ಇತ್ತೀಚಿನ ಸುದ್ದಿ
ಮೇಕೆ ಭಕ್ಷಕ ಹೆಣ್ಣು ಹುಲಿ ಕೊನೆಗೂ ಸೆರೆ: ಮೈಸೂರು ಮೃಗಾಲಯಕ್ಕೆ ರವಾನೆ; ನಿಟ್ಟುಸಿರು ಬಿಟ್ಟ ನಾಣಚ್ಚಿ ಹಾಡಿ ನಾಗರಿಕರು
17/12/2021, 18:43
ಸಾಂದರ್ಭಿಕ ಚಿತ್ರ
ನಾಗರಹೊಳೆಗೆ(reporterkarnataka.com) ನಾಣಚ್ಚಿ ಹಾಡಿ ವ್ಯಾಪ್ತಿಯಲ್ಲಿ ಮೇಯಲು ಬಿಟ್ಟಿದ್ದ 9 ಮೇಕೆಗಳನ್ನು ಬಲಿ ತೆಗೆದುಕೊಂಡಿದ್ದ ಹುಲಿಯನ್ನು ಕೊನೆಗೂ ಸೆರೆ ಹಿಡಿಯಲಾಗಿದೆ.
ಹುಲಿ ಮೇಕೆಗಳನ್ನು ಕೊಂದಿರುವುದಲ್ಲದೆ, ಮೇಕೆ ಮೇಯಿಸುತ್ತಿದ್ದ ವ್ಯಕ್ತಿಯ ಮೇಲೂ ದಾಳಿ ನಡೆಸಿತ್ತು. ಇದರಿಂದ ಭಯಭೀತರಾದ ಗ್ರಾಮಸ್ಥರ. ಹುಲಿಯನ್ನು ಸೆರೆಹಿಡಿಯುವಂತೆ ಒತ್ತಾಯಿಸಿ, ನಾಗರಹೊಳೆ ಅರಣ್ಯ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು. ಗ್ರಾಮಸ್ಥರ ಪ್ರತಿಭಟನೆ ಹಿನ್ನಲೆಯಲ್ಲಿ ಸಾಕಾನೆಗಳ ಸಹಕಾರದಿಂದ ಅರಣ್ಯ ಇಲಾಖೆಯು ಗುರುವಾರ ಸಂಜೆ ಹುಲಿ ಸೆರೆಗೆ ಕಾರ್ಯಾಚರಣೆ. ನಡೆಸಿತ್ತು.
ಮತ್ತಿಗೋಡು ಶಿಬಿರದ ಅಭಿಮನ್ಯು, ಭೀಮ ಸೇರಿದಂತೆ ಸಾಕಾನೆಗಳ ಮೂಲಕ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಆಡುಗಳನ್ನು ಬಲಿ ತೆಗೆದುಕೊಂಡಿದ್ದ ಸ್ಥಳದಲ್ಲೇ ಅಡಗಿದ್ದ ಹುಲಿಯನ್ನು ತಜ್ಞರ ನೆರವಿನಿಂದ ಅರಿವಳಿಕೆ ನೀಡಿ ಸೆರೆಹಿಡಿದರು.
ಸೆರೆಸಿಕ್ಕ ಹೆಣ್ಣು ಹುಲಿ ಅಂದಾಜು 10 ವಷ೯ ಪ್ರಾಯದ್ದಾಗಿದೆ.
ವ್ಯಾಘ್ರ ಸೆರೆಯಾದ ಹಿನ್ನಲೆಯಲ್ಲಿ ನಾಣಚ್ಚಿ ಹಾಡಿ ವ್ಯಾಪ್ತಿಯ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದು ಸೆರೆಹಿಡಿಯಲಾದ ಹುಲಿಯನ್ನು ಮೈಸೂರು ಮೖಗಾಲಯಕ್ಕೆ ಸಾಗಿಸಲಾಗಿದೆ.