ಇತ್ತೀಚಿನ ಸುದ್ದಿ
ವರ್ಷದ ಮೊದಲ ‘ರಿಂಗ್ ಆಫ್ ಫೈಯರ್’ ಸೂರ್ಯ ಗ್ರಹಣ ಇಂದು: ಇದು ಕರ್ನಾಟಕದಲ್ಲಿ ಕಾಣ್ಸೋಲ್ಲ, ಮತ್ತೆ ಎಲ್ಲೆಲ್ಲಿ ಕಾಣ್ಸುತ್ತೆ? ಓದಿ ನೋಡಿ
10/06/2021, 08:19
ನವದೆಹಲಿ(reporterkarnataka news): ‘ರಿಂಗ್ ಆಫ್ ಫೈಯರ್’ ಎಂದು ಕರೆಯಲ್ಪಡುವ ಈ ವರ್ಷದ ಮೊದಲ ಸೂರ್ಯ ಗ್ರಹಣ ಜೂನ್ 10ರಂದು ಗೋಚರವಾಗಲಿದೆ. ಇದು 2021ರ ಮೊದಲ ಸೂರ್ಯಗ್ರಹಣ ಆಗಿದೆ. ಆದರೆ ಇದು ಕರ್ನಾಟಕದಲ್ಲಿ ಗೋಚರಿಸುವುದಿಲ್ಲ.
ಇದು ಭಾರತದ ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶದಲ್ಲಿ ಭಾಗಶಃ ಗೋಚರಿಸಲಿದೆ. ಯುರೋಪ್, ರಷ್ಯಾ, ಉತ್ತರ ಅಮೆರಿಕ ಮತ್ತು ಕೆನಡಾದಲ್ಲಿ ಪೂರ್ಣ ಗೋಚರಿಸಲಿದೆ.
ಸೂರ್ಯಗ್ರಹಣ ಒಂದು ಪ್ರಾಕೃತಿಕ ವಿದ್ಯಮಾನವಾಗಿದ್ದು, ವಿಜ್ಞಾನದ ಪ್ರಕಾರ ಚಂದ್ರ ಮತ್ತು ಸೂರ್ಯನ ನಡುವೆ ಭೂಮಿ ಹಾದು ಹೋದಾಗ ಸಂಭವಿಸುತ್ತದೆ. ಹಾಗಾಗಿ
ಗ್ರಹಣ ಮನುಷ್ಯ ಸಮೂಹದ ಮೇಲೆ ಯಾವುದೇ ಪ್ರಭಾವ, ಪರಿಣಾಮ ಬೀರಲು ಸಾಧ್ಯವಿಲ್ಲ. ಗ್ರಹಣ ಸಂದರ್ಭದಲ್ಲಿ ಮೂಢ ನಂಬಿಕೆಗಳಿಗೆ ಜೋತು ಬೀಳುವುದು ಬೇಡ ಎಂದು ವಿಜ್ಞಾನ ಹೇಳುತ್ತದೆ.