3:48 PM Saturday7 - March 2026
ಬ್ರೇಕಿಂಗ್ ನ್ಯೂಸ್
Kodagu | ಮಹಿಳೆಯ ಗರ್ಭಾಶಯದಲ್ಲಿ 7 ಕೆಜಿ ಗೆಡ್ಡೆ: ಶಸ್ತ್ರಚಿಕಿತ್ಸೆ ಮೂಲಕ ಹೊರಕ್ಕೆ Kodagu | ದೊಡ್ಡಕೊಡ್ಲಿ ಗ್ರಾಮದಲ್ಲಿ ಕೋವಿಯಿಂದ ಗುಂಡು ಸಿಡಿದು ಯುವಕ ಸಾವು ರಾಜ್ಯದ 17ನೇ ಬಜೆಟ್: ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಮುಖ ಘೋಷಣೆ; ಡಾ. ಯು.… ಮತ್ತೆ ಮರಳಲಿದೆ ಕ್ಯಾಂಪಸ್ ಪಾಲಿಟಿಕ್ಸ್: ರಾಜ್ಯದ ಎಲ್ಲಾ ಕಾಲೇಜು, ವಿವಿಗಳಲ್ಲಿ ವಿದ್ಯಾರ್ಥಿ ಸಂಘಗಳ… ಮಂಗಳೂರು ಮೀನುಗಾರಿಕೆ ಮಹಾವಿದ್ಯಾಲಯ ಸ್ಥಾಪನೆ: ರಾಜ್ಯ ಬಜೆಟ್ ನಲ್ಲಿ‌ ಘೋಷಣೆ ಎಣ್ಣೆಪ್ರಿಯರಿಗೆ ಶಾಕ್ ನೀಡಿದ ಬಜೆಟ್‌: ಮದ್ಯದ ಮೇಲೆ ಹೊಸ ರೂಪದ ತೆರಿಗೆ ಕೋರ್ಟು ಅಲೆದಾಟ ತಪ್ಪಿಸಲು 10 ಕೋಟಿ ವೆಚ್ಚದಲ್ಲಿ ಇ ಕೋರ್ಟ್‌ ಸ್ಥಾಪನೆ 1,000 ಕೋಟಿ ವೆಚ್ಚದ ‘ಕಲ್ಯಾಣ ಪಥ’ ಯೋಜನೆಡಿ ರಸ್ತೆ ಅಭಿವೃದ್ಧಿ:ಮುಖ್ಯಮಂತ್ರಿ ರಾಜ್ಯ ಬಜೆಟ್ | ಮೈಸೂರು ರಾಜ್ಯದ 2ನೇ ಐಟಿ ಸಿಟಿಯಾಗಿ ರೂಪಿಸುವ ಯೋಜನೆ ರಾಜ್ಯದಲ್ಲಿ ‘ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್’ ಆರಂಭ : ಬಜೆಟ್ ನಲ್ಲಿ ಘೋಷಣೆ

ಇತ್ತೀಚಿನ ಸುದ್ದಿ

ಕವನ : ನಮ್ಮ ನಡೆ ಶಾಲೆ ಕಡೆ | ಉಮಾ ಮಾಧವಿ

23/10/2021, 16:49

ಅಂದು ,
ಸಂಚಾರಿ ವಾಣಿಯನ್ನು ಮುಟ್ಟಿ ನೋಡಲು 
ಬಿಡದ ಹಿರಿಯರು,
ಆದರೆ ಚಿಣ್ಣರಿಗೆ ಬಲು ಆಸೆ 
ಏನಿರಬಹುದು? ಅದರಲ್ಲಿ ತಿಳಿವಾಸೆ
ಚಿಣ್ಣರು ಜಾಣರು ಗುಟ್ಟೆಲ್ಲಾ ಬಲ್ಲರು 

ಇಂದು ,
 ಅದೇ ಹಿರಿಯರು ಬನ್ನಿ ವೀಡಿಯೋ ಪಾಠ
ನೋಡಿ ಎಂದರು
ಚಿಣ್ಣರಿಗೆ ವೀಡಿಯೋ ನೋಡಿ ನೋಡಿ ಕಣ್ಣಾಲಿಗಳು ಸೋತವು, ಜೇಡರ ಬಲೆಯಂತೆ
ಕಣ್ಣೆಲ್ಲ ಮಯ ಮಯ 

ಯಾರಿಗೆ ಬೇಕು ?ಈ ವಾಣಿ
ವರ್ಕ್ ಉಂಟು, ನೆಟ್ ಇಲ್ಲ, ವೈಫೈ ಹಾಕಿಲ್ಲ
ಆನ್ಲೈನ್ ಪಾಠದ ಗೋಳು ತಲೆಯೆಲ್ಲಾ ಹಾಳು  .

ಹೌದು 
ಅಂದು ಈ ಚಿಣ್ಣರು ಕಾಯುತ್ತಿದ್ದರು
ಶಾಲೆಗೆ ಯಾವಾಗ ರಜೆ.
ಇಂದು ಬಕಪಕ್ಷಿಯಂತೆ ಕಾಯುವರು
ಶಾಲೆ ಯಾವಾಗ ಎಂದು 
ಸುದ್ದಿ ಬಂತು
 ಶಾಲೆ ಆರಂಭವಾಗುವುದೆಂದು, ಕೇಳಿದ್ದೇ ತಡ ,ಚಿಣ್ಣರು
 ಸಂಚಾರಿವಾಣಿ ಯನ್ನು ಎತ್ತಿ ಹಾಕಿ 
ನಮಸ್ಕಾರ -ಎಂದಿಗೂ ನಿನ್ನ ಸಹವಾಸ ಬೇಡಪ್ಪ ಎನ್ನುತ್ತಾ 
ಖುಷಿ ಖುಷಿಯಿಂದ ಚಿಣ್ಣರೆಲ್ಲ ಒಟ್ಟುಗೂಡಿ
 ಹೆಗಲ ಮೇಲೆ ಚೀಲ ಹಾಕಿ ನಿಷ್ಕಲ್ಮಶ 
ನಗುವಿನೊಂದಿಗೆ ಹೊರಟಿದ್ದಾರೆ.

 ತರಗತಿಯಲ್ಲಿ ಪಾಠ ಕೇಳುವ ಆಸೆಯಿಂದ
 ಟೀಚರನ್ನು ನೋಡುವ ಉತ್ಸಾಹದಿಂದ
 ಗೆಳೆಯರೊಡನೆ ಆಡುವ ಆತುರದಿಂದ 
ನಗುತ್ತಾ ನಗುತ್ತಾ ಹೇಳುತ್ತಾರೆ ,ಅಯ್ಯೋ ದೇವರೇ ,ಎಂದೆಂದಿಗೂ 
ಈ ಮಾರಿ ಕೊರೋನಾ ಬಾರದಿರಲಿ .
ಸದಾಕಾಲ ನಮ್ಮ ನಡೆ ಶಾಲೆ ಕಡೆಗೆ ಇರಲಿ .   

– ಉಮಾ ಮಾಧವಿ
 ನಿವೃತ್ತ ಶಿಕ್ಷಕಿ, ಕೊಳಲಗಿರಿ, ಉಡುಪಿ

ಇತ್ತೀಚಿನ ಸುದ್ದಿ

ಜಾಹೀರಾತು