12:33 AM Saturday16 - August 2025
ಬ್ರೇಕಿಂಗ್ ನ್ಯೂಸ್
Bangalore | ಬಿಜೆಪಿಯವರಿಗೆ ರಾಜಕಾರಣಕ್ಕಾಗಿ ಧರ್ಮಸ್ಥಳ ಬೇಕಾಗಿದೆ: ಡಿಸಿಎಂ ಡಿ.ಕೆ. ಶಿವಕುಮಾರ್ ಕಿಡಿ ವಿರಾಜಪೇಟೆ: ಅರಣ್ಯ ಇಲಾಖೆಯ ಕಾರ್ಯಾಚರಣೆ ಯಶಸ್ವಿ; ನಾಡಿನಲ್ಲಿ ಬೀಡು ಬಿಟ್ಟಿದ್ದ 10ಕ್ಕೂ ಅಧಿಕ… ‘ಧರ್ಮಸ್ಥಳ ವಿರುದ್ಧ ಷಡ್ಯಂತರʼ ರಾಜ್ಯ ಸರ್ಕಾರದ್ದೇ?: ಡಿ.ಕೆ. ಶಿವಕುಮಾರ್‌ ಹೇಳಿಕೆಗೆ ಕೇಂದ್ರ ಸಚಿವ… ಸಾಲದ ಬಾಧೆ: ಆಟೋ ಚಾಲಕ ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನ; ಅರಣ್ಯ… ಬಸವಣ್ಣನವರ ಕಲ್ಯಾಣ ರಾಜ್ಯದ ಕನಸಿನ ಈಡೇರಿಕೆಯೇ ನಮ್ಮ ಗುರಿ: ಸಿಎಂ ಸಿದ್ದರಾಮಯ್ಯ ಕೇಂದ್ರದಿಂದ ಸ್ವಾತಂತ್ರ್ಯೋತ್ಸವದ ವಿಶಿಷ್ಠ ಕೊಡುಗೆ; ಉತ್ತರ ಕರ್ನಾಟಕಕ್ಕೆ ವಿಶೇಷ ಆರ್ಥಿಕ ವಲಯ ಘೋಷಣೆ ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ; ಎಸ್ಐಟಿ ತನಿಖೆ ನಡೆಯುತ್ತಿರುವಾಗ ಸದನದಲ್ಲಿ ಪ್ರಸ್ತಾಪ ಸರಿಯಲ್ಲ:… ಜಾಮೀನು ರದ್ದು ಮಾಡಿದ ಸುಪ್ರೀಂಕೋರ್ಟ್: ನಟ ದರ್ಶನ್​​, ಪವಿತ್ರಾ ಗೌಡ ಸಹಿತ 4… ಕೇಂದ್ರದಿಂದ ರಸಗೊಬ್ಬರ ಪೂರೈಕೆ ಕೊರತೆ ರಾಜ್ಯದ ಸಮಸ್ಯೆಗೆ ಕಾರಣ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ Kodagu | ಮಡಿಕೇರಿ: ಅಸ್ಸಾಂ ಕಾರ್ಮಿಕರಿಂದ ಆಧಾರ್ ಕಾರ್ಡಿನ ದುರ್ಬಳಕೆ ಆರೋಪ

ಇತ್ತೀಚಿನ ಸುದ್ದಿ

ಅಲ್ಪಸಂಖ್ಯಾತರೇ ಸಂಪನ್ಮೂಲಗಳ ಮೊದಲ ಹಕ್ಕುದಾರರು ಎಂದಿದ್ದೇ ಮನಮೋಹನ್ ಸಿಂಗ್: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

21/06/2025, 23:59

* ಸಿಎಂ ಸಿದ್ದರಾಮಯ್ಯ ಚುನಾವಣೆಗಳಿಗಾಗಿ ಜನರ ದಾರಿ ತಪ್ಪಿಸ್ತಿದ್ದಾರೆ

* ಜಾತಿ ಸಮೀಕ್ಷೆ ಹೆಸರಲ್ಲಿ ₹165 ಕೋಟಿ ನುಂಗಿ ನೀರು ಕುಡಿದ ಕಾಂಗ್ರೆಸ್‌

* ನಾಗಮೋಹನದಾಸ್‌ ವರದಿ ಜಾರಿ ಮಾಡದೆ 21 ವರ್ಷ ಮಾಡಿದ್ದೇನು?

ಬಾಗಲಕೋಟೆ(reporterkarnataka.com): ʼಅಲ್ಪಸಂಖ್ಯಾತರು ಸಂಪನ್ಮೂಲಗಳ ಮೊದಲ ಹಕ್ಕು ಹೊಂದಿದ್ದಾರೆʼ ಎಂದಿದ್ದೇ ಮಾಜಿ ಪ್ರಧಾನಿ ಮನಮೋಹನ್ ಸಿಂಗ್. ಇದನ್ನು ಯಾರೂ ಮರೆತಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಾಂಗ್ರೆಸ್‌ ನಾಯಕರಿಗೆ ತಿರುಗೇಟು ನೀಡಿದರು.
ಪಟ್ಟದಕಲ್‌ನಲ್ಲಿ ಶನಿವಾರ ಮಾದ್ಯಮದವರೊಂದಿಗೆ ಮಾತನಾಡಿ, ವಸತಿ ಯೋಜನೆಯಲ್ಲಿ ʼಅಲ್ಪಸಂಖ್ಯಾತರಿಗೆ ಶೇ.15ರಷ್ಟು ಮೀಸಲಾತಿʼ ಕೇಂದ್ರದ ಮಾರ್ಗಸೂಚಿಯಲ್ಲೇ ಇತ್ತು ಎಂದಿರುವ ಸಿಎಂ ಸಿದ್ದರಾಮಯ್ಯ ಸುಳ್ಳು ಹೇಳುವುದರಲ್ಲಿ ನಿಸ್ಸೀಮರೆಂದು ಹರಿಹಾಯ್ದರು.
2006ರಲ್ಲಿ ಯುಪಿಎ ಸರ್ಕಾರದ ಆಡಳಿತದಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಇದರಡಿಯ PMAYನಲ್ಲಿ ಶೇ.15ರಷ್ಟು ಮೀಸಲಾತಿ ಪದ್ಧತಿ ಇರಲಿಲ್ಲ. ಸಿಎಂ ಸಿದ್ದರಾಮಯ್ಯ ಅವರು ಚುನಾವಣೆಗಳಿಗಾಗಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರಂತರ ಸುಳ್ಳುಗಳು ಮತ್ತು ಕಾಂಗ್ರೆಸ್‌ನ ತುಷ್ಟೀಕರಣ ರಾಜಕಾರಣವನ್ನು ತೀಕ್ಷ್ಣವಾಗಿ ವಿರೋಧಿಸುತ್ತೇವೆ ಎಂದರಲ್ಲದೆ, ಓಲೈಕೆ ರಾಜಕಾರಣಕ್ಕಾಗಿ ಕಾಂಗ್ರೆಸ್ ಧರ್ಮಾಧಾರಿತ ಮೀಸಲಾತಿ ನೀಡುವ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಸಾಮರಸ್ಯ ಮುರಿಯಲು ಶ್ರಮಿಸುತ್ತಿದೆ ಎಂದು ಖಂಡಿಸಿದರು.

*NDA ಧರ್ಮಾಧಾರಿತ ಮೀಸಲಾತಿ ನೀಡಿಲ್ಲ;* ಹಿಂದುಳಿದ ವರ್ಗದ ಕಲ್ಯಾಣಕ್ಕಾಗಿ NDA ಸರ್ಕಾರ ಪ್ರಮುಖ ಯೋಜನೆಗಳನ್ನು ಜಾರಿಗೊಳಿಸುತ್ತಿದೆಯೇ ಹೊರತು ಧರ್ಮಾಧಾರಿತ ಮೀಸಲಾತಿ ನೀಡಿಲ್ಲ. 2019ರಲ್ಲಿ ಯಾವುದೇ ರೀತಿಯ ಧರ್ಮಾಧಾರಿತ ಮಾರ್ಗಸೂಚಿಗಳನ್ನು NDA ಸರ್ಕಾರ ಹೊರಡಿಸಿಲ್ಲ ಎಂದು ಸಚಿವ ಪ್ರಲ್ಹಾದ ಜೋಶಿ ಸ್ಪಷ್ಟಪಡಿಸಿದರು.

*ಗೈಡ್‌ಲೈನ್‌ಗೂ ಮುನ್ನ ಗೊಂದಲ ಸೃಷ್ಟಿಸುತ್ತಿದ್ದಾರೆ:* ಕೇಂದ್ರ ಸರ್ಕಾರ ಜಾತಿ ಸಮೀಕ್ಷೆಗೆ ಓಬಿಸಿ ಆಯೋಗಕ್ಕೆ ಮಾನ್ಯತೆ ಕೊಟ್ಟಿದೆ. ಆದರೆ, ಜಾತಿ ಸಮೀಕ್ಷೆ ಸಂಬಂಧ ಇನ್ನೂ ಮಾರ್ಗಸೂಚಿ ಹೊರಡಿಸಿಲ್ಲ, ಮಾರ್ಗಸೂಚಿಯಲ್ಲಿ ಏನಿರಲಿದೆ? ಎಂಬುದನ್ನು ನೋಡುವಷ್ಟು ವ್ಯವಧಾನ ಸಹ ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕಿಲ್ಲ ಎಂದರು.

ಕೇಂದ್ರ ಸರ್ಕಾರ ಸಂಪೂರ್ಣವಾದಂತಹ ಜಾತಿ ಸಮೀಕ್ಷೆ ಮಾಡುತ್ತದೆ ಎಂದಿದ್ದರೂ ರಾಜ್ಯ ಕಾಂಗ್ರೆಸ್‌ ಸರ್ಕಾರ ನಮ್ಮದು ಬೇರೆ, ಅವರದ್ದು ಬೇರೆ ಎನ್ನುತ್ತಿದೆ. ಹಾಗಾದರೆ ಇಷ್ಟು ದಿನ ಏನು ಮಾಡುತ್ತಿದ್ದರು? ಕೇಂದ್ರದಿಂದ ಜಾತಿ ಸಮೀಕ್ಷೆ ಗೈಡಲೈನ್‌ ಬರುವ ಮುನ್ನವೇ ಇವರು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.

*ಜಾತಿ ಗಣತಿ ಅಲ್ಲ, ಸಮೀಕ್ಷೆಯಿದು:* ರಾಜ್ಯ ಕಾಂಗ್ರೆಸ್‌ ಸರ್ಕಾರ ನಡೆಸುತ್ತಿರುವುದು ಜಾತಿ ಜನಗಣತಿ ಅಲ್ಲ, ಅದು ಜಾತಿ ಸಮೀಕ್ಷೆ. 2004ರಲ್ಲೇ ಜಾತಿ ಮರು ಸಮೀಕ್ಷೆ ನಡೆಸುವುದಾಗಿ ಹೇಳಿ ಬಜೆಟ್‌ ಅಲ್ಲಿ ₹30 ಕೋಟಿ ಮೀಸಲಿಟ್ಟಿದ್ದರು. ಆಗ 2 ವರ್ಷ ಆಡಳಿತದಲ್ಲಿದ್ದು ಏನೂ ಮಾಡಲಿಲ್ಲ. 2013ರಿಂದ ಸಂಪೂರ್ಣ 5 ವರ್ಷ ಆಡಳಿತದಲ್ಲಿದ್ದರೂ ಏನೂ ಮಾಡಲಿಲ್ಲ. ಮೀಸಲಿಟ್ಟ ಮೊತ್ತ ಕರಗಿಸಿದರಷ್ಟೇ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಅವರು ಸಿಎಂ ಆದ ಮೇಲೆ ನಾಗಮೋಹನದಾಸ್‌ ಆಯೋಗ ರಚಿಸಿದರು. 2016ರಲ್ಲಿ ಅದರ ವರದಿ ಸ್ವೀಕರಿಸಲಿಲ್ಲ. 2018-19ರಲ್ಲಿ ಅವರದ್ದೇ ಸಮ್ಮಿಶ್ರ ಸರ್ಕಾರ ಇದ್ದರೂ ಜಾತಿ ಸಮೀಕ್ಷೆ ಪ್ರಯತ್ನ ಮಾಡಲಿಲ್ಲ. ಈಗ 20023-2025ರಲ್ಲಿ ಅಧಿಕಾರಕ್ಕೆ ಬಂದರೂ ಇನ್ನೂ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ದೂರಿದರು.

*165 ಕೋಟಿ ನುಂಗಿದ ಸರ್ಕಾರ:* ನಾಗಮೋಹನದಾಸ್‌ ವರದಿ ಸರಿ ಇರದೇ ಇದ್ದಿದ್ದರೆ ಹತ್ತಾರು ಬಾರಿ ಕ್ಯಾಬಿನೆಟ್‌ ಅಲ್ಲಿ ಏಕಿಟ್ಟಿರಿ? ಈ ವರದಿ ಜಾರಿಗೊಳಿಸಿಯೇ ಸಿದ್ಧ ಎಂದು ಉದ್ದುದ್ದ ಭಾಷಣ ಬಿಗಿದು ಎದೆ ತಟ್ಟಿ, ಮೇಜು ಕುಟ್ಟಿ ಹೇಳಿದ್ದೀರಿ?. ಆದರೆ, ಮಾಡಿದ್ದೇನು? ಎಂದು ಪ್ರಶ್ನಿಸಿದ ಸಚಿವರು, ತಮ್ಮ ಸರ್ಕಾರ ಇದಕ್ಕಾಗಿ ಮೀಸಲಿಟ್ಟ ₹165 ಕೋಟಿ ನುಂಗಿ ನೀರು ಕುಡಿದಿದೆ ಅಷ್ಟೇ ಎಂದು ಸಿಎಂ ವಿರುದ್ಧ ಕಿಡಿ ಕಾರಿದರು.

*ಕಾಂಗ್ರೆಸ್‌ 21 ವರ್ಷ ಮಾಡಿದ್ದೇನು?:* ಹಿಂದುಳಿದ ವರ್ಗದವರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ, ಕಾಂಗ್ರೆಸ್‌ ಪಕ್ಷಕ್ಕೆ ಯಾವುದೇ ಬದ್ಧತೆಯಿಲ್ಲ. ಸಾಮಾಜಿಕ ನ್ಯಾಯ, ಸಮಾನತೆ ಎನ್ನುತ್ತಾರಷ್ಟೇ. ಎಸ್ಸಿ-ಎಸ್ಟಿ, ಒಬಿಸಿ ಮತ್ತು ಮೇಲ್ವರ್ಗದಲ್ಲಿರುವ ಬಡವರ ಬಗ್ಗೆ ನೈಜ ಕಾಳಜಿಯಿಲ್ಲ. ಇದ್ದಿದ್ದರೆ ಕಾಂಗ್ರೆಸ್‌ 21 ವರ್ಷ ಏನು ಮಾಡಿತು? ಎಂದು ಪ್ರಲ್ಹಾದ ಜೋಶಿ ಪ್ರಶ್ನಿಸಿದರು.

*ಕಾಂಗ್ರೆಸ್‌ ಮೀಸಲಾತಿ ವಿರೋಧಿಸಿದ್ದು ಸುಳ್ಳೇ?:* ಡಾ.ಅಂಬೇಡ್ಕರ್‌ ಅವರು ಮೀಸಲಾತಿ ಕಲ್ಪಿಸಿದ ಬಗ್ಗೆ ಸಂಸತ್‌ನಲ್ಲಿ ನೆಹರು ವಿರೋಧಿಸಿದ್ದು, ತಿರಸ್ಕರಿಸಿದ್ದು ಸುಳ್ಳೇ? ರಾಜೀವ ಗಾಂಧಿ ಅವರು ಮೀಸಲಾತಿ ವಿರೋಧಿಸಿ ಭಾಷಣ ಮಾಡಿದ್ದು ಸುಳ್ಳೇ? ಮಂಡಲ ಆಯೋಗಕ್ಕೆ ವಿರೋಧ ಮಾಡಿದ್ದು ಸುಳ್ಳೇ? ಸಿದ್ದರಾಮಯ್ಯ ಅವರು ಮೊದಲು ಇದಕ್ಕೆ ಉತ್ತರಿಸಲಿ ಎಂದು ಸಚಿವ ಪ್ರಲ್ಹಾದ ಜೋಶಿ ಸವಾಲು ಹಾಕಿದರು.

*ವೋಟ್‌ ಬ್ಯಾಂಕ್‌ ಆಗಿ ನೋಡುತ್ತಿದ್ದಾರೆ ಸಿಎಂ:* ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ಪಕ್ಷಕ್ಕೆ ಯಾವುದೇ ಸಾಮಾಜಿಕ ಬದ್ಧತೆಯಿಲ್ಲ. ಹಿಂದುಳಿದವರ ಕಲ್ಯಾಣ ಮಾಡುವ ಯಾವ ಭಾವನೆ, ಮಾನಸಿಕತೆ ಇಲ್ಲವಾಗಿದೆ. ಈಗ ಬರೀ ಸುಳ್ಳು ಹೇಳುತ್ತ ಜನರ ದಾರಿ ತಪ್ಪಿಸುತ್ತಿದ್ದಾರೆ, ಸಮಾಜದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದರು.
ಸಮಾಜದ ಕಡುಬಡವರನ್ನು ವಂಚಿಸುವುದೇ ಕಾಂಗ್ರೆಸ್‌ನ ಡಿಎನ್‌ಎ. ಎಸ್ಸಿಎಸ್ಟಿ, ಓಬಿಸಿ ಮತ್ತು ಮುಸ್ಲಿಂರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇವಲ ವೋಟ್‌ ಬ್ಯಾಂಕ್‌ ಆಗಿ ನೋಡುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಇವರನ್ನೆಲ್ಲ ಒಗ್ಗುಗೂಡಿಸಿ ಅಧಿಕಾರಕ್ಕೆ ಬರುವುದಷ್ಟೇ ಇವರ ಗುರಿ ಎಂದು ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ ನಡೆಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು