ಇತ್ತೀಚಿನ ಸುದ್ದಿ
ಮುಂಬೈ ಭಾರತ್ ಬ್ಯಾಂಕ್ ಕೇಂದ್ರ ಕಚೇರಿಗೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಭೇಟಿ
10/04/2024, 20:52
ಮಂಬಯಿ(reporterkarnataka.com): ಮುಂಬೈ ಗೋರೆಗಾಂವ್‌ನಲ್ಲಿರುವ ಭಾರತ್ ಬ್ಯಾಂಕ್‌ನ ಕೇಂದ್ರ ಕಚೇರಿಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಭೇಟಿ ನೀಡಿದರು.
ಮಂಗಳೂರು ಮಹಾನಗರ ಪಾಲಿಕೆ ಪ್ರತಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ, ಸಂತೋಷ್ ಜನಾರ್ದನ ಪೂಜಾರಿ, ಭಾರತ್ ಬ್ಯಾಂಕ್ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣ, ನಿರ್ದೇಶಕರು, ಆಡಳಿತ ನಿರ್ದೇಶಕರು ಬ್ಯಾಂಕ್ ಸಿಬ್ಬಂದಿ, ಗಣ್ಯರು ಮತ್ತು ಸಮಾಜ ಬಾಂಧವರು ಉಪಸ್ಥಿತರಿದ್ದರು.