ಇತ್ತೀಚಿನ ಸುದ್ದಿ
ನಂತೂರು ಸಮೀಪ ಭೀಕರ ಅಪಘಾತ: ರಸ್ತೆ ಹೊಂಡ ತಪ್ಪಿಸಲು ಹೋಗಿ ನಿಂತಿದ್ದ ಒಮ್ನಿಗೆ ಬೈಕ್ ಡಿಕ್ಕಿ; ಯುವಕ ದಾರುಣ ಸಾವು
31/07/2023, 14:46

ಮಂಗಳೂರು(reporterkarnataka.com): ನಗರದ ಬಿಕರ್ಣಕಟ್ಟೆ ಬಳಿ ಭಾನುವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟ ಘಟನೆ ನಡೆದಿದೆ.
ಬಿಕರ್ನಾಕಟ್ಟೆ ಕಡೆ ಯಿಂದ ದ್ವಿಚಕ್ರ ವಾಹನ ಬೈಕ್ ನಲ್ಲಿ ಕೋಡಿಕಲ್ ಕಡೆಗೆ ತೆರಳುತ್ತಿದ್ದ ಅಂಕಿತ್( 20 ) ರಸ್ತೆ ಹೊಂಡಕ್ಕೆ ಬಿದ್ದು ಪಕ್ಕದಲ್ಲೇ ನಿಂತಿದ್ದ ಓಮ್ನಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಅಂಕಿತ್ ತನ್ನ ಸ್ನೇಹಿತನನ್ನು ಬಿಕರ್ನಾಕಟ್ಟೆಯಿಂದ ಬಿಟ್ಟು ವಾಪಾಸ್ ಕೋಡಿಕಲ್ ಗೆ ಹೋಗುವ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ, ಅಪಘಾತಕ್ಕೆ ಹೊಂಡವೇ ಕಾರಣ ಎನ್ನಲಾಗಿದೆ. ಹೊಂಡ ತಪ್ಪಿಸಲು ಹೋಗಿ ಹೊಂಡಕ್ಕೆ ಬಿದ್ದ ಬೈಕ್ ನಿಯಂತ್ರಣ ತಪ್ಪಿ ಕಾಂಪೌಂಡ್ ಬಳಿ ನಿಲ್ಲಿಸಿದ್ದ ಓಮಿನಿ ಕಾರಿಗೆ ಡಿಕ್ಕಿ ಹೊಡೆದಿತ್ತು.