7:36 PM Tuesday2 - December 2025
ಬ್ರೇಕಿಂಗ್ ನ್ಯೂಸ್
ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ…

ಇತ್ತೀಚಿನ ಸುದ್ದಿ

ಮಂಗಳೂರು ದಸರಾ ಮೆರವಣಿಗೆಗೆ ಈ ಬಾರಿ ಸೌಹಾರ್ದತೆಯ ಟಚ್: ಪ್ರಥಮ ಬಾರಿಗೆ ಐಕ್ಯತೆಯ ಸ್ತಬ್ದಚಿತ್ರ

21/10/2023, 22:08

ಮಂಗಳೂರು(reporterkarnataka.com): ನಾಡ ಹಬ್ಬ ದಸರಾ ನಾಡಿನ ಸಾಂಸ್ಕೃತಿಕ ಹಬ್ಬವಾಗಿದ್ದು ಜನಸಾಮಾನ್ಯರೆಲ್ಲರೂ ಭಾವೈಕ್ಯತೆಯಿಂದ ದಸರಾ ಸಂಭ್ರಮದಲ್ಲಿ ಪಾಲ್ಗೊಂಡಾಗ ನಾಡಿನ ಐಕ್ಯತೆ ಮತ್ತು ಸಮಗ್ರತೆಯನ್ನು ಮತ್ತಷ್ಟು ಗಟ್ಟಿಗೊಳಿಸಬಹುದು.ಈ ನಿಟ್ಟಿನಲ್ಲಿ ಮಂಗಳೂರು ದಸರಾದಲ್ಲಿ ಸರ್ವ ಜನಾಂಗದ ಜನರನ್ನು ಒಂದುಗೂಡಿಸುವ ಒಂದು ಸಣ್ಣ ಪ್ರಯತ್ನದ ಭಾಗವಾಗಿ ಈ ಬಾರಿಯ ಮಂಗಳೂರು ದಸರಾದ ವೈಭವದ ಮೆರವಣಿಗೆಯಲ್ಲಿ “ಸರ್ವ ಧರ್ಮದ ಜನತೆ ಕಟ್ಟಿ ಬೆಳೆಸಿದ ಮಂಗಳೂರು” ಎಂಬ ಕಣ್ಣೋಟದಿಂದ ಅಳವಡಿಸುವ ಟ್ಯಾಬ್ಲೋವನ್ನು ದಸರಾ ಮೆರವಣಿಗೆಯಲ್ಲಿ ಪ್ರದರ್ಶಿಸಿ ಮಂಗಳೂರಿನ ಅಭಿವೃದ್ಧಿಯಲ್ಲಿ ಸರ್ವ ಧರ್ಮದ ಜನರ ಕೊಡುಗೆಗಳನ್ನು ಸಮಾಜಕ್ಕೆ ನೆನಪಿಸುವ ಅಪೂರ್ವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಸ್ತಬ್ದಚಿತ್ರವನ್ನು ದ.ಕ‌.ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವ್ರದ್ದಿ ಸಂಘ(ರಿ), ಸಂತ ಮದರ್ ತೆರೇಸಾ ವಿಚಾರ ವೇದಿಕೆ, ಮಂಗಳೂರು ಹಾಗೂ ಭಗತ್ ಸಿಂಗ್ ವಾರಿಯರ್ಸ್‌ ಮಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಅಯೋಜಿಸಲಾಗಿದ್ದು, ಇದರ ಯಶಸ್ವಿಗೆ ಸರ್ವ ಧರ್ಮದ ಜನತೆ ಸಂಪೂರ್ಣ ಸಹಕಾರ ನೀಡಬೇಕೆಂದು ವಿನಂತಿಸಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು