9:13 AM Sunday5 - October 2025
ಬ್ರೇಕಿಂಗ್ ನ್ಯೂಸ್
ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರ ಆತಂಕಗೊಳಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ ವಿಶ್ವ ವಿಖ್ಯಾತ ಮೈಸೂರು ದಸರಾ: ಜಂಬೂ ಸವಾರಿಗೆ ಗಜಪಡೆ ಸಜ್ಜು ಮೈಸೂರು ಅರಮನೆಗೆ ಬೆಳ್ಳಿ ರಥದಲ್ಲಿ ಹೊರಟ ಚಾಮುಂಡಿ ದೇವಿ: ಬಿಗಿ ಬಂದೋಬಸ್ತ್

ಇತ್ತೀಚಿನ ಸುದ್ದಿ

ಮಸ್ಕಿಯಲ್ಲಿ ಸೋತ ಪ್ರತಾಪಗೌಡ ಪಾಟೀಲ್ ಗೆ ಸಚಿವ ಸ್ಥಾನ:  ಅಭಿಮಾನಿಗಳ ಆಗ್ರಹದ ಆಡಿಯೋ ವೈರಲ್

20/05/2021, 12:03

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ
info.reporterkarnataka@gmail.com
ಮಸ್ಕಿಉಪಚುನಾವಣೆಯಲ್ಲಿ ಸೋಲು ಕಂಡಿರುವ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಅವರ ಸೋಲಿನ ಹಿಂದೆ ಕಾಣದ  ಕೈಗಳು ಇದ್ದು, ಅವರನ್ನು ವಿಧಾನ ಪರಿಷತ್ ಸದಸ್ಯ ಮಾಡಿ ಸಚಿವ ಪದವಿ ನೀಡುವಂತೆ ಅವರ ಅಭಿಮಾನಿಗಳು ಆಗ್ರಹಿಸಿದ್ದಾರೆ.

ಈ ನಿಟ್ಟಿನಲ್ಲಿ ಧ್ವನಿ ಸುರುಳಿಯ ಸಣ್ಣ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮಸ್ಕಿ ಕ್ಷೇತ್ರದ ಮಾಜಿ ಶಾಸಕರ ಪ್ರತಾಪ ಗೌಡ ಪಾಟೀಲ್ ಅಭಿಮಾನಿಗಳು ಮುಖ್ಯಮಂತ್ರಿಯನ್ನು ಆಗ್ರಹಿಸುವ ಧ್ವನಿ ಸುರುಳಿ ಇದಾಗಿದೆ.

ಮುಖ್ಯಮಂತ್ರಿ ಯಡಿಯೂರಪ್ಪನವರೇ ಇವತ್ತು ನೀವು ಸಿಎಂ ಕುರ್ಚಿ ಮೇಲೆ ಕೂರುವುದಕ್ಕೆ ಸೋಲು ಕಂಡಿರುವ ಮಾಜಿ ಶಾಸಕ ಪ್ರತಾಪ ಗೌಡರ ಪಾತ್ರ ಬಹುಮುಖ್ಯ. ಉಪಚುನಾವಣೆಯಲ್ಲಿ ಅವರು ಸೋತಿರಬಹುದು. ಆದರೆ ನೀವು ಸೋತವರನ್ನು ಸಚಿವರನ್ನಾಗಿ ಮಾಡಿದ್ದೀರಿ. ಅಲ್ಲದೆ ಉಪಮುಖ್ಯಮಂತ್ರಿ ಕೂಡ ಮಾಡಿದ್ದೀರಿ. ಪ್ರತಾಪಗೌಡ ಪಾಟೀಲ್ ಅವರನ್ನು ಎಂಎಲ್ಸಿ ಮಾಡಿ ಸಚಿವ ಸ್ಥಾನ ನೀಡಬೇಕೆಂದು ಅಭಿಮಾನಿಗಳಿಂದ ಒತ್ತಾಯ ಕೇಳಿಬರುತ್ತಿದೆ. ಮತದಾರರು ಈ ಸಲ ಪ್ರತಾಪ ಗೌಡರನ್ನು ಕೈ ಬಿಟ್ಟಿರಬಹುದು. ಆದರೆ ಸರಕಾರ ತರುವುದರಲ್ಲಿ ಅವರ ಪಾತ್ರ ಬಹಳ ಮುಖ್ಯ. 17 ಜನರಲ್ಲಿ ಇವರದು ಒಂದು ಪಾತ್ರ ಇದೆ. ಮೈತ್ರಿ ಸರಕಾರ ಬೀಳಿಸುವಲ್ಲಿ ಇದ್ದ 17 ಜನರಲ್ಲಿ ಇವರು ಒಬ್ಬರು. ಪ್ರತಾಪ್ ಗೌಡ ಪಾಟೀಲ್ 

ಅವರನ್ನು ಮತದಾರರು ಈ ಬಾರಿ ಕೈ ಬಿಟ್ಟಿರಬಹುದು. ನಾವು ಎಲ್ಲಿ ಎಡವಿದ್ದೇವೆ, ತಪ್ಪು ಮಾಡಿದ್ದೇವೆ ಇದನ್ನೆಲ್ಲ ಮುಂಬರುವ ದಿನಗಳಲ್ಲಿ ಸರಿಪಡಿಸಿಕೊಳ್ಳುತ್ತೇವೆ. ಸೋಲಿನ ಹಿಂದೆ ಕಾಣದ ಕೈಗಳು ಇದ್ದು, ಮತದಾರರು ಈ ಬಾರಿ ಕೈ ಬಿಟ್ಟಿರಬಹುದು. ಮುಂಬರುವ ದಿನಗಳಲ್ಲಿ ನಾವು ಸರಿಪಡಿಸಿಕೊಳ್ಳುತ್ತೇವೆ. ಅಲ್ಲದೆ ಮುಖ್ಯಮಂತ್ರಿಗಳು ನಮ್ಮನ್ನು ಕೈಬಿಡುವುದಿಲ್ಲ ಎನ್ನುವ ಮಾತುಗಳು ಅಭಿಮಾನಿಗಳಿಂದ ಕೇಳಿಬರುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು