ಇತ್ತೀಚಿನ ಸುದ್ದಿ
ಮಂಗಳೂರು ಲಾಡ್ಜ್ ನಲ್ಲಿ ಕೇರಳದ ದಂಪತಿ ಆತ್ಮಹತ್ಯೆ: ಒಂದೇ ಫ್ಯಾನ್ ಗೆ ನೇಣು ಹಾಕಿಕೊಂಡ ಸತಿಪತಿ
08/02/2023, 18:33

ಮಂಗಳೂರು(reporterkarnataka.com): ಕೇರಳ ಮೂಲದ ದಂಪತಿ ನಗರದ ಫಳ್ನೀರಿನ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ.
ಫಳ್ನೀರಿನ ಲಾಡ್ಜ್ ನಲ್ಲಿ ತಂಗಿದ್ದ ರವೀಂದ್ರನ್(56) ಮತ್ತು ಅವರ ಪತ್ನಿ ಸುಧಾ (50)ಒಂದೇ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತಪಟ್ಟವರನ್ನು ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಬ ನಿವಾಸಿಗಳು ಎಂದು ಗುರುತಿಸಲಾಗಿದೆ. ಕಣ್ಣೂರಿನಲ್ಲಿ ಇವರು ಬಟ್ಟೆ ವ್ಯಾಪಾರ ಮಾಡುತ್ತಿದ್ದರು ಎನ್ನಲಾಗಿದೆ.
ಫೆ.6ರಂದು ಮಧ್ಯಾಹ್ನ 11 ಗಂಟೆಗೆ ಲಾಡ್ಜ್ ನಲ್ಲಿ ರೂಂ ಪಡೆದಿದ್ದ ದಂಪತಿ ರಾತ್ರಿ ಹೊಟೇಲ್ ಸಿಬ್ಬಂದಿಯಲ್ಲಿ ಊಟ ತರಿಸಿಕೊಂಡು ಊಟ ಮಾಡಿದ್ದರು. ಎರಡು ದಿನ ಕಳೆದರೂ ಬಾಗಿಲು ತೆರೆದಿಲ್ಲವೆಂದು ಬುಧವಾರ ಬೆಳಗ್ಗೆ ಬಾಗಿಲು ಒಡೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಒಂದೇ ಫ್ಯಾನಿಗೆ ಇಬ್ಬರೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿನಲ್ಲೂ ದಂಪತಿ ಒಂದಾಗಿದ್ದಾರೆ. ಸಾವಿಗೆ ಕಾರಣ ತಿಳಿದು ಬಂದಿಲ್ಲ.