4:56 PM Tuesday1 - April 2025
ಬ್ರೇಕಿಂಗ್ ನ್ಯೂಸ್
Delhi | ರಾಜ್ಯದ್ದು “ಜನ-ಕರ” ವಸೂಲಿ ಸರಕಾರ: ಕಾಂಗ್ರೆಸ್‌ ವಿರುದ್ಧ ಕೇಂದ್ರ ಸಚಿವ… Chikkamagaluru | ಕೆಮ್ಮಣ್ಣುಗುಂಡಿ ಸಮೀಪ ವಿದ್ಯುತ್ ಶಾಕ್ ನಿಂದ ಕಾಡಾನೆ ದಾರುಣ ಸಾವು ಕೂಡ್ಲಿಗಿ: ರಂಜಾನ್ ಸಾಮೂಹಿಕ ಪ್ರಾರ್ಥನೆಯಲ್ಲಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಭಾಗಿ ಭಾಗಿ Kolara | ಶ್ರೀನಿವಾಸಪುರದಲ್ಲಿ ಸಂಭ್ರಮ- ಸಡಗರದಲ್ಲಿ ಈದ್-ಉಲ್-ಫಿತರ್ ಆಚರಣೆ: ಸಾಮೂಹಿಕ ಪ್ರಾರ್ಥನೆ PDO | ಮಾದರಿ ಗ್ರಾಮ ಪಂಚಾಯತಿ ನಿರ್ಮಾಣದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ… Bangalore | ಸಬಲೀಕರಣ ಜತೆಗೆ ಮಹಿಳಾ ಸುರಕ್ಷತೆ: ‘ಬಿ.ಸೇಫ್’ ಸಮೀಕ್ಷಾ ವರದಿ ಬಿಡುಗಡೆ Bangalore | ಬೇಡಿಕೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಬ್ಯಾಂಕ್ ನಿವೃತ್ತರ ಒಕ್ಕೂಟಗಳ… MSIL | ಸರಕಾರಿ, ಖಾಸಗಿ ಉತ್ಪನ್ನಗಳ ಮಾರಾಟ, ಖರೀದಿಗೆ ನೆರವಾಗಲಿದೆ ಇ ಪೋರ್ಟಲ್‌ Chikkamagaluru | ಬಾಲ ಹಿಡಿದು ಎತ್ತಿದ ಉರಗ ತಜ್ಞರು: ನುಂಗಿದ್ದ 10 ಮೊಟ್ಟೆಗಳನ್ನು… Speaker Talking | ವಿಧಾನ ಸೌಧಕ್ಕೆ ವರ್ಣರಂಜಿತ ದೀಪಾಲಂಕಾರ; ಯಾವಾಗ ಉದ್ಘಾಟನೆ?; ಸ್ಪೀಕರ್…

ಇತ್ತೀಚಿನ ಸುದ್ದಿ

ಮೂತ್ರಜನಕಾಂಗದ ಸೋಂಕು: ಕಾರಣಗಳೇನು? ಇದನ್ನು ತಡೆಗಟ್ಟುವುದು ಹೇಗೆ?

05/02/2022, 11:22

ಮೂತ್ರ ಜನಕಾಂಗದ ಸೋಂಕು ಮಹಿಳೆಯರು ಮತ್ತು ಪುರುಷರನ್ನು ಕಾಡುವ ಸಾಮಾನ್ಯವಾದ ಸೊಂಕಾಗಿದೆ. ಆದರೆ ಹೆಚ್ಚಾಗಿ ಮಹಿಳೆಯರಲ್ಲಿ ಕಂಡು ಬರುತ್ತದೆ.
ಮೂತ್ರನಾಳ, ಮೂತ್ರಚೀಲ, ಅಥವಾ ಕಿಡ್ನಿ  ಹೀಗೆ ಬೇರೆ ಬೇರೆ ಭಾಗ ಸೊಂಕಿಗೆ ಒಳಗಾಗಬಹುದು.


ಕಾರಣಗಳು ಏನು?

ಇದು ಹೆಚ್ಚಾಗಿ ಬ್ಯಾಕ್ಟರಿಯ ಅಥವಾ ಫಂಗಸ್ನಿಂದಾಗಿ ಬರುವ ತೊಂದರೆಯಾಗಿದೆ. ಈ ಸೂಕ್ಷ್ಮಣು ಜೀವಿಗಳು ಮೂತ್ರ ನಳಿಕೆಯ ಮೂಲಕ ದೇಹವನ್ನು ಪ್ರವೇಶಿಸಿ ಸೋಂಕು ತಗಲುತ್ತದೆ.

ಮಧುಮೇಹ ಇರುವವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಇಂತಹ ಸೋಂಕು ಸುಲಭವಾಗಿ ತಗಲುತ್ತದೆ. ಕಿಡ್ನಿ ಸ್ಟೋನ್ 

ಪುರುಷರಲ್ಲಿ ದೊಡ್ಡದಾದ ಪ್ರೊಸ್ಟೆಟ್ ಗ್ರಂಥಿಯ ಸಮಸ್ಯೆಯಿಂದಾಗಿ ಉರಿಮೂತ್ರ ಉಂಟಾಗುತ್ತದೆ.

ಲಕ್ಷಣಗಳು ಏನು?

*ಸೊಂಟನೋವು

*ಮೇಲಿಂದ ಮೇಲೆ ಮೂತ್ರ ವಿಸರ್ಜನೆ

*ಮೂತ್ರ ವಿಸರ್ಜನೆ ಸಮಯದಲ್ಲಿ ನೋವು *ಉರಿಮೂತ್ರ

*ಮೂತ್ರದ ಬಣ್ಣ ಹಾಗೂ ವಾಸನೆಯಲ್ಲಿ ವ್ಯತ್ಯಾಸ *ಕಿಬ್ಬೊಟ್ಟೆ ನೋವು

*ಚಳಿ, ಜ್ವರ, ವಾಂತಿ

ಪತ್ತೆ ಹಚ್ಚುವ ವಿಧಾನಗಳು ಏನು?

ಯೂರಿನ್ ಅನಾಲಿಸಿಸ್ : ಇದರ ಮೂಲಕ ಸೊಂಕಿನ ತೀವ್ರತೆಯನ್ನು ಪತ್ತೆಹಚ್ಚಬಹುದು.

ಯೂರಿನ್ ಕಲ್ಚರ್ : ಇದರಿಂದ ಯಾವ ಸೂಕ್ಷ್ಮಣು ಜೀವಿಯಿಂದ ತೊಂದರೆ ಉಂಟಾಗಿದೆ ಎಂದು ತಿಳಿದುಕೊಳ್ಳಬಹುದು.

ಅಲ್ಟ್ರಾಸೌಂಡ್ : ಒಂದುವೇಳೆ  ಚಿಕಿತ್ಸೆ ನಂತರವೂ ಗುಣಮುಖವಾಗದೆ ಇದ್ದಲ್ಲಿ, ಇದರ ಮೂಲಕ ಮೂತ್ರ ನಾಳ ಅಥವಾ ಕೋಶದಲ್ಲಿಇರುವ ತೊಂದರೆಯನ್ನು ಪತ್ತೆ ಹಚ್ಚಬಹುದು.

ಸಿಸ್ಟೋಸ್ಕೋಪಿ: ಇದರ ಮೂಲಕ ಮೂತ್ರಕೋಶದ ಒಳಭಾಗವನ್ನು ವೀಕ್ಷಿಸಿ ಸೂಕ್ತ ಕಾರಣವನ್ನು ತಿಳಿದುಕೊಳ್ಳಬಹುದು.


ತಡೆಗಟ್ಟುವ ಕ್ರಮ ಹೇಗೆ?

*ಹೆಚ್ಚಿನ ಪ್ರಮಾಣದಲ್ಲಿ  ನೀರನ್ನು ಕುಡಿಯುವುದರಿಂದ ಬ್ಯಾಕ್ಟರಿಯ ಬೆಳೆಯದಂತೆ ತಡೆಯಬಹುದು.

*ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದು.

*ಮೂತ್ರವನ್ನು ತಡೆಹಿಡಿಯದೇ ಇರುವುದು

*ಮಧುಮೇಹ ನಿಯಂತ್ರಣ

* ಮಲಬದ್ಧತೆ ಆಗದಂತೆ ಎಚ್ಚರವಹಿಸುವುದು

*ವಿಟಮಿನ್ C ಜಾಸ್ತಿ ಹೊಂದಿರುವ ಆಹಾರ ಸೇವನೆ ಮಾಡುವುದರಿಂದ ಮೂತ್ರದ ಸೋಂಕು ಬಾರದಂತೆ ತಡೆಗಟ್ಟಬಹುದು.

*ಮೂತ್ರಜನಕಾಂಗದ ಸೋಂಕು ಉಂಟಾದ ತಕ್ಷಣ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದರಿಂದ ಸೋಂಕು ತೀವ್ರತೆಯನ್ನು ನಿಯಂತ್ರಿಸಬಹುದು.

ಡಾ. ಭವ್ಯ ಶೆಟ್ಟಿ
ಹೋಮಿಯೋಪತಿ ವೈದ್ಯರು
ಶ್ರೀ ಗುರು ಹೋಮಿಯೋಪತಿ

ಇತ್ತೀಚಿನ ಸುದ್ದಿ

ಜಾಹೀರಾತು