ಇತ್ತೀಚಿನ ಸುದ್ದಿ
ಮೂಡಿಗೆರೆ: ಹುಲಿ ದಾಳಿಗೆ ಮತ್ತೊಂದು ಹಸು ಬಲಿ; 1 ತಿಂಗಳಲ್ಲಿ ಒಟ್ಟು 4 ಜಾನುವಾರು ಸಾವು
06/12/2021, 14:36
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮೂಡಿಗೆರೆ ತಾಲ್ಲೂಕಿನಲ್ಲಿ ಹುಲಿ ದಾಳಿಗೆ ಮತ್ತೊಂದು ಹಸು ಬಲಿಯಾಗಿದೆ.
ಮೂಡಿಗೆರೆ ತಾಲೂಕಿನ ಅರೆಕೊಡುಗೆ ಗ್ರಾಮದ ಯಶವಂತ್ ಅವರ ತೋಟದಲ್ಲಿ ಹುಲಿ ದಾಳಿಗೆ ಹಸು ಬಲಿಯಾಗಿದೆ.
ಕಳೆದ 1 ತಿಂಗಳಲ್ಲಿ ಹುಲಿಗೆ ಬಲಿಯಾದ ನಾಲ್ಕನೆ ಜಾನುವಾರು ಇದಾಗಿದೆ. ಮೇಯಲು ಹೋದ ಹಸು ಮನೆಗೆ ಮರಳಿದಾಗ ಶೋಧಿಸಿದಾಗ ಹಸುವಿನ ಕಳೇಬರ ಪತ್ತೆಯಾಗಿದೆ .
ಮೂಡಿಗೆರೆ ತಾಲ್ಲೂಕಿನ ಅನೇಕ ಪ್ರದೇಶಗಳಲ್ಲಿ ಆಗಾಗ್ಗೆ ಹುಲಿ ದಾಳಿ ನಡೆಸುತ್ತಿದ್ದು ಜನ ಆತಂಕಗೊಂಡಿದ್ದಾರೆ .