ಇತ್ತೀಚಿನ ಸುದ್ದಿ
Mangaluru | ಪಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ ಸ್ತ್ರೀ ಆಯೋಗ ಉದ್ಘಾಟನೆ
19/09/2025, 18:19

ಮಂಗಳೂರು(reporterkarnataka.com): ನಗರದ ಪಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ ಸ್ತ್ರೀ ಆಯೋಗವನ್ನು ರಚಿಸಲಾಗಿದ್ದು, ಅದರ ಉದ್ಘಾಟನೆ ನೆರವೇರಿತು.
ಉದ್ಘಾಟನಾ ಸಮಾರಂಭದಲ್ಲಿ ಚರ್ಚ್ ಧರ್ಮಗುರು ವಂದನೀಯ ಫಾ. ರಿಚಾರ್ಡ್ ಅಲೋಸಿಯಸ್ ಕುವೆಲ್ಲೊ ಅವರು ಭಾಗವಹಿಸಿ ಮಾತನಾಡಿ, ಸ್ತ್ರೀ ಆಯೋಗ ಘಟಕಕ್ಕೆ ಶುಭ ಹಾರೈಸಿದರು.
ಘಟಕದ ಅಧ್ಯಕ್ಷರಾಗಿ ಶೀಲಾ ಡಿ ಸೋಜಾ, ಕಾರ್ಯದರ್ಶಿಯಾಗಿ ವೆಲೆಂಟಿನಾ ರೊಡ್ರಿಗಸ್, ಖಜಾಂಚಿಯಾಗಿ ಲಿಝೀ ಫೆರ್ನಾಂಡಿಸ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರೆಸಿಲ್ಲಾ ಫೆರ್ನಾಂಡಿಸ್, ಶಾಂತಿ ಮೊಂತೇರೊ, ಶೋಭಾ ಸಿಕ್ವೇರಾ, ಜೂಲಿಯಾನಾ ಫೆರ್ನಾಂಡಿಸ್ ಅವರು ಆಯ್ಕೆಯಾಗಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ಚರ್ಚ್ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ಆಸ್ಟಿನ್ ಮೊಂತೇರೊ, ಸರ್ವ ಆಯೋಗಗಳ ಸಂಚಾಲಕ ಜೋಸ್ಲಿನ್ ಲೋಬೊ, ಸ್ತ್ರೀ ಆಯೋಗದ ಕೇಂದ್ರೀಯ ಸಮಿತಿಯ ಪ್ರತಿನಿಧಿಗಳಾಗಿ ಕಾರ್ಯದರ್ಶಿ ಅಮಿತಾ ಫ್ರಾಂಕ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯೆ ಉಷಾ ಫೆರ್ನಾಂಡಿಸ್ ಅವರು ಉಪಸ್ಥಿತರಿದ್ದರು.