ಇತ್ತೀಚಿನ ಸುದ್ದಿ
ಮಂಗಳೂರು ವೆಂಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಏಕಾದಶಿ: ಕನಕಾಭಿಷೇಕ ಸಂಭ್ರಮ
15/11/2021, 20:35

ಚಿತ್ರ : ಮಂಜು ನೀರೇಶ್ವಾಲ್ಯ ಮಂಗಳೂರು(reporterkarnataka.com): ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ” ಕಾರ್ತಿಕ ಏಕಾದಶಿ ” ( ಪ್ರಭೋದಿನಿ ಏಕಾದಶಿ ) ಪ್ರಯುಕ್ತ ಶ್ರೀ ವೀರ ವೆಂಕಟೇಶ ದೇವರಿಗೆ ವಿಶೇಷವಾಗಿ ಪಂಚಾಮೃತ , ಗಂಗಾಭಿಷೇಕ , ಕನಕಾಭಿಷೇಕ , ಪುಳಕಾಭಿಷೇಕ ಗಳು ನೆರವೇರಿದವು.
ಬಳಿಕ ಸಾಯಂಕಾಲ ಶ್ರೀ ದೇವರ ಮಹಾಪೂಜೆ ನಡೆಯಿತು. ಈ ಸಂದರ್ಭದಲ್ಲಿ ದೇವಳದ ಮೊಕ್ತೇಸರರಾದ ಸಿ. ಎಲ್. ಶೆಣೈ , ಪ್ರಶಾಂತ್ ರಾವ್ , ರಾಮಚಂದ್ರ ಕಾಮತ್ , ತಂತ್ರಿಗಳಾದ ಪಂಡಿತ್ ನರಸಿಂಹ ಆಚಾರ್ಯ, ಪ್ರಧಾನ ಅರ್ಚಕರಾದ ವೇದಮೂರ್ತಿ ಚಂದ್ರಕಾಂತ್ ಭಟ್ , ವೇದಮೂರ್ತಿ ಹರೀಶ್ ಭಟ್ ಹಾಗೂ ನೂರಾರು ಭಜಕರು ಉಪಸ್ಥಿತರಿದ್ದರು.