ಇತ್ತೀಚಿನ ಸುದ್ದಿ
ಮೂಡಿಗೆರೆ: ಕೊಕನ್ ಜ್ಯೂಸ್ ಮಾರಾಟ ನೆಪದಲ್ಲಿ ಗಾಂಜಾ ಸಾಗಾಟ; ಬೆಳ್ತಂಗಡಿಯ ಓರ್ವ ಸಹಿತ 3 ಮಂದಿ ಬಂಧನ
16/05/2022, 13:11
ಮೂಡಿಗೆರೆ(reporterkarnataka.com) : ಬೆಳ್ತಂಗಡಿ ತಾಲೂಕಿನ ಕಡುರುದ್ಯಾವರ ಗ್ರಾಮದ ಕುಕ್ಕಾವು ಮನೆಯೊಂದರಲ್ಲಿ ತಯಾರಿಸಿ ಮೂಡಿಗೆರೆ ಕಡೆ ಕ್ವಾಲಿಸ್ ಕಾರಿನಲ್ಲಿ ಕೊಕನ್ ಜ್ಯೂಸ್ ಮಾರಾಟ ಮಾಡುವ ನೆಪದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಗ್ಯಾಂಗ್ ನ್ನು ಬಂಧಿಸುವಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕಡುರುದ್ಯಾವರ ಗ್ರಾಮದ ಕುಕ್ಕಾವು ನಿವಾಸಿ ಅಬೂಬಕ್ಕರ್ ಸಿದ್ದಿಕ್(31) , ಮೂಡಿಗೆರೆಯ ಅಮೃತ್ ಬಿಜುವಳ್ಳಿ , ಮೂಡಿಗೆರೆ ಟೌನ್ ನಿವಾಸಿ ರಿಷಬ್ ರಾಜ್ ಎಂಬವರನ್ನು ಬಂಧಿಸಲಾಗಿದೆ.
ಬೆಳ್ತಂಗಡಿಯ ಅಬೂಬಕ್ಕರ್ ಸಿದ್ದಿಕ್ ಗೆ ಸೇರಿದ ಕ್ವಾಲಿಸ್ ಕಾರಿನಲ್ಲಿ 250 ಗ್ರಾಂ ಗಾಂಜಾ ಪತ್ತೆಯಾಗಿದೆ ಮತ್ತು ಒಂದು ಬೈಕ್ ಕೂಡ ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮೂವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.