ಇತ್ತೀಚಿನ ಸುದ್ದಿ
ನಂಜನಗೂಡು: ವಿಶ್ವ ಹಿಂದೂ ಪರಿಷತ್ತಿನಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ
24/11/2024, 18:51
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ನಂಜನಗೂಡಿನಲ್ಲಿ ವಿಶ್ವ ಹಿಂದೂ ಪರಿಷತ್ ನಂಜನಗೂಡು ಹಾಗೂ ಮೈಸೂರಿನ ಶ್ರೀ ಅಮೃತ ಕೃಪ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ಚಾಮುಂಡೇಶ್ವರಿ ದೇವಾಲಯದ ಬಳಿ ಇರುವ ಶಿವ ಪಾದ ಸ್ವಾಮಿ ಗದ್ದುಗೆ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ಉದ್ಘಾಟನೆಯನ್ನು ಜಯದೇವ ಹೃದ್ರೋಗ ಆಸ್ಪತ್ರೆಯ ವೈದ್ಯರಾದ ಡಾ. ಕುಮಾರ್ ಸೇರಿದಂತೆ ಮತ್ತಿತರ ಗಣ್ಯರು ದೀಪ ಬೆಳಗಿಸುವ ಮೂಲಕ ನೆರವೇರಿಸಿದರು.
ಶಿಬಿರದಲ್ಲಿ ನುರಿತ ವೈದ್ಯರುಗಳಿಂದ ಬಿಪಿ, ಶುಗರ್, ಕಣ್ಣು, ಕಿಡ್ನಿ ಇಸಿಜಿ ಸೇರಿದಂತೆ ವಿವಿಧ ಬಗೆಯ ಕಾಯಿಲೆಗಳ ತಪಾಸಣೆ ನಡೆಸಲಾಯಿತು. ತಪಾಸಣೆ ನಡೆಸಿದ ರೋಗಿಗಳಿಗೆ ಅಮೃತ ಕೃಪಾ ಆಸ್ಪತ್ರೆ ವತಿಯಿಂದ ಉಚಿತ ಔಷಧಿ ಮಾತ್ರೆಗಳನ್ನು ನೀಡಲಾಯಿತು. ಮೈಸೂರಿನ ರೂಪ ನಗರದಲ್ಲಿರುವ ಅಮೃತ ಕೃಪಾ ಆಸ್ಪತ್ರೆಗೆ ಭೇಟಿ ನೀಡಿ ಹೆಚ್ಚಿನ ಚಿಕಿತ್ಸೆ ಪಡೆದುಕೊಳ್ಳುವಂತೆ ಕೆಲವು ರೋಗಿಗಳಿಗೆ ಸಲಹೆ ನೀಡಲಾಯಿತು. ಇದೇ ಸಂದರ್ಭ ನಂಜನಗೂಡಿನ ವಿಶ್ವ ಹಿಂದೂ ಪರಿಷತ್ ವತಿಯಿಂದ ವೇದಿಕೆ ಮೇಲಿನ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂಜನಗೂಡು ಪಟ್ಟಣವು ಸೇರಿದಂತೆ ವಿವಿದಡೆಯಿಂದ ನೂರಾರು ಮಂದಿ ಶಿಬಿರದಲ್ಲಿ ಪಾಲ್ಗೊಂಡು ವೈದ್ಯರಿಂದ ಚಿಕಿತ್ಸೆ ಹಾಗೂ ಮಾರ್ಗದರ್ಶನ ಪಡೆದುಕೊಂಡರು. ವೈದ್ಯಾಧಿಕಾರಿಗಳಾದ ಡಾ. ಸೌಮ್ಯ ಹಾಗೂ ಡಾ. ಕುಮಾರ್ ಮಾತನಾಡಿ ಇಂತಹ ಶಿಬಿರಗಳ ಅವಶ್ಯಕತೆ ಬಹಳ ಇದೆ ಸಾರ್ವಜನಿಕರ ಬಳಿಗೆ ವೈಜ್ಞಾಧಿಕಾರಿಗಳೇ ಬಂದು ಉಚಿತವಾಗಿ ವಿವಿಧ ಕಾಯಿಲೆಗಳ ಪರೀಕ್ಷೆ ಮಾಡಿ ಚಿಕಿತ್ಸೆ ,ಔಷದೋಪಚಾರ ಹಾಗೂ ಸಲಹೆ ಸೂಚನೆಗಳನ್ನು ನೀಡಲಾಗುತ್ತದೆ ಹಾಗಾಗಿ ಇದೊಂದು ಒಳ್ಳೆಯ ಕೆಲಸ ಎಂದು ಪ್ರಾಯೋಜಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಗೋಪಾಲ್ ರಾವ್, ನಯನಾ, ಕ್ಷತ್ರಿಯ ಸಮಾಜದ ಅಧ್ಯಕ್ಷರಾದ ಶ್ರೀನಿವಾಸ್, ವಿಶ್ವ ಹಿಂದೂ ಪರಿಷತ್ ಮುಖಂಡರಾದ ಕುಂಟೆಗೌಡ,, ಪಣೀಶ್, ಬಸವಣ್ಣ, ಮಹೇಶ್ ,ಕಾಶಿರಾವ್, ಪ್ರಭಾಕರ್, ಶ್ರೀದರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.