11:18 PM Thursday16 - January 2025
ಬ್ರೇಕಿಂಗ್ ನ್ಯೂಸ್
ಮಂಗಳೂರಿಗೆ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ: ರಾಜೀವ್ ಗಾಂಧಿ ವಿವಿ ಪ್ರಾದೇಶಿಕ ಕೇಂದ್ರಕ್ಕೆ ಶಿಲಾನ್ಯಾಸ ಕುರ್ಚಿಗಾಗಿ ಕಾದಾಟದಲ್ಲೇ ಎಲ್ಲರೂ ಮಗ್ನ, ಜನರ ಪಾಲಿಗೆ ಸರ್ಕಾರದ ನೆರವು ಮರೀಚಿಕೆ: ಪ್ರತಿಪಕ್ಷ… ಕೆಎಎಸ್‌ ಪೂರ್ವಭಾವಿ ಮರುಪರೀಕ್ಷೆಯ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್… ಬಾಲಿವುಡ್ ನಟ ಸೈಫ್ ಅಲಿಖಾನ್ ಗೆ 6 ಬಾರಿ ಚಾಕು ಇರಿತ: ಮುಂಜಾನೆ… ಗರೋಡಿ ಜಾತ್ರೆಗೂ ಊರವರಿಗೆ ನೀರಿಲ್ಲ!: 5 ದಿನಗಳಿಂದ ನೋ ವಾಟರ್!!; ಮೇಯರ್ ಅವರೇ… ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಸಚಿವ ಜಮೀರ್‌ ಭಾವಚಿತ್ರಕ್ಕೆ ಸಗಣಿ ಬಳಿದು ಬಿಜೆಪಿ… ಕೆಚ್ಚಲು ಕೊಯ್ದ ಪ್ರಕರಣ: ದನದ ಮಾಲೀಕನ ತಾಯಿಗೆ 3 ಹಸು ಕೊಡಿಸಿದ ಸಚಿವ… 5 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ: ಆರೋಪಿಯ ತಕ್ಷಣ ಬಂಧಿಸಲು ಆಗ್ರಹಿಸಿ ಎಐಎಂಎಸ್ಎಸ್… ಕಾಡಾನೆಯ ಚಿತ್ರೀಕರಣ ಮಾಡಲು ಹೋದ ಯೂಟ್ಯೂಬರ್ ಮೇಲೆ ಸಲಗ ದಾಳಿ: ಕೂದಲೆಳೆ ಅಂತರದಲ್ಲಿ… ವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡ ಕೇಂದ್ರ ಸಚಿವ ಕುಮಾರಸ್ವಾಮಿ

ಇತ್ತೀಚಿನ ಸುದ್ದಿ

ಮಠಗಳ ಅನುದಾನದಲ್ಲಿ ಪರ್ಸೆಂಟೇಜ್ ಆರೋಪ: ಮಠಾಧೀಶರು ದಾಖಲೆ ಕೊಟ್ಟರೆ ತನಿಖ: ಸಿಎಂ ಬೊಮ್ಮಾಯಿ

18/04/2022, 23:43

ಬೆಂಗಳೂರು(reporterkarnataka.com): ಬಾಳೆಹೊಸೂರು ಮಠದ ದಿಂಗಾಲೇಶ್ವರ ಶ್ರೀಗಳ 30 ಪರ್ಸೆಂಟ್‌ ಕಮಿಷನ್‌ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಯಾವ ಮಠಾಧೀಶರು ಎಲ್ಲಿ, ಯಾರಿಗೆ ಎಷ್ಟು ಪರ್ಸೆಂಟ್‌ ಕೊಟ್ಟಿದ್ದಾರೆ ದಾಖಲೆ ನೀಡಲಿ ತನಿಖೆ ಮಾಡುತ್ತೇವೆ’ ಎಂದರು.

ದಿಂಗಾಲೇಶ್ವರ ಸ್ವಾಮೀಜಿಗಳ ಮಾತಿಗೆ ಬೆಲೆ ಕೊಡುತ್ತೇವೆ.ಯಾವ ಮಠಾಧೀಶರು ಯಾರಿಗೆ ಕೊಟ್ಟಿದ್ದಾರೆ ದಾಖಲೆ ನೀಡಲಿ. ಎಲ್ಲಿ, ಯಾರಿಗೆ ಎಷ್ಟು ಪರ್ಸೆಂಟ್‌ ಕೊಟ್ಟಿದ್ದಾರೆ ದಾಖಲೆ ಕೊಡಲಿ. ದಾಖಲೆ ನೀಡದರೆ ಈ ಕುರಿತು ಸಂಪೂರ್ಣ ತನಿಖೆ ಮಾಡ್ತೇವೆ. ಅದರ ಆಳಕ್ಕೆ ಹೋಗ್ತೇವೆ, ಸಂಪೂರ್ಣ ತನಿಖೆ ಮಾಡುತ್ತೇವೆ ಎಂದರು.

ಮಠಗಳಿಗೆ ಬರುವ ಅನುದಾನದಲ್ಲೂ 30% ಕಮಿಷನ್‌ ಕೊಟ್ಟರಷ್ಟೇ ಅನುದಾನ ಬಿಡುಗಡೆ ಮಾಡುತ್ತಾರೆ. ಇದು ಬಿಜೆಪಿ ಸರ್ಕಾರ ಮಾತ್ರವಲ್ಲ ಎಲ್ಲಾ ಸರ್ಕಾರದಲ್ಲೂ ಇದೇ ಪರಿಸ್ಥಿತಿ ಇದೆ. ಕಮಿಷನ್‌ ಕಟ್‌ ಮಾಡಿಯೇ ಕೊಡುತ್ತಾರೆ. ಮಠದ ಅನುದಾನದಲ್ಲೂ ಕಮಿಷನ್‌ ಕೇಳುತ್ತಾರೆ. ಅನುದಾನದಲ್ಲೂ ಪರ್ಸೆಂಟೇಜ್‌ ಕೊಡಬೇಕು. ಎನ್‌ ಓಸಿಗೂ ಕಮಿಷನ್‌ ಕೊಡಬೇಕು. ಭೂಮಿ ಪೂಜೆಗೂ ಕಮಿಷನ್‌ ಕೊಡಬೇಕು . ಇದರ ಜತೆಗೆ ಯಾಕೆ ಹಣ ಕೊಟ್ಟಿಲ್ಲ ಎಂದು ದೌರ್ಜನ್ಯ ಮಾಡುತ್ತಾರೆಂದು ಗಂಭೀರವಾಗಿ ಬಾಲೇ ಹೊಸೂರು ಮಠದ ದಿಂಗಾಲೇಶ್ವರ ಶ್ರೀಗಳು ಅರೋಪಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು