7:24 PM Saturday11 - October 2025
ಬ್ರೇಕಿಂಗ್ ನ್ಯೂಸ್
ಮಡಿಕೇರಿಯಲ್ಲಿ ಡಿಜಿಟಲ್ ಸ್ಟುಡಿಯೋ ಕಳ್ಳತನ ಪ್ರಕರಣ: ಐವರು ಚೋರರ ಬಂಧನ ಆಶ್ರಮ ಶಾಲೆಯಲ್ಲಿ ಬೆಂಕಿ ಅವಘಡ: ಮೃತ ವಿದ್ಯಾರ್ಥಿ ಪುಷ್ಪಕ್ ಕುಟುಂಬಕ್ಕೆ 5 ಲಕ್ಷ… ಕಾವೇರಿ ಸಂಕ್ರಮಣ: ಅ. 17ರಂದು ಕೊಡಗು ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ; ಮಧ್ಯಾಹ್ನ 1.44ಕ್ಕೆ… 2005ರ ಪೂರ್ವ ಅರಣ್ಯಭೂಮಿಯಲ್ಲಿ ಬದುಕು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕು: ಮುಖ್ಯಮಂತ್ರಿ ಸಿದ್ದರಾಮಯ್ಯ ‘ನೀರಿದ್ದರೆ ನಾಳೆ – ವಾಟರ್ ಇಸ್ ಫ್ಯೂಚರ್’: ಯೋಜನೆಗೆ ಚಾಲನೆ’: ಬರುವ ಡಿಸೆಂಬರ್… ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ Chikkamagaluru | ಮೂಡಿಗೆರೆ: ‘PRESS’ ಎಂದು ಬರೆದ ಬೈಕ್ ನಲ್ಲಿ ಶ್ರೀಗಂಧ ಕಳ್ಳಸಾಗಣೆ;… ಸೋಮವಾರಪೇಟೆ ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೋಕಾಯುಕ್ತರ ಬಲೆಗೆ: 25 ಸಾವಿರ ಲಂಚ… ಇಂಗಾಲಮುಕ್ತ ಸರಕು ಸಾಗಣೆ ಪ್ರಧಾನಿ ಮೋದಿ ಅವರ ಕನಸು: ಕೇಂದ್ರ ಸಚಿವ ಕುಮಾರಸ್ವಾಮಿ ಮೈಸೂರು ಧರ್ಮಪ್ರಾಂತ್ಯ ಹೊಸ ಧರ್ಮಾಧ್ಯಕ್ಷರಾಗಿ ಡಾ. ಫ್ರಾನ್ಸಿಸ್ ಸೆರಾವೊ: ಧಾರ್ಮಿಕ ವಿಧಿ ವಿಧಾನ…

ಇತ್ತೀಚಿನ ಸುದ್ದಿ

ಜರ್ಮನಿಯ ನಾರ್ತ್ ರೈನ್-ವೆಸ್ಟ್‌ಫಾಲಿಯಾ, ಡಸೆಲ್ಡಾರ್ಫ್‌ಗೆ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ಭೇಟಿ: ಕೌಶಲ್ಯ ವಿನಿಯಮ ಬಗ್ಗೆ ಒಪ್ಪಂದ

02/07/2025, 19:57

ಡಸೆಲ್ಡಾರ್ಫ್ (reporter Karnataka.com): ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಆರ್‌. ಪಾಟೀಲ್ ನೇತೃತ್ವದ ನಿಯೋಗ ಜರ್ಮನಿ ಪ್ರವಾಸ ಕೈಗೊಂಡಿದೆ.
ಸಚಿವರ ನೇತೃತ್ವದ ನಿಯೋಗವು, ಜರ್ಮನಿಯ ನಾರ್ತ್ ರೈನ್-ವೆಸ್ಟ್‌ಫಾಲಿಯಾ (ಎನ್‌ಆರ್‌ಡಬ್ಲ್ಯೂ), ಡಸೆಲ್ಡಾರ್ಫ್‌ ಸೇರಿದಂತೆ ಜರ್ಮನಿಯ ಪ್ರಮುಖ ಪ್ರದೇಶಗಳಿಗೆ ಭೇಟಿ ನೀಡಿ, ಕೌಶಲ್ಯಾಭಿವೃದ್ಧಿ ಹಾಗೂ ಕೌಶಲ್ಯ ವಿನಿಮಯ, ಉದ್ಯೋಗವಾಕಾಶ ಸೇರಿದಂತೆ ಹಲವಾರು ವಿಷಯಗಳ ಕುರಿತು ಅಲ್ಲಿನ ನಿಯೋಗಮಟ್ಟದ ಸಮಾಲೋಚನೆ ಸಭೆ ನಡೆಸಲಿದೆ.

ಯಾಂತ್ರೀಕೃತ ಕೈಗಾರಿಕೆ, ಮೆಕಾಟ್ರಾನಿಕ್ಸ್ ಮತ್ತು ಸ್ಮಾರ್ಟ್ ಉತ್ಪಾದನೆಯಂತಹ ಕ್ಷೇತ್ರಗಳಲ್ಲಿ ಅಪ್ರೆಂಟಿಸ್‌ಶಿಪ್, ಕೌಶಲ್ಯ ಸಹಯೋಗದ ಕುರಿತು ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ನೇತೃತ್ವದ ನಿಯೋಗ ಅಧ್ಯಯನ ನಡೆಸಿ ಕೆಲವು ಮಹತ್ವದ ಒಪ್ಪಂದ ಕೂಡ ಮಾಡಿಕೊಳ್ಳುವ ನಿರೀಕ್ಷೆ ಇದೆ.

*ಷ್ನೇಯ್ಡರ್ ಎಲೆಕ್ಟ್ರಿಕ್, ಡಸೆಲ್ಡಾರ್ಫ್:*
ಬೆಂಗಳೂರಿನ ಜಿಟಿಟಿಸಿಯ ವ್ಯವಸ್ಥಾಪಕ ನಿರ್ದೇಶಕರು ವೈ.ಕೆ.ದಿನೇಶ್ ಕುಮಾರ್
ಮತ್ತು ಹಿರಿಯ ಅಧಿಕಾರಿಗಳ ನಿಯೋಗ ಡಸೆಲ್ಡಾರ್ಫ್‌ನಲ್ಲಿ ಜರ್ಮನ್ ನರ್ಸಿಂಗ್‌ ಅಪ್ರೆಂಟಿಶಿಪ್‌, ಕರ್ನಾಟಕ ಮತ್ತು ಎನ್‌ಆರ್‌ಡಬ್ಲ್ಯೂ ನಡುವೆ ರಚನಾತ್ಮಕ ಕೌಶಲ್ಯ ವಲಸೆ ಮಾರ್ಗವನ್ನು ರೂಪಿಸುವ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಲಾಯಿತು.
ಜಿಟಿಟಿಸಿಯ ತಾಂತ್ರಿಕ ಪಠ್ಯಕ್ರಮವನ್ನು ಜರ್ಮನ್ ತರಬೇತಿ ಮಾನದಂಡಗಳೊಂದಿಗೆ ಅಳವಡಿಸಿಕೊಳ್ಳುವುದು, ಕರ್ನಾಟಕದ ಯುವಕರಿಗೆ ರಚನಾತ್ಮಕ ಪೂರ್ವ-ನಿರ್ಗಮನ ತರಬೇತಿಯನ್ನು ಪ್ರಾಯೋಗಿಕವಾಗಿ ನೀಡುವ ಬಗ್ಗೆ ಅಧಿಕಾರಿಗಳು ಸಮಾಲೋಚನೆ ನಡೆಸಿದರು.

*ಸನಾ ಕ್ಲಿನಿಕೆನ್:*
ಕರ್ನಾಟಕದ ತರಬೇತಿ ಪಡೆದ ನರ್ಸಿಂಗ್ ವೃತ್ತಿಪರರಿಗೆ ಪ್ಫ್ಲೆಜ್ ಆಸ್‌ಬಿಲ್ಡಂಗ್ (ನರ್ಸಿಂಗ್ ಅಪ್ರೆಂಟಿಸ್‌ಶಿಪ್‌ಗಳು) ಮತ್ತು ನೈತಿಕ ವಲಸೆ ಚೌಕಟ್ಟುಗಳಿಗೆ ಮಾರ್ಗಗಳನ್ನು ಅನ್ವೇಷಿಸಲು ಸಚಿವರು ಆರೋಗ್ಯ ಕ್ಷೇತ್ರದ ಪ್ರತಿನಿಧಿಗಳನ್ನು ಸಹ ಭೇಟಿಯಾದರು.
ಕರ್ನಾಟಕ ಮತ್ತು ನಾರ್ತ್ ರೈನ್-ವೆಸ್ಟ್‌ಫಾಲಿಯಾ ನಡುವೆ ಸುರಕ್ಷಿತ, ವಿಶ್ವಾಸಾರ್ಹ ಮತ್ತು ದೀರ್ಘಕಾಲೀನ ಕೌಶಲ್ಯಣ ಪಾಲುದಾರಿಕೆ, ಕರ್ನಾಟಕದ ಸಾವಿರಾರು ಯುವಕರು ಜರ್ಮನಿಯಲ್ಲಿ ಉತ್ತಮ ಗುಣಮಟ್ಟದ ವೃತ್ತಿಪರ ತರಬೇತಿ ಮತ್ತು ಉದ್ಯೋಗಾವಕಾಶಗಳನ್ನು ಪಡೆಯಲು ಅನುವು ಮಾಡಿಕೊಡುವ ಕುರಿತು ಡಾ.‌ ಪಾಟೀಲ್‌ ಅಲ್ಲಿನ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು