ಇತ್ತೀಚಿನ ಸುದ್ದಿ
ಮೇ 25ರಂದು ಪ್ರಸಿದ್ಧ ಸಾಹಿತಿ, ಪ್ರವಚನಕಾರ ಅಂಬಾತನಯ ಮುದ್ರಾಡಿ ಸಂಸ್ಮರಣೆ- ಪ್ರಶಸ್ತಿ ಪ್ರದಾನ ಸಮಾರಂಭ
23/05/2024, 17:53

ಉಡುಪಿ( reporterkarnataka.com): ಪ್ರಸಿದ್ದ ಸಾಹಿತಿ, ಹರಿದಾಸ, ಅರ್ಥಧಾರಿ, ಪ್ರವಚನಕಾರ ಹಾಗೂ ಚಿಂತಕ ಅಂಬಾತನಯ ಮುದ್ರಾಡಿಯವರ ಸಂಸ್ಮರಣೆ- ಪ್ರಶಸ್ತಿ ಪ್ರದಾನ ಮತ್ತು ತಾಳಮದ್ದಲೆ ಮುದ್ರಾಡಿ ಶಾಲಾ ವಠಾರದಲ್ಲಿ ಮೇ 25ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.
ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಹಿರಿಯ ಸ್ತ್ರೀ ವೇಷಧಾರಿ ಕೋಳ್ಯೂರು ರಾಮಚಂದ್ರ ರಾವ್ ಪ್ರಶಸ್ತಿ ಪ್ರದಾನ ಮಾಡುವರು. ಸಂಸ್ಮರಣೆ ಹಾಗೂ ಅಭಿನಂದನಾ ನುಡಿ ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರು ನೀಡುವರು. ಅಭ್ಯಾಗತರಾಗಿ ಯಕ್ಷಗಾನ ಮೇಳಗಳ ಯಜಮಾನ ಪಿ. ಕಿಶನ್ ಹೆಗ್ಡೆ, ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಪೂರ್ಣಿಮಾ ಭಾಗವಹಿಸುವರು. ಪ್ರಸಿದ್ಧ ವೈದ್ಯ ಡಾ. ಎಂ.ಎಸ್.ರಾವ್ ಮುದ್ರಾಡಿ ಹಾಗೂ ಮುದ್ರಾಡಿ ಸಿರಿಬೀಡು ಉದ್ಯಮಿ ದಿವಾಕರ ಎನ್. ಶೆಟ್ಟಿ ಉಪಸ್ಥಿತರಿರುವರು.
ನಂತರ ರುಕ್ಮಾಂಗದ ಚರಿತ್ರೆ ತಾಳಮದ್ದಲೆ ನಡೆಯಲಿದೆ.