ಇತ್ತೀಚಿನ ಸುದ್ದಿ
ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ: ವಿವಿಧ ಮಹಿಳಾ ಸ್ವಸಹಾಯ ಸಂಘಗಳಿಂದ ಯಾದಗಿರಿ ಎಸ್ಪಿಗೆ ದೂರ
27/01/2025, 16:21
ಯಾದಗಿರಿ(reporterkarnataka.com): ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದಲ್ಲಿ ಮೈಕ್ರೋ ಫೈನಾನ್ಸ್ ಕಂಪೆನಿಯವರಿಂದ ಒಂದು-ಎರಡು ಕಂತು ಹಣ ಕಟ್ಟಲು ವಿಳಂಬವಾಗಿದ್ದಕ್ಕೆ ವಿವಿಧ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಇನ್ನಿಲ್ಲದ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಯಾದಗಿರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ನಮಗೆ ಮಾನಸಿಕ ಹಿಂಸೆ ನೀಡುತ್ತಿದ್ದು ಇದರಿಂದ ಸಂಕಷ್ಟ ಎದುರಾಗಿರುವ ನಮಗೆ ಸ್ವಲ್ಪ ಕಾಲಾವಕಾಶ ಒದಗಿಸಿಕೊಡುವುದರ ಜೊತೆಗೆ ತೊಂದರೆ ಕೊಡುತ್ತಿರುವ ಕಂಪನಿಗಳ ವಿರುದ್ಧ ಕ್ರಮಕೈಗೊಳ್ಳಿ ಎಂದು ದೂರು ನೀಡಿದ್ದಾರೆ.
ಗ್ರಾಮೀಣ ಕೂಟ ಮೈಕ್ರೋ ಫೈನಾನ್ಸ್, ಆಶೀರ್ವಾದ ಮೈಕ್ರೋ ಫೈನಾನ್ಸ್ , ಗ್ರಾಮ ಶಕ್ತಿ ಮೈಕ್ರೋ ಫೈನಾನ್ಸ್, ಧರ್ಮಸ್ಥಳ ಗ್ರಾಮಾಬಿವೃದ್ಧಿ ಸಂಘ,ಸಮಸ್ತ ಮೈಕ್ರೋ ಫೈನಾನ್ಸ್, ನವಚೈತನ್ಯ ಮೈಕ್ರೋ ಫೈನಾನ್ಸ್, ಆರ್.ಬಿ. ಎಲ್. ಮೈಕ್ರೋ ಫೈನಾನ್ಸ್, ಸೇರಿದಂತೆ ಒಟ್ಟು 8 ಮೈಕ್ರೋ ಫೈನಾನ್ಸ್ ಕಂಪೆನಿಯವರಿಂದ ಸಾಲ ಪಡೆದು ನಾವು ಕಷ್ಟ ಅನುಭವಿಸುತ್ತಿದ್ದೆವೇ ಎಂದಿದ್ದಾರೆ.
ಪ್ರತಿವಾರ ಹಾಗೂ ಕೆಲವು ಸಂಘಗಳಿಗೆ ತಿಂಗಳಿಗೆ ನಿಯಮಿತವಾಗಿ ಸಾಲ ಬಡ್ಡಿ ಕಂತು ಕಟ್ಟುತ್ತಾ ಬರುತ್ತಿದ್ದೇವೆ. ಆದರೆ ಯಾವಾಗಲಾದರೂ ಅನಿವಾರ್ಯ ಸಂದರ್ಭದಲ್ಲಿ ಒಂದು ಕಂತು ಇಲ್ಲವೇ ಎರಡು ಮೂರು ಕಂತುಗಳ ಹಣ ಕಟ್ಟಲು ವಿಳಂಬವಾದರೆ ಈ ಸಂಘದವರು ಇನ್ನಿಲ್ಲದ ಕಿರುಕುಳ ನೀಡುತ್ತಿದ್ದಾರೆ.
ನೆರವಾಗಿ ರಾತ್ರಿವೇಳೆ ಅಂದರೆ ಸಂಜೆ 6 ಗಂಟೆಗೆ ನಂತರ 8-9 ಗಂಟೆ ಹೊತ್ತಿನಲ್ಲಿ ಸುಮಾರು 7-8 ಜನ ಸಿಬ್ಬಂದಿಗಳು ಮನೆಗೆ ಬಂದು ತಕ್ಷಣ ಹಣ ಕಟ್ಟಬೇಕು ಎಂದು ಒತ್ತಾಯ ಮಾಡುತ್ತಾರೆ.
ಇಲ್ಲ ಸರ್ ಸ್ವಲ್ಪ ಸಮಸ್ಯೆ ಇದೆ ಸಮಯ ಕೊಡಿ ಎಂದರೆ ಹಗುರವಾಗಿ ಮಾತನಾಡುವುದು ಹಾಗೂ ಏಕವಚನ ಮಾತನಾಡುವುದು ಮಾಡುತ್ತಿದ್ದಾರೆ. ಮೊದಲೇ ಕಡುಬಡವರಾಗಿರುವ ನಾವು ನಿತ್ಯ ಕೂಲಿ ಇಲ್ಲವೇ ಸಣ್ಣ ಪುಟ್ಟ ಬೀದಿಬದಿ ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದೆವೇ ಸ್ವಲ್ಪ ವಿಳಂಬವಾಗಿದ್ದಕ್ಕೆ ಇನ್ನಿಲ್ಲದ ಕಿರುಕುಳ ನೀಡುತ್ತಾರೆ.
ಬಹಳಷ್ಟು ಸಂದರ್ಭದಲ್ಲಿ ಮನೆಯುಲ್ಲಿ ಸಾವಾಗಿರಲಿ, ದೇವರು ಮಾಡುವುದು ಇರಲಿ ಯಾವುದನ್ನು ನೋಡದೇ ನಮಗೆ ಮಾನಸಿಕ ನೀಡುತ್ತಿರುವ ಕಂಪೆನಿಗಳ ಸಿಬ್ಬಂದಿಯವರ ಕಾರಣದಿಂದಾಗಿ ನಮಗೆ ಒತ್ತಡ ಉಂಟಾಗಿ ಕಷ್ಟದಲ್ಲಿ ರೋಗಗಳಿಗೆ ಈಡಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ನಾವು ಹಣ ಪಾವತಿ ಮಾಡುವುದಕ್ಕೆ ನಿರಾಕರಿಸಿಲ್ಲ. ಆದರೆ ಸ್ವಲ್ಪ ಕಾಲಾವಕಾಶ ನೀಡುವಂತೆ ಕೇಳಿದರೂ ಅದಕ್ಕೆ ಯಾವುದೇ ಕಿಮ್ಮತ್ತು ನೀಡದೇ ನಮಗೆ ನಿರಂತರ ಕಿರಕುಳ ನೀಡುತ್ತಿದ್ದಾರೆ. ಆದ್ದರಿಂದ ನಮಗೆ ತೊಂದರೆ ಕೊಡುತ್ತಿರುವವರ ವಿರುದ್ಧ ಕ್ರಮ ಕೈಗೊಂಡು ನಮಗೆ ಕಿರುಕುಳ ನೀಡದಂತೆ ಮಾಡಬೇಕು ನಮಗೆ ಸಮಯಾವಕಾಶ ಕೊಡಿಸಿಕೊಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಶಬಿ, ರಾಜೇಶ್ವರಿ, ಅಕ್ಕಮ್ಮ, ರಸೂಲಬಿ, ಸೈದಾಬಿ, ನೂರಜಾ, ದೌಲಬಿ, ರಾಣುಬಾಯಿ ಇದ್ದರು.