ಇತ್ತೀಚಿನ ಸುದ್ದಿ
ನಕ್ಸಲ್ ಶರಣಾಗತಿ ರೋಚಕ ಸ್ಟೋರಿ ಬಯಲು: ದನ ಕಾಯುವ ಅಜ್ಜಿಯೇ ಸಂಧಾನಗಾರ್ತಿ; ಹಾಗಾದರೆ ಯಾರು ಈ ವೃದ್ದ?
13/01/2025, 14:17
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ನಕ್ಸಲ್ ಶರಣಾಗತಿ ಹಿಂದಿನ ರೋಚಕ ರಿಯಲ್ ಸ್ಟೋರಿ ಬಯಲಾಗಿದೆ. 6 ಜನ ನಕ್ಸಲರು ಶರಣಾಗತಿಯಲ್ಲಿ ದನಗಾಯಿ ಅಜ್ಜಿಯೇ ರೂವಾರಿ.
ಶೃಂಗೇರಿ ತಾಲೂಕಿನ ಕಿಗ್ಗಾದ ಕಿತ್ತಲೆಮನೆ ನಿವಾಸಿ
ಗೌರಮ್ಮ ಎಂಬ ವೃದ್ದ ಅಜ್ಜಿಯ ಮಧ್ಯಸ್ಥಿಕೆಯಿಂದ 6 ಜನ ನಕ್ಸಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಇತ್ತೀಚೆಗೆ ಶರಣಾಗಿದ್ದಾರೆ.
ಅಜ್ಜಿ ಗೌರಮ್ಮ ಸರ್ಕಾರ ಮತ್ತು ನಕ್ಸಲರ ನಡುವೆ ಸಂಧಾನ ಕೊಂಡಿಯಾಗಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಈ ಸಂಧಾನ ಪ್ರಕ್ರಿಯೆಗೆ ಸುಮಾರು 72 ದಿನಗಳ ಸುದೀರ್ಘ ಪಯಣ ನಡೆಸಲಾಗಿದೆ. ವಿಕ್ರಂ ಗೌಡ ಎನ್ ಕೌಂಟರ್ ಗೂ ಮುನ್ನವೇ ಶರಣಾಗತಿ ಸಂಧಾನಕ್ಕೆ ಯತ್ನ ನಡೆದಿತ್ತು. ನಕ್ಸಲರ ಸಂಧಾನ ಪತ್ರವನ್ನು ಸರಕಾರಕ್ಕೆ ತಲುಪಿಸುವಲ್ಲಿ ಗೌರಮ್ಮ
ಮಹತ್ವದ ಪಾತ್ರವಹಿಸಿದ್ದಾರೆ.
20ರಿಂದ 30 ಕಿಲೋಮೀಟರ್ ನಡೆದುಕೊಂಡೇ ಸಂಪರ್ಕ ಸೇತುವೆಯಾಗಿ ಗೌರಮ್ಮ ಕೆಲಸ ಮಾಡಿದ್ದಾರೆ. ನಕ್ಸಲರು ಮತ್ತು ಸಂಧಾನಕಾರರ ನಡುವೆ ಸಂಪರ್ಕ ಸೇತುವೆಯಾಗಿ ಗೌರಮ್ಮ ಕೆಲಸ ಮಾಡಿದ್ದರು.
ನಕ್ಸಲರ ಪತ್ರ, ಸಂಧಾನ ಸಮಿತಿಯ ಪತ್ರವನ್ನು ಪರಸ್ಪರ ವಿನಿಮಯ ಮಾಡುವಲ್ಲಿ ಗೌರಮ್ಮ ದೊಡ್ಡ ಪಾತ್ರ ನಿರ್ವಹಿಸಿದ್ದರು.