12:36 PM Friday31 - July 2026
ಬ್ರೇಕಿಂಗ್ ನ್ಯೂಸ್
ಮಂಗಳೂರು ಪೊಲೀಸರಿಂದ ಸುಮಾರು 82 ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶ: 157… ಕೇರಳದಲ್ಲಿ ಬೆಚ್ಚಿಬೀಳಿಸುವ ಘಟನೆ: ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದ ಶಿಕ್ಷಕಿಯರೇ ಡ್ರಗ್ಸ್ ಜಾಲದ ಡಾನ್‌ಗಳು!! ಅಸ್ಸಾಂ ಪ್ರವಾಹ ಕೊಂಚ ಇಳಿಮುಖ: 70ಕ್ಕೂ ಅಧಿಕ ಸಾವು; 4.45 ಲಕ್ಷಕ್ಕೂ ಹೆಚ್ಚು… Mysore | ಮಲೆಮಹದೇಶ್ವರ ಅಭಯಾರಣ್ಯದಲ್ಲಿ ಅರಣ್ಯ ಸಿಬ್ಬಂದಿ ಫೈರಿಂಗ್: ಕಾಡುಹಂದಿ ಬೇಟೆಗಾರನಿಗೆ ಬಿತ್ತು… Bangalore | ಕ್ಯಾಬ್‌ಗೆ ಕಾಯುತ್ತಿದ್ದ ಯುವತಿಯ ‘ರೇಟ್‌’ ಕೇಳಿದ ಕಾಮುಕ ಅರೆಸ್ಟ್ ಗಂಗಾಧರ ಪಾಂಗಾಳ ಕೊಲೆ ಪ್ರಕರಣ: ಸತೀಶ್ ಬೈಕಂಪಾಡಿ ಸೇರಿ 4 ಮಂದಿ ಆರೋಪಿಗಳಿಗೆ… Bangalore | ಅಗ್ನಿ ದುರಂತ: ಚಂದಾಪುರದಲ್ಲಿ ಹೊತ್ತಿ ಉರಿದ 4 ಖಾಸಗಿ ಬಸ್‌ಗಳು ಭಾರತದ ಇತಿಹಾಸದಲ್ಲೇ ಮಕ್ಕಳ ಮೇಲೆ ಈ ರೀತಿ ಹಲ್ಲೆ ನಡೆದಿಲ್ಲ: ರಾಜ್ಯಸಭೆಯಲ್ಲಿ ಪ್ರತಿಪಕ್ಷದ… ನೀಟ್ ಪ್ರತಿಭಟನೆ | ಹೋರಾಟಗಾರರಿಗೆ ಉಚಿತ ಆಹಾರ ಹಂಚಿದವನ ಬಂಧನ; ನನ್ನನ್ನು ಅಪಹರಿಸಿದ್ದರು:… *ಲಗೇಜ್​ ರೂಮ್​ನಲ್ಲಿ ಹೊಗೆ: ರಾಜ್‌ಕೋಟ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದ 194 ಮಂದಿ ಹೊತ್ತೊಯ್ಯುತ್ತಿದ್ದ…

ಇತ್ತೀಚಿನ ಸುದ್ದಿ

ಮೋದಿ – ಶಾ ಜೋಡಿ ದೇಶದಲ್ಲೇ ಮಾಡಿದೆ ಮೋಡಿ: ತೀರ್ಥಹಳ್ಳಿ ವಿಜಯೋತ್ಸವದಲ್ಲಿ ಆರಗ ಜ್ಞಾನೇಂದ್ರ

09/02/2025, 12:05

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ಅತ್ಯಂತ ಸಂತೋಷದ ಕ್ಷಣದಲ್ಲಿ ನಾವಿದ್ದೇವೆ. ಒಂದು ಕಾಲು ಶತಮಾನಕ್ಕಿಂತ ಹೆಚ್ಚು ದೆಹಲಿಯಲ್ಲಿ ಅಧಿಕಾರ ವಂಚಿತರಾಗಿದ್ದವು. ಜನಸಂಘ ಕಾಲದಲ್ಲಿ ಮೊದಲು ದೆಹಲಿಯಲ್ಲಿಯೇ ಅಧಿಕಾರ ಸಿಕ್ಕಿದ್ದು. ಆಗಿನ ಸಂದರ್ಭದಲ್ಲಿ ಎಲ್ಲಿಯೂ ಅಧಿಕಾರ ಇಲ್ಲದಿದ್ದರೂ ದೆಹಲಿಯಲ್ಲಿ ಅಧಿಕಾರ ಇದೆ ಎಂದು ನಾವೆಲ್ಲರೂ ಬೀಗುತ್ತಿದ್ದೆವು. ಅಲ್ಲಿನ ಅಧಿಕಾರವನ್ನು ಉಪಯೋಗಿಸಿಕೊಂಡು ಇಡೀ ದೇಶದಲ್ಲೇ ಬಿಜೆಪಿ ಗೆಲುವು ಕಂಡಿತ್ತು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ತೀರ್ಥಹಳ್ಳಿಯ ಕೊಪ್ಪ ಸರ್ಕಲ್‌ನಲ್ಲಿ ದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ 27 ವರ್ಷಗಳ ನಂತರ ಬಿಜೆಪಿ ಅಧಿಕಾರಕ್ಕೆ ಏರಿದ ಕಾರಣದಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿ ನಂತರ ಮಾತನಾಡಿದರು.
ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಜೋಡಿ ಬಹಳ ದೊಡ್ಡದಾದ ಮೋಡಿಯನ್ನ ಮಾಡಿ ದೇಶದಲ್ಲೇ ಗೆಲ್ಲುವಂತಹ ಪ್ರಯತ್ನ ಮಾಡಿದೆ. ಅರವಿಂದ ಕೇಜ್ರಿವಾಲ್ ಎಂಬ ಐಎಎಸ್ ಅಧಿಕಾರಿ ಬಹಳ ದೊಡ್ಡ ಭ್ರಮೆಯನ್ನ ದೇಶದಲ್ಲಿ ಹುಟ್ಟು ಹಾಕಿದ್ದರು. ಎಲ್ಲಾ ರಾಷ್ಟ್ರೀಯ ಪಕ್ಷಗಳು ಭ್ರಷ್ಟರು, ನಾವು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತೇವೆ ಎಂದು ಹೇಳಿದ್ದರು. ಅದನ್ನ ಹೇಳಿಯೇ ಹೇಳಿಯೇ ಪಕ್ಷ ಕಟ್ಟುವುದರ ಒಳಗಾಗಿ ಅಧಿಕಾರದಿಂದಲೇ ಇಳಿದರು ಎಂದು ಆಪ್ ಪಕ್ಷವನ್ನು ಟೀಕಿಸಿದರು.
ಅಲ್ಪನಿಗೆ ಐಶ್ವರ್ಯ ಬಂದರೆ ಚಂದ್ರನಿಗೆ ಕೊಡೆ ಹಿಡಿದರು ಎಂಬ ಗಾದೆ ಮಾತಿದೆ. ಇವರ ಪರಿಸ್ಥಿತಿಯು ಹಾಗೆಯೇ ಆಯಿತು. ಏಕಾಏಕಿ ದೆಹಲಿ, ಪಂಜಾಬ್ ರಾಜ್ಯಗಳು ಅವರ ಪಾಲಿಗೆ ಸಿಕ್ಕವು. ಈ ಚುನಾವಣೆ ಬಿಜೆಪಿ ಪಾಲಿಗೆ ಪ್ರತಿಷ್ಠೆಯ ಚುನಾವಣೆಯಾಗಿತ್ತು. ಮಹಾರಾಷ್ಟ್ರ ಹರಿಯಾಣದ ಚುನಾವಣೆಯ ಗೆಲುವು ದೆಹಲಿಗೆ ಬಿಜೆಪಿ ಕಾರ್ಯಕರ್ತರಿಗೆ ಹೊಸ ಹುಮ್ಮಸ್ಸು ತಂದು ಕೊಟ್ಟಿತ್ತು. ಇದರಿಂದ ದೆಹಲಿ ಕೂಡ ಬಿಜೆಪಿ ಪಕ್ಷದ ಪಾಲಾಗಿದೆ ಎಂದು ಸಂಭ್ರಮ ಪಟ್ಟರು.
ಕಳೆದ ಹತ್ತು ವರ್ಷಗಳಿಂದ ಅರವಿಂದ್ ಕೇಜ್ರಿವಾಲ್ ದೆಹಲಿಯನ್ನ ಬದಲಾವಣೆ ಮಾಡುತ್ತೇನೆ ಎಂದು ಹೇಳುತ್ತಾ ಬಂದಿದ್ದಾರೆ, ಆದರೆ ಯಾವುದೇ ಅಭಿವೃದ್ಧಿ ಸಹ ಆಗಿಲ್ಲ, ಅವರು ಕೊಟ್ಟಂತಹ ಗ್ಯಾರಂಟಿಯ ಭ್ರಮೆಯಿಂದ ಜನರು ಮತ ನೀಡುತ್ತಿದ್ದರು. ಯಮುನಾ ನದಿಗೆ ಹರಿಯಾಣ ವಿಷ ಹಾಕಿದೆ ಎಂದು ಸುಳ್ಳು ಹೇಳಿದ್ದರು, ಸುಳ್ಳು ಹೇಳಿ ಚುನಾವಣೆ ಗೆಲ್ಲಬಹುದೆಂದು ಅವರು ಭಾವಿಸಿದ್ದರು. ಆದರೆ ಅದೇ ಈಗ ಅವರಿಗೆ ತಿರುಗು ಬಾಣವಾಗಿದೆ ಎಂದರು.
ಈ ದೇಶವನ್ನು ಅರವತ್ತರಿಂದ ಎಪ್ಪತ್ತು ವರ್ಷಗಳ ಕಾಲ ಆಳಿದ್ದಂತಹ, ನನ್ನ ನಂತರ ಯಾರಿಲ್ಲ ನನಗೆ ಸೋಲೆ ಇಲ್ಲ ಎಂದು ಬೀಗುತ್ತಿದ್ದ ಕಾಂಗ್ರೆಸ್ ಪಕ್ಷ ಈ ಚುನಾವಣೆಯಲ್ಲಿ ಶೂನ್ಯ ಸಂಪಾದನೆ ಮಾಡಿದೆ.
ಒಂದು ಸ್ಥಾನವನ್ನು ಗೆಲ್ಲಲು ಆಗದಂತಹ ನಾಚಿಕೆಗೇಡಿನ ಸಂಗತಿ ಇವತ್ತು ದೇಶದ ಎದುರುಗಡೆಗೆ ನಿಂತಿದೆ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು