ಇತ್ತೀಚಿನ ಸುದ್ದಿ
ನಂಜನಗೂಡು: ಆದಿಶಕ್ತಿ ಶ್ರೀ ನಾಡಮೇಲಮ್ಮ ದೇವಾಲಯ ಲೋಕಾರ್ಪಣೆ
21/05/2024, 18:08
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ನಂಜನಗೂಡು ತಾಲ್ಲೂಕಿನ ಹರತಲೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಆದಿಶಕ್ತಿ ಶ್ರೀ ನಾಡಮೇಲಮ್ಮ ದೇವಾಲಯವನ್ನು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಸಿ. ಚಿಕ್ಕರಂಗನಾಯಕ ಲೋಕಾರ್ಪಣೆ ಮಾಡಿದರು.
ನೂತನ ದೇವಾಲಯದಲ್ಲಿ ಶ್ರೀ ನಾಡಮೇಲಮ್ಮ ಅಮ್ಮನವರ ಮೂರ್ತಿಯನ್ನು ಕುಳಿರಿಸಿ ಹೂವಿನಿಂದ ಅಲಂಕಾರ ಮಾಡಿ, ಗ್ರಾಮಸ್ಥರು ವಿಶೇಷ ಪೂಜೆಯನ್ನು ಸಲ್ಲಿಸಿದ ಬಳಿಕ ಹೊಸ ನೀರು ತಂದು, ಸತ್ತಿಗೆ, ಸುರ ಪಾಣಿ, ಮಂಗಳವಾದ್ಯದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ದೇವಾಲಯದ ಮುಂಭಾಗದಲ್ಲಿ ಹೋಮ-ಹವನ ಮಾಡಿ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಯಿತು.
ದೇವಾಲಯಕ್ಕೆ ಆಗಮಿಸಿದ ಭಕ್ತರಿಗೆ ಅನ್ನ ದಾಸೋಹದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಸಿ. ಚಿಕ್ಕರಂಗನಾಯಕ ನೂತನ ದೇವಾಲಯವನ್ನು ಟೇಪ್ ಕತ್ತರಿಸುವ ಮೂಲಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು,
ಆದಿಶಕ್ತಿ ಶ್ರೀ ನಾಡಮೇಲಮ್ಮ ಅಮ್ಮನವರ ದೇವಾಲಯವನ್ನು ಸಂತೋಷದಿಂದ ಉದ್ಘಾಟನೆ ಮಾಡಿದ್ದೇನೆ.
ಮುಂಜಾನೆಯಿಂದಲೆ ದೇವಾಲಯದಲ್ಲಿ ಹೋಮ ಹವನ ಮಾಡಿ, ಪೂಜಾ ಕೈಂಕರ್ಯಗಳು ನಡೆದಿವೆ. ದೇವಾಲಯದಲ್ಲಿ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿ, ಹಲವು ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಗ್ರಾಮದ ಮಹದೇಶ್ವರಸ್ವಾಮಿ ದೇವಾಲಯದಿಂದ ಮೆರವಣಿಗೆ ಮಾಡಲಾಗಿದೆ, ಈ ವರ್ಷ ಮಳೆಯಾದರೆ ರೈತರಿಗೆ ಕೃಷಿ ಚಟುವಟಿಕೆ ನಡೆಸಲು ತುಂಬಾ ಅನುಕೂಲವಾಗಲಿದೆ. ಹಾಗಾಗಿ ಉತ್ತಮ ಮಳೆ, ಬೆಳೆಯಾಗಲಿ ಎಂದು ದೇವರಲ್ಲಿ ನಾನು ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಗೋವಿಂದರಾಜು, ಹಾಲು ಉತ್ಪಾದಕರ ಸಂಘದ ಪರೀಕ್ಷಕ ನಂಜನಾಯಕ, ಎಂ.ಜಿ. ಮಂಜುನಾಥ್, ದೇವರಗುಡ್ಡಪ್ಪ ಮಹೇಶ್, ಮುಖಂಡರಾದ ಮಂಚನಾಯಕ, ಮಹದೇವನಾಯಕ, ಯುವ ಮುಖಂಡರಾದ ಭದ್ರನಾಯಕ, ಮನು ಸೇರಿದಂತೆ ಹಲವರು ಭಾಗವಹಿಸಿದ್ದರು.