ಇತ್ತೀಚಿನ ಸುದ್ದಿ
ಮಂಗಳೂರು ವೆಂಕಟರಮಣ ದೇವಳದಲ್ಲಿ ಅನಂತ ಚತುರ್ದಶಿ ಆಚರಣೆ; ದೇವರಿಗೆ ವಿಶೇಷ ಅಲಂಕಾರ
19/09/2021, 13:56
ಚಿತ್ರ:ಮಂಜುನೀರೇಶ್ವಾಲ್ಯ ಮಂಗಳೂರು(reporterkarnataka.com) : ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಅನಂತ ಚತುರ್ದಶಿ ಪ್ರಯುಕ್ತ ಶ್ರೀ ದೇವರಿಗೆ ವಿಶೇಷ ಅನಂತ ದೇವರ ಅಲಂಕಾರಗೊಳಿಸಿ, ಅನಂತ ಕಲಶ ಪ್ರತಿಷ್ಠಾಪಿಸಿ ಪೂಜೆ ನಡೆಯಿತು.
ಅಲಂಕಾರ ಪ್ರಿಯ ಶ್ರೀ ಮಹಾವಿಷ್ಣು ದೇವರ ಪ್ರೀತ್ಯರ್ಥ ಶ್ರೀದೇವರಿಗೆ ದೇವಳದ ಅರ್ಚಕರಿಂದ ವಿಶೇಷ ಪೂಜೆ ಪುರಸ್ಕಾರಗಳು ನಡೆದವು . ಶ್ರೀ ದೇವಳದ ಮೊಕ್ತೇಸರರಾದ ಸಿ . ಎಲ್ . ಶೆಣೈ , ಕೆ . ಪಿ . ಪ್ರಶಾಂತ್ ರಾವ್ , ರಾಮಚಂದ್ರ ಕಾಮತ್ ಹಾಗೂ ನೂರಾರು ಭಗವತ್ ಭಕ್ತರು ಪಾಲ್ಗೊಂಡರು .