8:41 PM Friday4 - April 2025
ಬ್ರೇಕಿಂಗ್ ನ್ಯೂಸ್
Bangaluru | ಚಿಲಿ ಅಧ್ಯಕ್ಷ ಗ್ಯಾಬ್ರಿಯಲ್ ಬೋರಿಕ್ ಫಾಂಟ್ ಬೆಂಗಳೂರಿಗೆ ಭೇಟಿ: 2… Mangaluru | ಸ್ಪೆಲ್‌ ಬೀ ವಿಜ್‌ ನ್ಯಾಶನಲ್‌ ಸ್ಪೆಲ್‌ ಬೀ: ಮಂಗಳೂರಿನ ಸಿಯೆಲ್‌… Bangaluru | ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರು ಜಲ ಮಂಡಳಿಯಿಂದ ವಿನೂತನ ಯೋಜನೆ:… Good News | ರೈತರಿಗೆ 7 ವರ್ಷಗಳ ನಂತರ ಮತ್ತೆ ಸೂಕ್ಷ್ಮ ನೀರಾವರಿಗೆ… Chikkamagaluru | ಕಾಫಿನಾಡಿನಲ್ಲಿ ಭಾರೀ ಮಳೆ: ಕೊಟ್ಟಿಗೆಹಾರ, ಬಣಕಲ್, ಬಾಳೂರು, ಚಾರ್ಮಾಡಿಯಲ್ಲಿ ವರ್ಷಧಾರೆ Solar power | ದೇಶದ 2,249 ರೈಲು ನಿಲ್ದಾಣಗಳಲ್ಲಿ 209 ಮೆಗಾವ್ಯಾಟ್‌ ಸೌರ… EX CM | ವಕ್ಸ್ ಆಸ್ತಿ ಕಬಳಿಸಿರುವುದನ್ನು ಮುಚ್ಚಿ ಹಾಕಲು ಕಾಂಗ್ರೆಸ್‌ ತಿದ್ದುಪಡಿ… Chikkamagaluru | ಅನ್ನದಾತ ಆತ್ಮಹತ್ಯೆ: ಕಿರುಕುಳ ನೀಡಿದ ಬ್ಯಾಂಕ್ ಎದುರು ರೈತನ ಪಾರ್ಥಿವ… Mangaluru | ಜಾಮರ್ ಸಮಸ್ಯೆ ಬಗೆಹರಿಸದಿದ್ದರೆ ಜೈಲಿನೊಳಗೆ ನುಗ್ಗಿ ಕಿತ್ತು ಬಿಸಾಕ ಬೇಕಾಗುತ್ತದೆ:… Delhi | ರಾಜ್ಯದ್ದು “ಜನ-ಕರ” ವಸೂಲಿ ಸರಕಾರ: ಕಾಂಗ್ರೆಸ್‌ ವಿರುದ್ಧ ಕೇಂದ್ರ ಸಚಿವ…

ಇತ್ತೀಚಿನ ಸುದ್ದಿ

ಮೊಡಂಕಾಪು ಕಾರ್ಮೆಲ್ ಕಾಲೇಜಿನಲ್ಲಿ ‘ಗುರಿ ನಿರ್ಧಾರ ‘ ಶೈಕ್ಷಣಿಕ ಕಾರ್ಯಕ್ರಮ

10/03/2024, 21:46

ಬಂಟ್ವಾಳ(reporterkarnataka.com): ಮೊಡಂಕಾಪು ಕಾರ್ಮೆಲ್ ಕಾಲೇಜು ರಾಷ್ಟೀಯ ಸೇವಾ ಯೋಜನಾ ಘಟಕ ಹಾಗೂ ಯೂತ್ ರೆಡ್ ಕ್ರಾಸ್ ಸಹಭಾಗಿತ್ವದಲ್ಲಿ ಸ್ವಯಂಸೇವಕರಿಗೆ ‘ಗುರಿ ನಿರ್ಧಾರ ‘ ಶೈಕ್ಷಣಿಕ ಕಾರ್ಯಕ್ರಮ ಆಯೋಜಿಸಲಾಯಿತು.


‘ಯು ಮ್ಯಾಟರ್ ‘ ಸಮಾಲೋಚನೆ ಹಾಗೂ ತರಬೇತಿ ಸಂಸ್ಥೆಯವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಲುಜಿನ ಮಿರಾಂಡ (ನಿರ್ದೇಶಕರು ಯು ಮ್ಯಾಟರ್), ಪ್ರೆಸಿಲ್ಲ ಡಿಸಿಲ್ವಾ, (ಪಾರುಪಾತ್ಯಾಗರಾರು ಯು ಮ್ಯಾಟರ್), ಡಾ. ಮೀನಾ ಲೋಬೊ, (ಪಾರುಪಾತ್ಯಾಗರಾರು ಯು ಮ್ಯಾಟರ್),ಸಿಸ್ಟರ್.ಡಾ.ಲತಾ ಫೆರ್ನಾಂಡಿಸ್ ಎ.ಸಿ. (ಪ್ರಾಂಶುಪಾಲರು ಕಾರ್ಮೆಲ್ ಕಾಲೇಜು, ಮೊಡಂಕಾಪು), ವಿಜೇತಾ (ರಾಷ್ಟೀಯಸೇವಾ ಯೋಜನಾಧಿಕಾರಿ), ಸುಚಿಕಾ (ಸಂಯೋಜಕರು ಯೂತ್ ರೆಡ್ ಕ್ರಾಸ್) ಉಪಸ್ಥಿತರಿದ್ದರು.
ಡಾ. ಮೀನಾ ಲೋಬೊ ಸ್ವಯಂ ಸೇವಕರಿಗೆ ಜೀವನದಲ್ಲಿ ಗುರಿ ಮುಖ್ಯ. ಗುರಿಯೊಂದಿಗೆ ನಡೆದಾಗ ಮಾತ್ರ ನಾವು ಜೀವನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಎಂಬ ಮಾಹಿತಿ ನೀಡಿದರು.
ಮುಂದಿನ ಕಾರ್ಯಕ್ರಮವನ್ನು ಪ್ರೆಸಿಲ್ಲ ಡಿಸಿಲ್ವಾ ನಡೆಸಿಕೊಟ್ಟರು. ಸಮಾಜದೊಂದಿಗಿನ ನಮ್ಮ ಸಂಬಂಧ ಬಹಳ ಅಗತ್ಯ. ಮತೋರ್ವ ಸಂಪನ್ಮೂಲ ವ್ಯಕ್ತಿ ಸ್ವಪ್ರೀತಿ ಎಂಬ ವಿಷಯದ ಬಗ್ಗೆ ಸ್ವಯಂ ಸೇವಕರಿಗೆ ಮಾಹಿತಿ ನೀಡಿದರು. ಝೋಹಾರ ಕಾರ್ಯಕ್ರಮದ ನಿರೂಪಣೆ ಮಾಡಿದರು. ಜೊಸ್ವಿಟ ಸ್ವಾಗತಿಸಿ,ಪ್ರೇಕ್ಷಾ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು