ಇತ್ತೀಚಿನ ಸುದ್ದಿ
Mangaluru | ಪಾಲ್ದನೆ ಚರ್ಚ್: ಕಾಲ್ವರಿ ವಾರ್ಡಿನ ವಾರ್ಷಿಕ ದಿನಾಚರಣೆ
22/09/2025, 10:35

ಮಂಗಳೂರು(reporterkarnataka.com): ನಗರದ ಪಾಲ್ದನೆ ಸಂತ ತೆರೆಸಾ ಚರ್ಚ್ ನ ಕಾಲ್ವರಿ ವಾರ್ಡಿನ ವಾರ್ಷಿಕ ದಿನಾಚರಣೆ ಭಾನುವಾರ ಚರ್ಚ್ ಸಭಾಂಗಣದಲ್ಲಿ ನಡೆಯಿತು.
ಅಸಿಸಿ ಪ್ರೆಸ್ ನ ನಿರ್ದೇಶಕ ಹಾಗೂ ಸೇವಕ್ ಕೊಂಕಣಿ ಪತ್ರಿಕೆಯ ಸಂಪಾದಕ ವಂದನೀಯ ಫಾ. ಚೇತನ್ ಲೋಬೊ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ ವಾರ್ಡ್ ದಿನಾಚರಣೆಯಿಂದ ಕುಟುಂಬದ ಏಕತೆ, ವಾರ್ಡಿನ ಸದಸ್ಯರಲ್ಲಿ ಅನ್ಯೋನ್ಯತೆ ಹಾಗೂ ಪರಸ್ಪರ ಹೊಂದಾಣಿಕೆ ಹೆಚ್ಚುತ್ತದೆ ಎಂದರು.
ಅತಿಥಿಯಾಗಿದ್ದ ಚರ್ಚ್ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್ ಮಾತನಾಡಿ ವಾರ್ಡ್ ದಿನಾಚರಣೆಯಿಂದ ವಾರ್ಡಿನ ಸದಸ್ಯರ ಪ್ರತಿಭೆಯನ್ನು ಗುರುತಿಸ ಬಹುದು ಹಾಗೂ ವಾರ್ಡಿನ ಒಗ್ಗಟ್ಟು ಹೆಚ್ಚಿಸಿ ಕೊಳ್ಳ ಬಹುದು ಎಂದರು.
ವಾರ್ಡಿನ ಮುಖ್ಯಸ್ಥರಾದ ಜೆಸಿಂತಾ ಫೆರ್ನಾಂಡಿಸ್ ಸ್ವಾಗತಿಸಿದರು. ವಾರ್ಡಿನ ಎಲ್ಲಾ ಸದಸ್ಯರಿಂದಲೂ ವಿವಿಧ ವಿನೋದಾವಳಿ ನಡೆಯಿತು.
ವಾರ್ಡಿನ ಹಿರಿಯ ನಾಗರಿಕರನ್ನು, ಸಾಧಕರನ್ನು ಮತ್ತು ಪ್ರತಿಭಾನ್ವಿತರನ್ನು ಸನ್ಮಾನಿಸಲಾಯಿತು. ವಂದನೀಯ ಫಾ. ಚೇತನ್ ಲೋಬೊ ಅವರನ್ನು ಕೂಡಾ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರತಿನಿಧಿಗಳಾದ ವಿನ್ಸೆಂಟ್ ಬಾರೆಟ್ಟೊ ಮತ್ತು ವೆಲೆಂಟಿನಾ ರೊಡ್ರಿಗಸ್ ಉಪಸ್ಥಿತರಿದ್ದರು. ಮಾರಿಯೋ ರೇಗೊ ವಂದಿಸಿದರು. ಲೊಲಿಟಾ ಪ್ರೆಂಟೇರಿಯೋ ಕಾರ್ಯಕ್ರಮ ನಿರೂಪಿಸಿದರು. ಲ್ಯಾನ್ಸಿ ಪಿಂಟೊ ಸಹಕರಿಸಿದರು.