ಇತ್ತೀಚಿನ ಸುದ್ದಿ
Mangaluru | ಪಾಲ್ದನೆ ಚರ್ಚ್: ಸೇಕ್ರೆಡ್ ಹಾರ್ಟ್ ವಾರ್ಡ್ ನಲ್ಲಿ ಮೊಂತಿ ಫೆಸ್ತ್ ಆಚರಣೆ
15/09/2025, 20:14

ಮಂಗಳೂರು(reporterkarnataka.com): ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್ ನ ಸೇಕ್ರೆಡ್ ಹಾರ್ಟ್ ವಾರ್ಡ್ ನಲ್ಲಿ ಮೊಂತಿ ಫೆಸ್ತ್ ನ್ನು ಹೊಸ ತೆನೆಯ ಹಬ್ಬದ ಊಟದೊಂದಿಗೆ ಆಚರಿಸಲಾಯಿತು.
ಚರ್ಚ್ ಧರ್ಮಗುರು ವಂದನೀಯ ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ಮಾತನಾಡಿ ಇಂತಹ ಸಾಮೂಹಿಕ ಆಚರಣೆಗಳಿಂದ ವಾರ್ಡ್ ಮಟ್ಟದಲ್ಲಿ ಕೌಟುಂಬಿಕ ಸಂಬಂಧ, ಒಗ್ಗಟ್ಟು ಮತ್ತು ಏಕತೆಯ ಭಾವನೆ ಬೆಳೆಯುತ್ತದೆ. ಜತೆಗೆ ವಾರ್ಡ್ ನ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದು ಹೇಳಿದರು.
ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್ ಮತ್ತು ಕಾರ್ಯದರ್ಶಿ ಆಸ್ಟಿನ್ ಮೊಂತೇರೊ ಅವರು ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು. ವಾರ್ಡ್ ಮುಖ್ಯಸ್ಥರಾದ ಮೋಲಿ ಡಿ ಸೋಜಾ ಸ್ವಾಗತಿಸಿದರು. ವಾರ್ಡ್ ಪ್ರತಿನಿಧಿಗಳಾದ ರಿಚಾರ್ಡ್ ಮಾರ್ಟಿಸ್, ಬ್ಯಾಪ್ಟಿಸ್ಟ್ ಡಿ ಕುನ್ಹಾ, ಅನಿಲ್ ಮಸ್ಕರೇಂಞಸ್ ಉಪಸ್ಥಿತರಿದ್ದರು.
ಪಿಯುಸಿ ಪರೀಕ್ಷೆಯಲ್ಲಿ ಶೇ. 97.6 ಅಂಕ ಪಡೆದ ವಾರ್ಡ್ ಸದಸ್ಯೆ ಜೋಸ್ ಮಾ ಮರಿಯಾ ಮೋರಸ್ ಅವರನ್ನು ಸನ್ಮಾನಿಸಲಾಯಿತು. ವಾರ್ಡ್ ಸದಸ್ಯರಿಗಾಗಿ ವಿವಿಧ ಆಟೋಟಗಳನ್ನು ಏರ್ಪಡಿಸಲಾಗಿತ್ತು. ಮರ್ಲಿನ್ ಮಾರ್ಟಿಸ್ ಕಾರ್ಯಕ್ರಮ ನಿರೂಪಿಸಿದರು. ಡಾ. ಸ್ವೀಡಲ್ ಡಿ’ ಸೋಜಾ ವಂದಿಸಿದರು.