6:11 PM Sunday15 - February 2026
ಬ್ರೇಕಿಂಗ್ ನ್ಯೂಸ್
ಅಮೆರಿಕ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ: ರೈತರು ತೋಳಿಗೆ ಕಪ್ಪುಪಟ್ಟಿ ಕಟ್ಟಿ… ನಿಯಂತ್ರಣ ತಪ್ಪಿದ ಕೆಎಸ್‌ಆರ್‌ಟಿಸಿ ಬಸ್; ಮೈಸೂರಿನಲ್ಲಿ ಸರಣಿ ಅಪಘಾತ; ಟ್ರಾಫಿಕ್ ಜಾಮ್ ಕೊಡಗಿನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್: ಮಡಿಕೇರಿ ಸಮೀಪ ರೆಸಾರ್ಟ್ ಉದ್ಘಾಟನೆ ಸೋಮವಾರಪೇಟೆ: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು,… ನಟ ದರ್ಶನ್ ಬಿಡುಗಡೆಗೆ ಪ್ರಾರ್ಥಿಸಿ ಅಭಿಮಾನಿಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ: 100 ಕಿಮೀ. ನಡಿಗೆ Kodagu | ಮಡಿಕೇರಿ ನಗರಸಭೆ: ಬಯಲು ಪ್ರದೇಶದಲ್ಲಿ ಮಲ ಮೂತ್ರ ವಿಸರ್ಜನೆ ನಿಷೇಧ ಒಟಿಪಿ ಸೋರಿಕೆ: ವಂಚನೆ ತಡೆಗಟ್ಟಲು ಏರ್‌ ಟೆಲ್‌ ನಿಂದ ಹೊಸ ಎಐ ಚಾಲಿತ… ಮಾಜಿ ಪ್ರಧಾನಿ ಎಚ್ಡಿಡಿ ಮಧ್ಯಪ್ರವೇಶ: ಕಾಫಿ ತೋಟಗಳ ಆನ್-ಲೈನ್ ಹರಾಜು ತಕ್ಷಣವೇ ಸ್ಥತಿತಗೊಳಿಸುವಂತೆ… ಕಾಲವೇ ಉತ್ತರ ಕೊಡುತ್ತೆ: ಸೋನಿಯಾ, ರಾಹುಲ್, ಪ್ರಿಯಾಂಕ ಭೇಟಿ ಬಳಿಕ ಡಿಸಿಎಂ ಡಿಕೆಶಿ… ಶಿವಣ್ಣನ ಶಿವಭಕ್ತಿ: ಶಿವರಾತ್ರಿಯ ಅಂಗವಾಗಿ 37 ವರ್ಷಗಳಿಂದ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ!

ಇತ್ತೀಚಿನ ಸುದ್ದಿ

Mangaluru | ಪಾಲ್ದನೆ ಚರ್ಚ್ ವಾರ್ಷಿಕ ಹಬ್ಬ: ಸಮುದಾಯ ದಿನಾಚರಣೆ; ಚರ್ಚ್ ನ ವಿಂಶತಿ ಸಂಭ್ರಮ

15/02/2026, 17:53

ಮಂಗಳೂರು(reporterkarnataka.com): ನಗರದ ಪಾಲ್ದನೆ ಸಂತ ತೆರೆಸಾ ಚರ್ಚ್ ನ ವಾರ್ಷಿಕ ಹಬ್ಬ,ಸಮುದಾಯ ದಿನಾಚರಣೆ ಮತ್ತು ಚರ್ಚ್ ಗೆ ಇಪ್ಪತ್ತು ವರ್ಷ ತುಂಬಿದ ಸಂಭ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಬೆಳಗ್ಗೆ 8 ಗಂಟೆಗೆ ಹಬ್ಬದ ಸಂಭ್ರಮದ ಬಲಿ ಪೂಜೆ ನಡೆಯಿತು. ಬಲಿ ಪೂಜೆಯ ನೇತೃತ್ವವನ್ನು ವಹಿಸಿದ್ದ ಬೆಂಗಳೂರಿನ ಸೈಂಟ್ ಜಾನ್ ಮೆಡಿಕಲ್ ಕಾಲೇಜಿನ ಅಸೋಸಿಯೇಟ್ ಡೈರೆಕ್ಟರ್ ವಂದನೀಯ ಫಾ. ಅಜಿತ್ ಮಿನೇಜಸ್ ತಮ್ಮ ಧರ್ಮೋಪದೇಶದಲ್ಲಿ ಸಮುದಾಯ ದಿನಾಚರಣೆಯ ಮಹತ್ವವನ್ನು ವಿವರಿಸಿ, ಮನುಷ್ಯ ಸಂಘ ಜೀವಿಯಾಗಿ ಸಮುದಾಯದಲ್ಲಿ ಜೀವಿಸುತ್ತಾನೆ. ತನ್ನ ಮನೆ, ತಮ್ಮ ನೆರೆ ಕರೆ, ತನ್ನ ವಾರ್ಡ್, ತನ್ನ ಚರ್ಚ್ ನಿಂದ ಬೇರ್ಪಟ್ಟು ಜೀವಿಸಿದರೆ ಆತ ಒಂಟಿಯಾಗುತ್ತಾನೆ. ಯಾರೇ ಆದರೂ ಒಳ್ಳೆಯ ಕೆಲಸ ಮಾಡುವಾಗ ಟೀಕೆ ಟಿಪ್ಪಣಿ ಬರುವುದು ಸಹಜ. ಅದನ್ನು ಮೆಟ್ಟಿ ನಿಂತು ತನ್ನ ಕೆಲಸ ಮುಂದುವರಿಸ ಬೇಕು. ಸಮಾಜದಲ್ಲಿ ಸಂಘ ಜೀವಿಯಾಗಿ ಬದುಕಿದರೆ ಯಶಸ್ಸು ಹಾಗೂ ಮನಶ್ಯಾಂತಿ ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.
ಬಲಿ ಪೂಜೆಯಲ್ಲಿ ಭಾಗವಹಿಸಿದ್ದ ಕಾರವಾರ ಧರ್ಮ ಕ್ಷೇತ್ರದ ವಂದನೀಯ ಫಾ. ಪಾವುವಸ್ತೀನ್ ಪೂರ್ತಾಡೋ ಅವರು ಭಕ್ತ ವೃಂದವನ್ನು ಆಶೀರ್ವದಿಸಿದರು.
ಬಲಿ ಪೂಜೆಯಲ್ಲಿ ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ಹಬ್ಬ ಆಚರಣೆಗೆ ಸಹಕರಿಸಿದವರನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.


ಸಂಜೆ ನಡೆಯುವ ಸಭಾ ಕಾರ್ಯಕ್ರಮಕ್ಕೆ ವಂದನೀಯ ಫಾ. ಅಜಿತ್ ಮಿನೇಜಸ್ ಮತ್ತು ಇತರ ಗುರುಗಳು ಶುಭ ಕೋರಿದರು ಹಾಗೂ ಊಟದ ವ್ಯವಸ್ಥೆಯ ಮೇಲೆ ಆಶೀರ್ವಚನ ನೀಡಿದರು.
ಚರ್ಚ್ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ರೋಷನ್ ಮೊಂತೇರೊ, ಡಿಯಾಕೋನ್ ರೋವಿನ್ ಲೋಪೆಜ್, ಆಹಾರ ಸಮಿತಿಯ ಸಂಯೋಜಕ ಆಲ್ಬನ್ ಮೊಂತೇರೊ, ಸಾಂಸ್ಕೃತಿಕ ಸಮಿತಿಯ ಸಂಚಾಲಕ ಮಾರಿಯೋ ರೇಗೊ, ಆಧ್ಯಾತ್ಮಿಕ ಸಮಿತಿಯ ಸಂಯೋಜಕ ಆಸ್ಟಿನ್ ಮೊಂತೇರೊ, ಗಾಯನ ಮಂಡಳಿಯ ಅಧ್ಯಕ್ಷರಾದ ಲಿಝಿ ಫೆರ್ನಾಂಡಿಸ್ ಮತ್ತು ಇತರರು ಉಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು