ಇತ್ತೀಚಿನ ಸುದ್ದಿ
ಮೇ 22: ಪದುವಾ ಹೈಸ್ಕೂಲ್ ಮೈದಾನದಲ್ಲಿ ‘ಬಲ್ಯಾಯ ಟ್ರೋಫಿ- 2022’ ಕ್ರಿಕೆಟ್ ಪಂದ್ಯಾಟ
17/05/2022, 10:23

ಮಂಗಳೂರು(reporterkarnataka.com): ಬಲ್ಯಾಯ ಯಾನೆ ಕಣಿಶನ್ ಮಹಾಜನ ಸಂಘದ ಆಶ್ರಯದಲ್ಲಿ ನಿಗದಿತ ಓವರ್ ಗಳ ಕ್ರಿಕೆಟ್ ಪಂದ್ಯಾಟ ‘ಬಲ್ಯಾಯ ಟ್ರೋಫಿ- 2022’ ನಗರದ ಕದ್ರಿ ಹಿಲ್ಸ್ ಪದುವಾ ಹೈಸ್ಕೂಲ್ ಮೈದಾನದಲ್ಲಿ ಮೇ 22ರಂದು ಭಾನುವಾರ ಬೆಳಗ್ಗೆ 8.30ಕ್ಕೆ ನಡೆಯಲಿದೆ.
ಟ್ರೋಫಿ ವಿಜೇತರಿಗೆ 6666 ರೂ. ನಗದು ಬಹುಮಾನ ಹಾಗೂ ಬಲ್ಯಾಯ ಟ್ರೋಫಿ ನೀಡಲಾಗುವುದು. ದ್ವಿತೀಯ ಬಹುಮಾನ 4444 ರೂ. ನಗದು ಹಾಗೂ ಟ್ರೋಫಿ ನೀಡಲಾಗುವುದು. ಉತ್ತಮ ದಾಂಡಿಗ, ಉತ್ತಮ ಎಸೆತಗಾರ ಹಾಗೂ ಉತ್ತಮ ಸವ್ಯಸಾಚಿ ವೈಯಕ್ತಿಕ ಪ್ರಶಸ್ತಿಯನ್ನೂ ನೀಡಿ ಆಟಗಾರರನ್ನು ಪುರಸ್ಕರಿಸಲಾಗುವುದು. ಕ್ರೀಡಾಭಿಮಾನಿಗಳು ಇದಕ್ಕೆ ಸಂಪೂರ್ಣ ಸಹಕಾರ ನೀಡಬೇಕಾಗಿ ಬಲ್ಯಾಯ ಯುವ ವೇದಿಕೆಯ ಸಂಚಾಲಕರಾದ ನವೀನ್ ಬಲ್ಯಾಯ ಅಳಪೆ ಹಾಗೂ ಸಹ ಸಂಚಾಲಕ ಅರವಿಂದ ಪಂಡಿತ್ ಪೆರ್ಮಂಕಿ ಅವರು ಕೋರಿದ್ದಾರೆ.