ಇತ್ತೀಚಿನ ಸುದ್ದಿ
ಮಂಗಳೂರು ಸಮುದ್ರದಿಂದ 340 ಕೆಜಿ ತೂಕದ ಬೃಹತ್ ಅಂಬೂರು ಫಿಶ್ ಚಿಕ್ಕಮಗಳೂರಿಗೆ!: ಮೀನು ನೋಡಲು ಜನಜಾತ್ರೆ!!
20/08/2023, 13:30
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.ಕಂ
ಕರಾವಳಿ ಮಂಗಳೂರಿನ ಸಮುದ್ರದಿಂದ ಚಿಕ್ಕಮಗಳೂರು ನಗರದ ಖಾಸಗಿ ಮೀನು ಅಂಗಡಿಗೆ ಭಾರೀ ಗಾತ್ರದ ಅಂಬೂರು ಫಿಶ್ ಬಂದಿದೆ. ಇದು ಬರೋಬ್ಬರಿ 340 ಕೆಜಿ ಭಾರವಿದೆ.
ಭಾರೀ ಗಾತ್ರದ ಮೀನು ಕಂಡು ಸ್ಥಳೀಯರು ಅಚ್ಚರಿಗೊಂಡಿದ್ದಾರೆ. ಚಿಕ್ಕಮಗಳೂರಿನ ಉಪ್ಪಳ್ಳಿ ಬಡಾವಣೆಯ ಮೀನಿನ ಅಂಗಡಿಯಲ್ಲಿ ಮೀನನ್ನು ಮಾರಾಟಕ್ಕಿಟ್ಟಿದ್ದು ಭಾರೀ ಸಂಖ್ಯೆಯಲ್ಲಿ ಗ್ರಾಹಕರು ಹಾಗೂ ಕುತೂಹಲಿಗರು ಜಮಾಯಿಸಿದ್ದಾರೆ. ಈ ಮೀನು
ಕೆಜಿಗೆ 1000 ಕೊಡ್ತಿವಿ ಅಂದ್ರು ಸಿಗೊಲ್ಲ ಎನ್ನುತ್ತಾರೆ ಕೆಲವು ಮೀನುಪ್ರಿಯರು. ಮೀನಿನ ಗಾತ್ರ ನೋಡಿ ಅಂಗಡಿ ಬಳಿ ಜನ ಜಾತ್ರೆ ಸೇರಿದೆ. ಅಂಬೂರು ಮೀನಿನ ಮಾಂಸ ಕೊಳ್ಳಲು ಸಾಲುಗಟ್ಟಿ ಗ್ರಾಹಕರು ನಿಂತಿದ್ದಾರೆ.
ಸೌದಿ ಅರೇಬಿಯಾದಲ್ಲಿ ಈ ಮೀನಿಗೆ ಹೆಚ್ಚು ಬೇಡಿಕೆ ಇದೆಯಂತೆ. ಮೊದಲ ಬಾರಿಗೆ ಬೃಹತ್ ಗಾತ್ರದ ಅಂಬೂರು ಮೀನನ್ನು ಖಾಸಗಿ ಮೀನು ಅಂಗಡಿ ಮಾಲೀಕರು ತರಿಸಿದ್ದಾರೆ. ಗ್ರಾಹಕರ ಉತ್ಸಾಹ ನೋಡಿ ಮೀನಿನ ದರವನ್ನು ಅಂಗಡಿ ಮಾಲೀಕರು ಹೆಚ್ಚಿಸಿದ್ದಾರೆ.