ಇತ್ತೀಚಿನ ಸುದ್ದಿ
ಮಾಣಿ: ಆಟೋರಿಕ್ಷಾಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದ ಕಾರು; ಚರಂಡಿಗೆ ಬಿದ್ದ ಆಟೋ; ಚಾಲಕ ಗಂಭೀರ ಗಾಯ
14/03/2025, 22:32

ಬಂಟ್ವಾಳ(reporterkarnataka.com): ಮಾಣಿ ಸಮೀಪದ ಸೂರಿಕುಮೇರು ಎಂಬಲ್ಲಿ
ಶುಕ್ರವಾರ ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರೊಂದು ಆಟೋರಿಕ್ಷಾಕ್ಕೆ ಹಿಂಭಾಗದಿಂದ ಡಿಕ್ಕಿ ಹೊಡೆದ ಪರಿಣಾಮ ಆಟೋ ಚರಂಡಿಗೆ ಬಿದ್ದು ಚಾಲಕ ಗಂಭೀರ ಗಾಯಗೊಂಡಿದ್ದಾರೆ.
ಕಲ್ಲಡ್ಕದ ಕಡೆಗೆ ಹೋಗುತ್ತಿದ್ದ ರಿಕ್ಷಾಕ್ಕೆ ಬೆಂಗಳೂರು ಕಡೆಯಿಂದ ಬರುತ್ತಿದ್ದ ಇನ್ನೋವಾ ಕಾರು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ನುಜ್ಜುಗುಜ್ಜಾಗಿ ಚರಂಡಿಗೆ ಬಿದ್ದಿದೆ. ಚಾಲಕನ ಸ್ಥಿತಿ ಗಂಭೀರವಾಗಿದ್ದು ಮತ್ತೋರ್ವ ಪ್ರಯಾಣಿಕ ತೀವ್ರ ಗಾಯಗೊಂಡು ಮಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.