ಇತ್ತೀಚಿನ ಸುದ್ದಿ
ಮಾಣಿ ಕರ್ನಾಟಕ ಪ್ರೌಢ ಶಾಲೆ: ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸಾಹಿತ್ಯ ರಚನಾ ಕಮ್ಮಟ, ಕವಿಗೋಷ್ಠಿ
03/11/2025, 22:01
ಜಯಾನಂದ ಪೆರಾಜೆ ಬಂಟ್ವಾಳ
info.reporterkarnataka@gmail.com
ಕರ್ನಾಟಕ ರಾಜ್ಯ ಬರಹಗಾರರ ವೇದಿಕೆ (ರಿ)ದ.ಕ. ಜಿಲ್ಲೆ, ಬಂಟ್ವಾಳತಾಲೂಕು ಘಟಕ, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು (ರಿ) ಹುಬ್ಬಳ್ಳಿ –  ತಾಲೂಕು ಸಮಿತಿ ಬಂಟ್ವಾಳ ಹಾಗೂ ಕರ್ನಾಟಕ ಪ್ರೌಢಶಾಲೆ ಮಾಣಿ  ಇವುಗಳ ಸಹಭಾಗಿತ್ವದಲ್ಲಿ ೭೦ ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಸಾಹಿತ್ಯ ರಚನಾ ಕಮ್ಮಟ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ನಡೆಯಿತು.
ನಿವೃತ್ತ ಸಂಸ್ಕೃತ ಶಿಕ್ಷಕ ಶಿರಂಕಲ್ಲು  ಕೃಷ್ಣ ಭಟ್  ಉದ್ಘಾಟಿಸಿದರು. ‘ಸಾಹಿತ್ಯದ ಅಭಿರುಚಿ ಮನೆಯಿಂದ ಆರಂಭವಾಗಿ ಶಾಲೆಯಲ್ಲಿ ಉನ್ನತಿ ಹೊಂದಿ ಸಮಾಜದಲ್ಲಿ ಪ್ರಸ್ತುತಿಗೊಳ್ಳಬೇಕು. ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಚಿಗುರುವುದು ಖಂಡಿತ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ  ಕ.ಚು.ಸಾ.ಪ. ಮತ್ತು ಕ.ರಾ. ಬ. ಸಂ. ದ.ಕ. ಜಿಲ್ಲಾ ಘಟಕ ಅಧ್ಯಕ್ಷ ಜಯಾನಂದ ಪೆರಾಜೆ ತರಬೇತಿ ನೀಡಿದರು.  ಕನ್ನಡ – ನಾಡು ನುಡಿ – ಸಂಸ್ಕೃತಿಯ ವೈಭವ,  ಕನ್ನಡ ಸಾಹಿತ್ಯ ಲೋಕದಲ್ಲಿ ದ. ಕ. ದ  ಕೊಡುಗೆ ಮತ್ತು ಭವಿಷ್ಯದ ಸಾಹಿತಿಗಳು ಹೇಗೆ ತಯಾರಿಗೊಳ್ಳಬೇಕೆಂದು ಸವಿವರವಾಗಿ ತಿಳಿಸಿದರು.


ಇದೇ ಸಂದರ್ಭ ಕಳೆದ ಎಸ್. ಎಸ್. ಎಲ್. ಸಿ. ಸಾಧಕಿ (೬೨೫/೬೦೩) ಮರ್ಯಂ ಸ್ವಾಬಿರಾರನ್ನು  ಗೌರವಿಸಲಾಯಿತು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಕಿರಣ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಾಲಾ ಸಂಚಾಲಕ ಹಾಜಿ ಕೆ. ಇಬ್ರಾಹಿಂ, ಮುಖ್ಯ ಶಿಕ್ಷಕ ಎಸ್. ಚೆನ್ನಪ್ಪ ಗೌಡ ಉಪಸ್ಥಿತರಿದ್ದರು.
ಬಳಿಕ ನಡೆದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕವಿ ಅಶೋಕ ಎನ್. ಕಡೇಶಿವಾಲಯ ವಹಿಸಿದ್ದರು. ವಿದ್ಯಾರ್ಥಿಗಳಾದ ಶ್ರುತಿಜ,  ರಕ್ಷಿತಾ, ನಮೃತ, ಕ.ಚು.ಸಾ.ಪ. ರಾಜ್ಯ ಮಹಿಳಾ ಪ್ರತಿನಿಧಿ ಶಾಂತಾ ಪುತ್ತೂರು,  ಕ.ಚು.ಸಾ. ಪ. ಬಂಟ್ವಾಳದ ಅಧ್ಯಕ್ಷ ರವೀಂದ್ರ ಕುಕ್ಕಾಜೆ, ಪುತ್ತೂರು ವಿವೇಕಾನಂದ ತಾಂತ್ರಿಕ ಕಾಲೇಜಿನ ಸಹ ಪ್ರಾಧ್ಯಾಪಕಿ ಮಾನಸ ಕೈಂತಜೆ , ಬಿ.ಎ. ವಿದ್ಯಾ ಸಂಸ್ಥೆ ತುಂಬೆಯ ಸಹ ಶಿಕ್ಷಕ ರಮೇಶ್  ಮೆಲ್ಕಾರ್, ಪದ್ಮನಾಭ ಪೂಜಾರಿ ಬಂಟ್ವಾಳ, ಪ್ರವೀಣ್ ಜಯ ವಿಟ್ಲ  ಕವನ ವಾಚಿಸಿದರು.
ಹಿಂದಿ ಶಿಕ್ಷಕ ಜಯರಾಮ ಕಾಂಚನ ಕಾರ್ಯಕ್ರಮ ಆಯೋಜಿಸಿ, ಕವನ ವಾಚಿಸಿ, ಕಾರ್ಯಕ್ರಮ ನಿರೂಪಿಸಿದರು. ಮೈತ್ರಿ ಮತ್ತು ತಂಡ ಪ್ರಾರ್ಥಿಸಿ, ಜೀವಿತ್ ಮತ್ತು ತಂಡ ಸಹಕರಿಸಿದರು.












