8:05 AM Friday29 - November 2024
ಬ್ರೇಕಿಂಗ್ ನ್ಯೂಸ್
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ, ಗರ್ಭಿಣಿಯರ ಸಾವು: ತನಿಖೆಗೆ ಅಗ್ರಹಿಸಿ ಜನವಾದಿ ಮಹಿಳಾ ಸಂಘಟನೆ… ಲಂಡನ್ ವಾಲ್ವ್ಸ್ 2024 ರಲ್ಲಿ ಮಿಂಚಿದ ಭಾರತ: ಹೃದಯ ಕವಾಟ ಆವಿಷ್ಕಾರ ‘ಮೈವಾಲ್… ಹುಣಸಗಿ: ವಿದ್ಯಾರ್ಥಿಗಳಿಂದ ಕೆಎಸ್ಸಾರ್ಟಿಸಿ ಬಸ್ ತಡೆದು ಪ್ರತಿಭಟನೆ; ಸಾರ್ವಜನಿಕರ ಸಾಥ್ ಅಡಿಕೆ ಬೆಳೆಗಾರರ ಸಮಸ್ಯೆ: ಕರಾವಳಿ ಸಂಸದರಿಂದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್… ಡಿ.8ರಂದು ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ: ಬಿಷಪ್ ಡಾ. ಪೀಟರ್… ಕರ್ತವ್ಯಲೋಪ: ಚಿಕ್ಕಮಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಅಮಾನತು ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ…

ಇತ್ತೀಚಿನ ಸುದ್ದಿ

ಮರು ಜೀವ ಪಡೆದ ‘ಕೆಫೆ ಕಾಫಿ ಡೇ’ ಕಂಪೆನಿ: ಸಾಲ ಮರು ಪಾವತಿಯಲ್ಲಿ ಮಾಳವಿಕಾ ಹೆಗ್ಡೆ ಯಶಸ್ವಿ

14/01/2022, 15:18

ಬೆಂಗಳೂರು(reporterkarnataka.com): ಭಾರೀ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಕರ್ನಾಟಕದ ಪ್ರತಿಷ್ಠಿತ ಕಂಪೆನಿ ‘ಕೆಫೆ ಕಾಫಿ ಡೇ’ ಇದೀಗ ಮತ್ತೆ ಮರು ಜೀವ ಪಡೆದಿದೆ. ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಇದು ಭಾರಿ ಸುದ್ದಿಯಾಗುತ್ತಿದೆ.

ಕಂಪೆನಿಯ ಸ್ಥಾಪಕ, ಮಾಲಕ ವಿ.ಜಿ.ಸಿದ್ದಾರ್ಥ ಹೆಗ್ಡೆ ಸಾವಿನ ಬಳಿಕ ಇದೀಗ ಸಿದ್ದಾರ್ಥ ಅವರ ಪತ್ನಿ, ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಪುತ್ರಿ ಮಾಳವಿಕಾ ಹೆಗ್ಡೆ ಕಂಪೆನಿಯ ದೊಡ್ಡ ಮೊತ್ತದ ಸಾಲವನ್ನು ತೀರಿಸುವಲ್ಲಿ ಯಶಸ್ವಿಯಾಗಿದ್ದು, ಸಂಸ್ಥೆಯನ್ನು ಉಳಿಸಿದ ಮಾಳವಿಕಾ ಹೆಗ್ಡೆ ಅವರು ಇತರರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಹಲವು ಯೂಟ್ಯೂಬ್, ಸುದ್ದಿ ಮಾಧ್ಯಗಳು ವಿಶ್ಲೇಷಿಸಿದೆ.

ಎರಡು ವರ್ಷಗಳಲ್ಲಿ ಕಂಪೆನಿಯ ಸಾಲದ ಮೊತ್ತವನ್ನು 7,200 ಕೋಟಿ ರೂಪಾಯಿಯಿಂದ 1,731 ಕೋಟಿಗೆ ಇಳಿಸುವಲ್ಲಿ ಯಶಸ್ವಿಯಾಗಿರುವ ಮಾಳವಿಕಾ ಹೆಗ್ಡೆ ಕಂಪೆನಿಯ ನೌಕರರಲ್ಲಿಯೂ ಹೊಸ ಭರವಸೆಯನ್ನು ಮೂಡಿಸಿದ್ದಾರೆ.

”ಅವಿರತ ಪ್ರಯತ್ನದಿಂದ ತನ್ನ ವ್ಯಾಪಾರ ಮತ್ತು ಜೀವನವನ್ನು ಮರಳಿ ಪಡೆದ ಶ್ರೀಮತಿ ಮಾಳವಿಕಾ ಹೆಗ್ಡೆಯ ಬಗ್ಗೆ ನಮಗೆ ಅಪಾರ ಹೆಮ್ಮೆಯಿದೆ. ಅವರು ಯಾವಾಗಲೂ ಸಂಕಲ್ಪದ ದಾರಿ ದೀಪವಾಗಿ ನಿಲ್ಲುತ್ತಾರೆ ಮತ್ತು ಜೀವನದಲ್ಲಿ ಭರವಸೆಗಳನ್ನು ಕಳೆದುಕೊಂಡವರಿಗೆ ಅವರೊಂದು ಉತ್ತಮ ಮಾದರಿ. ಕೆಫೆಯ ಸುವರ್ಣ ದಿನಗಳಿಗಾಗಿ ಎದುರುನೋಡುತ್ತಿದ್ದೇವೆ” ಎಂದು ಸಾಮಾಜಿಕ ತಾಣಗಳಲ್ಲಿ ಹಲವರು ಶ್ಲಾಘಿಸಿದ್ದಾರೆ.


ಇನ್ನು ಹಲವಾರು ಆಂಗ್ಲ ಮಾಧ್ಯಮಗಳೂ ಸೇರಿದಂತೆ ಮುಳುಗಿ ಹೋಗುತ್ತಿದ್ದ ಕಂಪನಿಯನ್ನು ಮರುಜೀವಗೊಳಿಸಿದ ಮಾಳವಿಕಾ ಹೆಗ್ಡೆ ಕುರಿತು ವಿಶೇಷ ವರದಿಗಳನ್ನು ಪ್ರಕಟಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು