2:08 PM Wednesday8 - January 2025
ಬ್ರೇಕಿಂಗ್ ನ್ಯೂಸ್
ಜ.10-12: ಸೌತ್ ಏಷ್ಯಾ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್-2025; ದೇಶ – ವಿದೇಶದ 2… ದೇಶದ ವೈವಿಧ್ಯತೆ, ಸೌಹಾರ್ದತೆ ಉಳಿಸಿಕೊಳ್ಳುವ ಮೂಲಕ ಆಂತರಿಕವಾಗಿ ಸಶಕ್ತವಾಗಬೇಕಿದೆ: ಧರ್ಮಸ್ಥಳದಲ್ಲಿ ಉಪ ರಾಷ್ಟ್ರಪತಿ… 60% ಕಮೀಷನ್; ನಿಮ್ಮ ಲೂಟಿ ಸಾಕ್ಷಿಗುಡ್ಡೆ ಇಲ್ಲಿದೆ ನೋಡಿ: ಸಿಎಂಗೆ ಕೇಂದ್ರ ಸಚಿವ… ಇದು 60 ಪರ್ಸೆಂಟ್‌ ಕಮಿಷನ್‌ ಸರ್ಕಾರ, ಗುತ್ತಿಗೆದಾರರಿಗೆ ನೀಡಲು ಹಣವಿಲ್ಲ: ಪ್ರತಿಪಕ್ಷ ನಾಯಕ… ಹಣ ಕೈಯಲ್ಲಿದ್ದರೂ ಸ್ಕಾಲರ್ ಶಿಪ್ ವಿತರಣೆಯಲ್ಲಿ ನಿರ್ಲಕ್ಷ್ಯ: ಅಧಿಕಾರಿಗಳ ಚಳಿ ಬಿಡಿಸಿದ ಸಿಎಂ… ಅರಣ್ಯ ಒತ್ತುವರಿ, ಕಳ್ಳಬೇಟೆ ತಡೆಗೆ ಗರುಡಾಕ್ಷಿ ಅಸ್ತ್ರ: ಆನ್ಲೈನ್ ಎಫ್ಐಆರ್ ವ್ಯವಸ್ಥೆಗೆ ಚಾಲನೆ ರಾಜ್ಯದಲ್ಲಿ ಎಚ್ ಎಂಪಿವಿ ಸೋಂಕು: ಜನರಲ್ಲಿ ಆತಂಕ ಬೇಡ, ಎಚ್ಚರ ಇರಲಿ; ಆರೋಗ್ಯ… ತೀರ್ಥಹಳ್ಳಿಯ ಕಿತ್ತನಗದ್ದೆ ನಾಡ್ತಿಯ ಹೊಳೆಯಲ್ಲಿ ಮರಳು ಮಾಫಿಯ ಜಾಲ ಪತ್ತೆ ಎಲ್ಲ ಎಸ್ಕಾಂ ಸಿಬ್ಬಂದಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯ: ಇಂಧನ ಸಚಿವ… ಊಟದಲ್ಲಿ ರಾಜಕೀಯ ಬೆರೆಸಬೇಡಿ: ಡಿಸಿಎಂ ಡಿ.ಕೆ.ಶಿವಕುಮಾರ್

ಇತ್ತೀಚಿನ ಸುದ್ದಿ

ಜ.8: ಮಂಗಳೂರು ಪುರಭವನದಲ್ಲಿ ಜಿಲ್ಲಾ ಬ್ಯಾರಿ ಪ್ರತಿನಿಧಿ ಸಮಾವೇಶ 1200 ಪ್ರತಿನಿಧಿಗಳು ಭಾಗಿ

07/01/2025, 11:30

ಮಂಗಳೂರು(reporterkarnataka.com): ಅಖಿಲ ಭಾರತ ಬ್ಯಾರಿ ಮಹಾಸಭಾ ವತಿಯಿಂದ ದ.ಕ. ಜಿಲ್ಲಾ ಬ್ಯಾರಿ ಪ್ರತಿನಿಧಿ ಸಮಾವೇಶವು ನಗರದ ಪುರಭವನದಲ್ಲಿ ಜನವರಿ 8ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಅಧ್ಯಕ್ಷ ಅಬ್ದುಲ್ ಅಝೀಝ್ ಬೈಕಂಪಾಡಿ ಹೇಳಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಕುರಿತು ಮಾಹಿತಿ ನೀಡಿದರು.
ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಮತ್ತು ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರಾಜ್ಯ, ಕರಾವಳಿಯಾದ್ಯಂತ ಮತ್ತು ಇತರೆಡೆಗಳಲ್ಲಿ ವಾಸಿಸುತ್ತಿರುವ ಸುಮಾರು 25 ಲಕ್ಷ ಜನಸಂಖ್ಯೆಯ ಬ್ಯಾರಿ ಜನಾಂಗದ ಗುರುತಿಸುವಿಕೆ, ಸರಕಾರದ ಪರಿಗಣನಾಪೇಕ್ಷ ಸಾಮಾಜಿಕ ಭದ್ರತೆ, ಶೈಕ್ಷಣಿಕ, ಸಾಂಸ್ಕೃತಿಕ, ರಾಜಕೀಯ ಸಾಮಾಜಿಕ ಶ್ರೇಯೋಭಿವೃದ್ಧಿಯ
ಧ್ಯೇಯೋದ್ದೇಶದಿಂದ ಈ ಸಮಾವೇಶವನ್ನು
ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದಲ್ಲಿ ಜಿಲ್ಲೆ ಮತ್ತು ಇತರಡೆಗಳಿಂದ ಸ್ಥಳೀಯಾಡಳಿತ ಸಂಸ್ಥೆ ಮತ್ತು ಜಮಾತ್ ಸಂಸ್ಥೆಗಳಿಂದ ಪ್ರತಿನಿಧಿಗಳು, ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದರು. ಜಿಲ್ಲೆಯಾದ್ಯಂತದ ಸುಮಾರು 1200ರಷ್ಟು ಬ್ಯಾರಿ ಜನಾಂಗದ ಪ್ರತಿನಿಧಿಗಳು, ಮುಖ್ಯಸ್ಥರು ಮತ್ತು ಪ್ರಮುಖರು ಭಾಗವಹಿಸಲಿದ್ದಾರೆ. ಕರ್ನಾಟಕ ರಾಜ್ಯ ಆಲೈಡ್ ಮತ್ತು ಹೆಲ್ತ್‌‌ ಮಂಡಳಿಯ ಅಧ್ಯಕ್ಷರಾದ ಡಾ. ಯು.ಟಿ.
ಇಫ್ತಿಕಾರ್ ಅಲಿ ಫರೀದ್‌ ರವರು ಅಖಿಲ ಭಾರತ ಬ್ಯಾರಿ ಮಹಾಸಭಾ ಸಂಘಟನೆಯ
ಗೌರವ ಅಧ್ಯಕ್ಷರಾಗಿದ್ದು ಅವರಿಗೆ ಸನ್ಮಾನ ಕಾರ್ಯಕ್ರಮ ನೆರವೇರಲಿದೆ. ಸಮಾವೇಶದಲ್ಲಿ ಬ್ಯಾರಿ ಜನಾಂಗದ ಸ್ಥಳೀಯ ಆಕಾಂಕ್ಷಿ ಪದವೀಧರ ವಿದ್ಯಾರ್ಥಿಗಳಿಗೆ ಯು.ಪಿ.ಎಸ್.ಸಿ. ಉನ್ನತ ಶಿಕ್ಷಣ ತರಬೇತಿ ‘ಜಮಾತಿಗೊಂದು ಐಎಎಸ್, ಐಪಿಎಸ್’ ಯೋಜನೆಗೆ ಚಾಲನೆ ನೀಡಲಾಗುತ್ತದೆ. ಸಮಾವೇಶದ ಅಧ್ಯಕ್ಷತೆಯನ್ನು ಸಂಘಟನೆಯ ಅಧ್ಯಕ್ಷರಾದ ಅಬ್ದುಲ್ ಅಝೀಝ್
ಬೈಕಂಪಾಡಿ ವಹಿಸಲಿದ್ದಾರೆ. ಸಮಾವೇಶದಲ್ಲಿ ಬ್ಯಾರಿ ಜನಾಂಗದ
ಉನ್ನತರು, ಪ್ರಮುಖರಾದ ವ್ಯಕ್ತಿಗಳು
ಭಾಗವಹಿಸಲಿದ್ದು, ಜನಾಂಗದ ಶ್ರೇಯೋಭಿವೃದ್ಧಿಯ ಬಗ್ಗೆ ಚರ್ಚೆ ನಡೆಯಲಿದೆ. ಸಮಾವೇಶದಲ್ಲಿ ಬ್ಯಾರಿ ಜನಾಂಗದ ಶ್ರೇಯೋಭಿವೃದ್ಧಿಯ ಉದ್ದೇಶಿತ ಕರ್ನಾಟಕ ರಾಜ್ಯ ಬ್ಯಾರಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯದ ಬಗ್ಗೆ ಪ್ರಸ್ತಾವನೆ ನಡೆಯಲಿದೆ. ಸಮಾವೇಶದಲ್ಲಿ ಬ್ಯಾರಿ ಜನಾಂಗವು ಮೂಲನಿವಾಸಿ ಜನಾಂಗವಾಗಿದ್ದು, ಬ್ಯಾರಿ
ಜನಾಂಗಕ್ಕೆ ಸಂವಿದಾನದ 6ನೇ ಶೆಡ್ಯೂಲ್ ನಲ್ಲಿ ಮಾನ್ಯತೆ ಪಡೆಯುವಿಕೆಯ ಬಗ್ಗೆ
ಪ್ರಸ್ತಾವನೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಬ್ಯಾರಿ ಜನಾಂಗದ ಸ್ಥಳೀಯಾಡಳಿತ ಸಂಸ್ಥೆಯ
ಪ್ರತಿನಿಧಿಗಳನ್ನು ಮತ್ತು ಜಮಾತ್‌ ಪ್ರತಿನಿಧಿಗಳನ್ನು ಆಹ್ವಾನಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮುಹಮ್ಮದ್ ಶಾಕಿರ್ ಹಾಜಿ, ಮೊಹಮ್ಮದ್ ಹನೀಫ್, ಹಮೀದ್ ಕಿನ್ಯಾ, ಮುಹಮ್ಮದ್ ಮೋನು, ಇ.ಕೆ.ಹುಸೈನ್, ಅಬ್ದುಲ್ ರಹಿಮಾನ್ ಕೋಡಿಜಾಲ್, ಅಬ್ದುಲ್ ಖಾದರ್, ಇಬ್ರಾಹಿಂ ಬಾವ ಬಜಾಲ್, ಇಕ್ಬಾಲ್ ಮೂಲ್ಕಿ, ಝಕರಿಯ ಮಲಾರ್, ಮುಹಮ್ಮದ್ ಹನೀಫ್ ದೇರಳಕಟ್ಟೆ, ಮೊಹಮ್ಮದ್ ಸಮೀರ್ ಆರ್.ಕೆ., ಅಶ್ರಫ್ ಬದ್ರಿಯಾ ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು