5:47 PM Monday5 - January 2026
ಬ್ರೇಕಿಂಗ್ ನ್ಯೂಸ್
ಕಲೆ ರಾಜ್ಯದ ಸಂಸ್ಕೃತಿಯ ಕನ್ನಡಿ; ಕಲಾವಿದರು,ಕಲಾಸಕ್ತರಿಗೆ ಚಿತ್ರಸಂತೆ ವೇದಿಕೆ ಕಲ್ಪಿಸಿದೆ: ಮುಖ್ಯಮಂತ್ರಿ Kodagu | ಸಾರ್ವಜನಿಕವಾಗಿ ಬಂದೂಕು ಪ್ರದರ್ಶನ: 3 ಮಂದಿ ಆರೋಪಿಗಳ ಬಂಧನ ಸೋಶಿಯಲ್ ಮೀಡಿಯಾ ಪವರ್: 60 ವರ್ಷದ ವೃದ್ದನನ್ನು ಕುಟುಂಬದೊಂದಿಗೆ ಮತ್ತೆ ಒಂದಾಗಿಸಿದ ರೀಲ್ಸ್! ಜಗತ್ತಿನ 3ನೇ ಅತಿ ಎತ್ತರದ ಮೌಂಟ್ ಕೆನ್ಯಾ ಪರ್ವತ ಏರಿದ ಮಂಗಳೂರು ಮೂಲದ… Bangalore | ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನಕ್ಕೆ ಸಂಪುಟದ ಸಮ್ಮತಿ: 153 ಎಕರೆ… ಬಳ್ಳಾರಿ ಫೈಯರಿಂಗ್ | ಕೊಲೆ ಪ್ರಕರಣ ದಾಖಲಿಸಿ ಶಾಸಕರ ಕೂಡಲೇ ಬಂಧಿಸಿ: ಆರ್.ಅಶೋಕ್… ಬಳ್ಳಾರಿ ಗಲಭೆ ಸಿಬಿಐ ಅಥವಾ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಲಿ: ಮಾಜಿ ಸಿಎಂ… ಬಳ್ಳಾರಿ ಅಹಿತಕರ ಘಟನೆಯ ನ್ಯಾಯಾಂಗ ತನಿಖೆ ನಡೆಯಲಿ: ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆಗ್ರಹ 6322 ಪರಿಶಿಷ್ಟ ಕುಟುಂಬಗಳಿಗೆ ಕೊಳವೆಬಾವಿ ಭಾಗ್ಯ: ಕಾಮಗಾರಿ ಚುರುಕುಗೊಳಿಸಲು ನೀರಾವರಿ ಸಚಿವರ ಖಡಕ್… Kodagu | ಸೋಮವಾರಪೇಟೆ ಮೀಸಲು ಅರಣ್ಯ ಪ್ರದೇಶದಲ್ಲಿ ಬೇಟೆ: ಕೋವಿ ಸಹಿತ ಮೂವರ…

ಇತ್ತೀಚಿನ ಸುದ್ದಿ

ನಂದಳಿಕೆ: ‘ಸತ್ಯಮಾಲೋಕಂದ ಸಿರಿ’ ತುಳು ಕೃತಿ ಲೋಕಾರ್ಪಣೆ

03/07/2023, 11:31

ನಂದಳಿಕೆ(reporterkarnataka.com): ಕೃತಿ ಬರೆಯಲು ಇಚ್ಚಾಶಕ್ತಿ, ಶ್ರದ್ಧೆ ಪ್ರಮುಖ ಪಾತ್ರವಹಿಸುತ್ತದೆ ಎಂದು ತುಳುಕೂಟ ಉಡುಪಿ ಇದರ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಹೇಳಿದರು ಅವರು ನಂದಳಿಕೆ ಮಹಾಲಿಂಗೇಶ್ವರ ದೇವಾಲಯದ ಸಭಾಂಗಣದಲ್ಲಿ ಚಾವಡಿ ಅರಮನೆಯ ಸರಳಾ ಎಸ್. ಎಸ್. ಹೆಗ್ಡೆ ಬರೆದ “ಸತ್ಯಮಾಲೋಕಂದ ಸಿರಿ” ಕೃತಿ ಲೋಕಾರ್ಪಣೆ ಗೊಳಿಸಿ ಮಾತನಾಡಿದರು.
ತುಳುನಾಡು ದೈವಗಳನಾಡಗಿದೆ. ಇಲ್ಲಿನ ಸಿರಿಗಳ ಕಾರ್ಣಿಕ ಮೂಲಕ ಸಂಸ್ಕೃತಿಯ ಶ್ರೀಮಂತಿಕೆ ತೋರಿಸುತ್ತದೆ. ಸಿರಿಗಳ ಜನಪದವನ್ನು ಕೃತಿಯನ್ನಾಗಿಸಿ ಉಳಿಸುವ ಕಾರ್ಯ ಮಹತ್ವದ್ದಾಗಿದೆ ಎಂದರು.

ವಿಜಯಾ ಬ್ಯಾಂಕ್ ವಿಶ್ರಾಂತ ಪ್ರಬಂಧಕ ಭುವನ ಪ್ರಸಾದ್ ಹೆಗ್ಡೆ ಮಾತನಾಡಿ, ನಂದಳಿಕೆ ಸಿರಿ ಜಾತ್ರೆಗೆ ಪ್ರಸಿದ್ಧವಾಗಿದೆ. ಇಲ್ಲಿಯ ಸಿರಿಗಳ ಕಥೆಗಳನ್ನು ಪುಸ್ತಕ ರೂಪದಲ್ಲಿ ಬರೆದಿರುವುದು ಅಭಿನಂದನಾರ್ಹವಾಗಿದೆ. ಮುಂದಿನ ಜನಾಂಗಕ್ಕೆ ಸ್ಥಳದ ಮಹತ್ವದ ಹಾಗೂ ಇತಿಹಾಸ ಗುರುತಿಸಲು ಸಾಧ್ಯವಾಗುತ್ತದೆ. ಕವಿ ಮುದ್ದಣ ಸೇರಿದಂತೆ ಅನೇಕ ಸಾಹಿತಿಗಳ ನಂದಳಿಕೆಯೆ ಮೂಲವಾಗಿದೆ ಎಂದರು.
ಜನಪದ ವಿದ್ವಾಂಸ ಭುವನೇಂದ್ರ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ. ಅರುಣ ಕುಮಾರ್ ಎಸ್. ಆರ್. ಮಾತನಾಡಿ ಸತ್ಯಮಾಲೋಕಂದ ಸಿರಿ ಈ ಪುಸ್ತಕದಲ್ಲಿ ಶ್ರೀಮಂತ ತುಳುನಾಡ ಸಂಸ್ಕೃತಿಯನ್ನು ತೆರೆದಿಡಲಾಗಿದೆ. ಕುಂದಾಪುರದಿಂದ ಹಿಡಿದು ಉಜಿರೆ ವರೆಗಿನ ಶ್ರೀಮಂತ ತುಳುನಾಡು ಸಿರಿಗಳ ಆರಾಧನೆಯ ಕಥೆಗಳು ಯುವಜನಾಂಗಕ್ಕೆ ತಿಳಿಸಿಕೊಡುವ ಪ್ರಯತ್ನ ಮಾಡಲಾಗಿದೆ. ಪುಸ್ತಕ ಅನಾವರಣ ಮಾಡುವ ಮೂಲಕ ತುಳುನಾಡಿನ ಇತಿಹಾಸವನ್ನು ಮರುಕಳಿಸುವ ಪ್ರಯತ್ನ ಮಾಡಲಾಗಿದೆ ಎಂದರು.
ಲೇಖಕಿ ಸರಳಾ ಎಸ್. ಹೆಗ್ಡೆ, ಮಾತನಾಡಿ ಪಾರ್ದನಗಳು ಒಬ್ಬರಿಂದ ಇನ್ನೊಬ್ಬರಿಗೆ ಭಿನ್ನವಾಗಿರುತ್ತದೆ. ಅದನ್ನು ಕ್ರೋಢೀಕರಿಸಿ ಪುಸ್ತಕ ಬರೆಯಲಾಗಿದೆ ಎಂದರು.
ಕವತ್ತಾರು ವಿಷ್ಣುರಾಜ ಭಟ್, ದೇವಸ್ಥಾನದ ತಂತ್ರಿ ಹರೀಶ್ ತಂತ್ರಿ ಮಾತನಾಡಿ ಶುಭಹಾರೈಸಿದರು.
ಸಭೆಯಲ್ಲಿ ನಂದಳಿಕೆ ಮಹಾಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಮೊಕ್ತೆಸರ ಚಾವಡಿ ಅರಮನೆಯ ಸುಂದರರಾಮ ಹೆಗ್ಡೆ ಉಪಸ್ಥಿತರಿದ್ದರು, ಜಯಂತಿ ಶೆಟ್ಟಿ ಪ್ರಾರ್ಥಿಸಿದರು. ನಂದಳಿಕೆ ಸುಹಾಸ್ ಹೆಗ್ಡೆ ಸ್ವಾಗತಿಸಿದರು. ಸೀತಾರಾಂ ಭಟ್ ಕಾರ್ಯಕ್ರಮ ನಿರೂಪಿಸಿದರು. ಸುಧಾಕರ್ ಧನ್ಯವಾದವಿತ್ತರು.

ಇತ್ತೀಚಿನ ಸುದ್ದಿ

ಜಾಹೀರಾತು