ಇತ್ತೀಚಿನ ಸುದ್ದಿ
ವೀಕೆಂಡ್ ನಡೆದ ಘಟನೆ: ಶೋರೂಂನಿಂದ ಐಪೋನ್ ಸಹಿತ 70 ಲಕ್ಷ ಮೌಲ್ಯದ ಮೊಬೈಲ್ ಕಳ್ಳತನ
05/07/2021, 15:45

ಮಂಗಳೂರು(reporterkarnataa news): ನಗರದ ಬಲ್ಮಠದಲ್ಲಿರುವ ಮೊಬೈಲ್ ಶೋ ರೂಂನಿಂದ ಐಪೋನ್ ಸೇರಿದಂತೆ ಸುಮಾರು 70 ಲಕ್ಷ ರೂ.ಮೌಲ್ಯದ ಮೊಬೈಲ್ ಗಳನ್ನು ಕಳ್ಳತನ ಮಾಡಲಾಗಿದೆ. ಕಳ್ಳತನ ಘಟನೆ ಸೋಮವಾರ ಬೆಳಕಿಗೆ ಬಂದಿದೆ.
ನಗರದ ಬಲ್ಮಠದಲ್ಲಿರುವ ಮೊಬೈಲ್ ಶೋರೂಂವೊಂದರಿಂದ ಕಳವು ಮಾಡಲಾಗಿದೆ. ಐಪೋನ್ ಸೇರಿದಂತೆ ಸುಮಾರು 70 ಲಕ್ಷ ರೂ.ಮೌಲ್ಯದ ಮೊಬೈಲ್ ಗಳನ್ನು ಕಳ್ಳರು ಎಗರಿಸಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.