ ಕಂಗೊಳಿಸುತ್ತಿದ್ದ ಶ್ರೀ ರಾಮೇಶ್ವರ ದೇವಸ್ಥಾನ ಕ್ಷೇತ್ರದ ಆಡಳಿತ ದಾರರಾದ ಶ್ರೀ ಸುನೀಲ್ ಜೆ. ಗೌಡ ದಂಪತಿ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ದೀಪೋಜ್ವಲನ ಮಾಡುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಸುಮಾರು ಮೂರು ಸಾವಿರಕ್ಕೂ ಹೆಚ್ಚು ಹಣತೆಗಳು ಪ್ರಜ್ವಲಿಸಿದವು. ಸುಡುಮದ್ದು ಪ್ರದರ್ಶನ ಕಾರ್ಯಕ್ರಮಕ್ಕೆ ಮೆರುಗನ್ನು ಹೆಚ್ಚಿಸಿತು.
ದೀಪೋತ್ಸವದ ನಂತರ ಸಾರ್ವಜನಿಕ ಅನ್ನಸಂತರ್ಪಣ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಶ್ವೇತಾ ಸುನೀಲ್ ಜೆ. ಗೌಡ, ಸಿದ್ದಾಂತ್ ಗೌಡ, ಲಕ್ಷ್ಮೀ ಲಕ್ಷ್ಮಣ ಗೌಡ್ರು , ಗೀತಾ ಗೌಡ್ರು ರೂಪ ಗೌಡ್ರು , ಮಾಜಿ ಅರ್ಚಕರಾದ ರಾಮ್ ಭಟ್ ವಾಟೇಖಾನ್, ಮಧುಕರ ಗೋಖಲೆ, ಮಲ್ಲಿಗೆ ಎಸ್ಟೇಟ್ ವ್ಯವಸ್ಥಾಪಕರಾದ ಎನ್. ಆರ್. ನಾಗರಾಜ್ ಭಟ್, ಕ್ಷೇತ್ರದ ಅರ್ಚಕರಾದ ಚರಣ್ ಕಾರಂತ್ , ದಿನಕರ ಭಟ್, ಸಿಬ್ಬಂದಿ ಸೂರ್ಯನಾರಾಯಣ ಗ್ರಾಮಸ್ಥರಾದ ಶಿವಪ್ಪ ಉರುವಿನಖಾನ್, ವಿಶ್ವ ಆಟೋ , ಸುಬ್ರಾಯ ಗೌಡ್ರು ,ಹೆಚ್. ಆರ್. ಚಂದ್ರಶೇಖರ್ , ರವಿ ಬಿ. ಉರುವಿನ ಖಾನ್, ಜಯಂತ್ ಪೂಜಾರಿ , ಚಂದ್ರಶೇಖರ್ , ಮುರಳಿ ಜಾವಳಿ, ಶೇಖರ್ ಮಾವಿನಕಟ್ಟೆ, ನಾಗೇಶ್ ಸಪಾಲ್ಯ, ಸುರೇಶ್, ಸುಮಿತ್ರಾ ಜಗನ್ನಾಥ್ , ಶಂಕರ್ ಹಾಗೂ ನಿಡುವಾಳೆ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು