ಇತ್ತೀಚಿನ ಸುದ್ದಿ
ನಂದಿನಿ ನದಿಗೆ ಮಚ್ಚೂರು ಬಳಿ ನಿರ್ಮಿಸಿದ ನೂತನ ಅಣೆಕಟ್ಟಿಗೆ ಚಾಲನೆ: ಗಂಗಾಪೂಜೆ ಮೂಲಕ ಶಾಸಕ ಡಾ. ಭರತ್ ಶೆಟ್ಟಿ ಲೋಕಾರ್ಪಣೆ
15/01/2023, 20:35

ಸುರತ್ಕಲ್(reporterkarnataka.com): ಸುಮಾರು 4 ಕೋಟಿ ರೂಪಾಯಿ ವೆಚ್ಚದಲ್ಲಿ ನಂದಿನಿ ನದಿಗೆ ಅಡ್ಡವಾಗಿ ಮಚ್ಚೂರು ಕಾನ ಶ್ರೀ ರಾಮ ಮಂದಿರ ದೇವಸ್ಥಾನದ ಬಳಿ ನಿರ್ಮಿಸಲಾಗಿರುವ ನೂತನ ಅಣೆಕಟ್ಟನ್ನು ನಂದಿನಿ ನದಿಗೆ ಪೂಜೆ ಸಲ್ಲಿಸುವ ಮೂಲಕ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು ಲೋಕಾರ್ಪಣೆಗೊಳಿಸಿದರು.
ಇಳಿ ಸಂಜೆಯ ಗೋಧೂಳಿ ಮುಹೂರ್ತದಲ್ಲಿ ಸಹಸ್ರಾರು ಹಣತೆಯ ಬೆಳಕಿನಲ್ಲಿ ಕಾರ್ಯಕ್ರಮ ಸಂಪನ್ನಗೊಂಡಿತು.
ಗ್ರಾಮದ ನಾಗರಿಕರ ಬಹುಕಾಲದ ಕುಡಿಯುವ ನೀರಿನ ಬವಣೆಯನ್ನು ತಗ್ಗಿಸುವ ಮಾದರಿ ಕಾರ್ಯ ಮಾಡಿರುವ ಡಾ. ಭರತ್ ಶೆಟ್ಟಿಯವರನ್ನು ಊರಿನ ಹಿರಿಯರ ಪ್ರಮುಖರ ಉಪಸ್ಥಿತಿಯಲ್ಲಿ ಆರತಿ ಬೆಳಗಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ನಿಕಟ ಪೂರ್ವ ಜಿಲ್ಲಾ ಪಂಚಾಯತ್ ಸದಸ್ಯರಾದ ಜನಾರ್ಧನ ಗೌಡ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮೋಹಿನಿ, ಉಪಾಧ್ಯಕ್ಷರಾದ ನಾರಾಯಣ ಎ.ಎಸ್ ,ಪಂಚಾಯತ್ ಸದಸ್ಯರಾದ ಜಯಂತಿ ನಾಯ್ಕ್ ,ಸುಮನ , ಪೂರ್ಣಿಮಾ ಹರಿಪ್ರಕಾಶ್ , ಜಯಂತಿ ಶಂಕರ್, ರಾಜನೀಶ್, ಮಾಜಿ ಪಂಚಾಯತ್ ಅಧ್ಯಕ್ಷರಾದ ಪ್ರಕಾಶ್ ಹೆಗ್ಡೆ ,ವೀರಪ್ಪ ಗೌಡ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.