5:29 PM Tuesday12 - May 2026
ಬ್ರೇಕಿಂಗ್ ನ್ಯೂಸ್
ಬೆಂಗಳೂರು ಉಪನಗರ ರೈಲು ಯೋಜನೆ: 𝟭𝟱𝟯 ಮೆಟ್ರೋ ಕೋಚ್ ಗಳ ಖರೀದಿಗೆ ಐಸಿಎಫ್… ಚಿಕ್ಕಮಗಳೂರು | ಬ್ರೇಕ್ ಫೇಲ್: ಬಸ್ ನಿಲ್ದಾಣದ ಕಾಂಪೌಂಡ್‌ಗೆ ಡಿಕ್ಕಿ ಹೊಡೆದ ಸರಕಾರಿ… ಶೃಂಗೇರಿ ಕ್ಷೇತ್ರದ ಅಂಚೆ ಮತ ಗೊಂದಲ: ಕಾಂಗ್ರೆಸ್​​ನ ರಾಜೇಗೌಡರಿಗೆ ಮತ್ತೆ ದಕ್ಕಿದ ಶಾಸಕ… ದೇಶದ ಜನತೆಗೆ ಮೋದಿ ಮಿತವ್ಯಯದ ಕರೆ: ವಾಗ್ದಾಳಿ ನಡೆಸಿದ ರಾಹುಲ್‌ಗೆ ಬಿಜೆಪಿ ತಿರುಗೇಟು ಶೃಂಗೇರಿ ಕ್ಷೇತ್ರ ಮರು ಎಣಿಕೆ: ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ: ಮತ್ತೆ ರಾಜೇಗೌಡ… ಪತಿಯೊಂದಿಗೆ ಜಗಳವಾಡಿ 8ನೇ ಮಹಡಿಯಿಂದ ಜಿಗಿದು ಮಹಿಳೆ ಆತ್ಮಹತ್ಯೆ: ಸಾಮಾಜಿಕ ಜಾಲತಾಣಗಳಲ್ಲಿ ದೃಶ್ಯ… ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ತುಟ್ಟಿಭತ್ಯೆ ಶೇ. 1.50ರಷ್ಟು ಹೆಚ್ಚಳ: ಸರ್ಕಾರದ… ಸುವೇಂದು ಪಿಎ ಚಂದ್ರನಾಥ್ ರಾಥ್ ಹತ್ಯೆ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್: ಸಿಐಡಿ ತನಿಖೆ ತೈಲ ಬಳಕೆಯಲ್ಲಿ ಮಿತಿಯಿರಲಿ, ವರ್ಷದ ಮಟ್ಟಿಗೆ ಚಿನ್ನ ಖರೀದಿಸಬೇಡಿ::ಪ್ರಧಾನಿ ಮೋದಿ ಮಹತ್ವದ ಕರೆ ತಿರುಚಿ ಪೂರ್ವ ಕ್ಷೇತ್ರಕ್ಕೆ ತಮಿಳುನಾಡು ಸಿಎಂ ವಿಜಯ್ ರಾಜೀನಾಮೆ

ಇತ್ತೀಚಿನ ಸುದ್ದಿ

ಮಂಗಳೂರು: ಆ.7-10ರ ವರೆಗೆ ‘ಮಿಸ್ ಡಿವೈನ್ ದಿವಾ’ ರಾಷ್ಟ್ರಮಟ್ಟದ ಸೌಂದರ್ಯ ಸ್ಪರ್ಧೆ

17/07/2025, 10:04

ಚಿತ್ರ:ಅನುಷ್ ಪಂಡಿತ್ ಮಂಗಳೂರು

ಮಂಗಳೂರು(reporterkarnataka.com): ಅಸ್ತ್ರ ಗ್ರೂಫ್ ಆಶ್ರಯದಲ್ಲಿ‘ಮಿಸ್ ಡಿವೈನ್ ದಿವಾ’ ರಾಷ್ಟ್ರಮಟ್ಟದ ಫ್ಯಾಷನ್ ಪೇಜೆಂಟ್ ಸೌಂದರ್ಯ ಸ್ಪರ್ಧೆ ಮತ್ತು ಗ್ರ್ಯಾಂಡ್ ಫಿನಾಲೆ ನಗರದ ಅವತಾರ್ ಹೋಟೆಲ್‌ನಲ್ಲಿ ಆ.೭ರಿಂದ ೧೦ರವರೆಗೆ ಜರಗಲಿದೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಯೋಜಕ ಸಾಹಿಲ್ ಅವರು, ‘ಮಿಸ್ ಡಿವೈನ್ ಕರಾವಳಿಗೆ ಹೊಸ ಅವಕಾಶದ ಬಾಗಿಲು. ಜಗತ್ತಿಗೆ ಮಂಗಳೂರಿನ ಸೌಂದರ್ಯವನ್ನು ಪಸರಿಸಲು ಸೂಕ್ತ ವೇದಿಕೆ. ಇದರಲ್ಲಿ ಕಾಶ್ಮೀರದಿಂದ ತೊಡಗಿ ದೇಶದ ವಿವಿಧ ಭಾಗಗಳ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಅಜಯ್ ಕುಮಾರ್ ಹಾಗೂ ಸಾಹಿಲ್ ಈವೆಂಟ್ಸ್ ಆಶ್ರಯದಲ್ಲಿ ಸ್ಪರ್ಧೆ ಆಯೋಜನೆಯಾಗಿದೆ.



ಕರಾವಳಿಯ ಪ್ರವಾಸೋದ್ಯಮಕ್ಕೆ ಇದೊಂದು ಹೊಸ ಸಾಧ್ಯತೆಯ ದಾರಿ’ ಎಂದು ಅವರು ನುಡಿದರು.
ಅಸ್ತ್ರ ಗ್ರೂಪ್ ಸಿಇಒ ಲಂಚುಲಾಲ್ ಕೆ.ಎಸ್. ಮಾತನಾಡಿ, ‘ದೇಶದ ವಿವಿಧ ಭಾಗಗಳಿಂದ ಆಯ್ದ ೫೦ ಮಂದಿ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದು, ಮಂಗಳೂರಿನ ಹೆಸರು ರಾಷ್ಟ್ರಮಟ್ಟದಲ್ಲಿ ಮಿಂಚಬೇಕು ಮತ್ತು ಇಲ್ಲಿನ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಡಿವೈನ್ ದಿವಾ ಸ್ಪರ್ಧೆಗೆ ಅಸ್ತ್ರ ಸಂಸ್ಥೆಯು ಪ್ರಾಯೋಜಕತ್ವ ವಹಿಸಿದೆ. ಇದರಿಂದ ಹೊಸಬರಿಗೆ ಅವಕಾಶ ಸಿಗಲಿದೆ’ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಅಜಯ್ ಕುಮಾರ್, ಮೋಹನ್ ದಾಸ್ ರೈ, ಮಿಸ್ ಸೆಲೆಸ್ಟಿಯಲ್ ಆಫ್ ವರ್ಲ್ಢ್ ಸೃಷ್ಟಿವೇಣು, ಪ್ರಮುಖರಾದ ಪಮ್ಮಿ ಕೊಡಿಯಾಲ್‌ ಬೈಲ್, ಮೋಹನ್‌ದಾಸ್ ರೈ, ಸಂದೀಪ್ ಶೆಟ್ಟಿ, ಯಶಿಕಾ, ಫವಾಜ್, ಅಭಿಷೇಕ್, ಇಮ್ರಾನ್, ಅಜಿತ್ ಸಿಂಗ್ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು