ಇತ್ತೀಚಿನ ಸುದ್ದಿ
ತೀರ್ಥಹಳ್ಳಿ ಶ್ರೀ ರಾಮೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಹಾಲಿಗೆ ನಾಗರಾಜ್ ಆಯ್ಕೆ
09/12/2025, 09:26
ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ತೀರ್ಥಹಳ್ಳಿ ಶ್ರೀ ರಾಮೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಹಾಲಿಗೆ ನಾಗರಾಜ್ ಅವರನ್ನು ವ್ಯವಸ್ಥಾಪನಾ ಸಮಿತಿ ಸದಸ್ಯರು ಸರ್ವಾನುಮತದಿಂದ ಆಯ್ಕೆ ಮಾಡಿದರು.

ನಂತರ ಪಟ್ಟಣದ ಶ್ರೀ ರಾಮೇಶ್ವರ ಕಲ್ಯಾಣ ಮಂದಿರದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅಧ್ಯಕ್ಷ ಹಾಲಿಗೆ ನಾಗರಾಜ್ ಅವರು, ಡಿ. 19ರಿಂದ ಡಿ. 22ರ ವರೆಗೆ 4 ದಿನಗಳ ಕಾಲ ಶ್ರೀ ರಾಮೇಶ್ವರ ದೇವರ ಪುರಾಣ ಪ್ರಸಿದ್ಧ ಎಳ್ಳಮಾವಾಸೆ ಜಾತ್ರೆ ನಡೆಯುತ್ತಿದ್ದು, ಜಾತ್ರೆಯ ರಥದ ಒಂದು ಚಕ್ರ ಕುಂಬಾಗಿದ್ದರಿಂದ ಅದನ್ನು ಈಗಾಗಲೇ ಬದಲಾಯಿಸಲಾಗಿದೆ. ಜಾತ್ರೆ, ರಥೋತ್ಸವ ಸಾಂಗವಾಗಿ ನೆರವೇರುವಲ್ಲಿ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, ಜಾತ್ರೆಯ ಯಶಸ್ಸಿಗೆ ಸರ್ವರೂ ಸಹಕರಿಸುವಂತೆ ಕೋರಿದರು. ಹಾಗೆಯೇ ಶ್ರೀ ರಾಮೇಶ್ವರ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳ ಬಗ್ಗೆಯೂ ವ್ಯವಸ್ಥಾಪನಾ ಸಮಿತಿ ಎಲ್ಲಾ ಗಮನ ಕೊಡಲಿದೆ ಎಂದರು. ಈ ಸಂದರ್ಭದಲ್ಲಿ ಎಳ್ಳಮಾವಾಸ್ಸ್ಯೆ ಜಾತ್ರಾ ಮಹೋತ್ಸವದ ಆಹ್ವಾನ ಪತ್ರಿಕೆಯನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರು ವ್ಯವಸ್ಥಾಪನಾ ಸಮಿತಿ ನೂತನ ಅಧ್ಯಕ್ಷರನ್ನು ಅಭಿನಂದಿಸಿದರು. ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಎಚ್. ಆರ್.ಮಹಾಬಲ, ಪೂರ್ಣೇಶ್ ಮಂಡ್ಲೆರ್ , ರಥಬೀದಿ ಪ್ರದೀಪ್, ಶ್ರೀಮತಿ ತ್ರಿವೇಣಿ ಸುರೇಶ್, ಶ್ರೀಮತಿ ಜ್ಯೋತಿ ರವಿ ಹಾಗೂ ದೇವಸ್ಥಾನದ ಅರ್ಚಕರಾದ ರಾಕೇಶ್ ಭಟ್ ಉಪಸ್ಥಿತರಿದ್ದರು.












