ಇತ್ತೀಚಿನ ಸುದ್ದಿ
ಮಂಗಳೂರು: ಬಿಜೆಪಿ ಹೈವೋಲ್ಟೆಜ್ ಸಭೆ; ಅಮಿತ್ ಶಾ ಗೆಲ್ಲಲ್ಲೇ ಬೇಕೆಂದು ಖಡಕ್ ಸೂಚನೆ ಕೊಟ್ಟ 2 ಕ್ಷೇತ್ರಗಳು ಯಾವುದು?
12/02/2023, 10:37

ಮಂಗಳೂರು(reporterkarnataka.com):: ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಕರಾವಳಿ ಜಿಲ್ಲೆಯ ಮಂಗಳೂರು ಕ್ಷೇತ್ರ ಹಾಗೂ ಮಲೆನಾಡು ಜಿಲ್ಲೆಯ ಶೃಂಗೇರಿ ಕ್ಷೇತ್ರವನ್ನು ಗೆಲ್ಲಲ್ಲೇ ಬೇಕೆಂದು ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ಪಾಳಯದಲ್ಲಿ ಚಾಣುಕ್ಯ ಎಂದು ಕರೆಸಿಕೊಂಡಿರುವ ಅಮಿತ್ ಶಾ ಕಟ್ಟಪ್ಪಣೆ ಕೊಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಅಮಿತ್ ಶಾ ಅವರು ಮಂಗಳೂರಿನಲ್ಲಿ ಕರಾವಳಿ ಹಾಗೂ ಮಲೆನಾಡಿನ 6 ಜಿಲ್ಲೆಗಳ ಪ್ರತಿನಿಧಿಗಳ ಹೈವೋಲ್ಟೆಜ್ ಸಭೆ ನಡೆಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಶಾ, ಈ ಬಾರಿ ಮಂಗಳೂರು ಮತ್ತು ಶೃಂಗೇರಿ ಕ್ಷೇತ್ರ ಯಾವುದೇ ಕಾರಣಕ್ಕೂ ಕೈತಪ್ಪಬಾರದು ಎಂದು ಪಕ್ಷದ ಮುಖಂಡರಿಗೆ ಖಡಕ್ ಸೂಚನೆ ನೀಡಿದ್ದಾರೆ. ಇದರ ಜತೆಗೆ ಪಕ್ಷದ ಮುಖಂಡರಿಗೆ ಕೆಲ ಟಾಸ್ಕ್ ಹಾಗೂ ಟಾರ್ಗೆಟ್ ನೀಡಿದ್ದಾರೆ ಎನ್ನಲಾಗಿದೆ.
ಮಂಗಳೂರು ಶಾಸಕ ಯು.ಟಿ. ಖಾದರ್ ಹಾಗೂ ಶೃಂಗೇರಿ ಕ್ಷೇತ್ರದ ಶಾಸಕ ರಾಜೇಗೌಡ ಅವರ ಮೇಲೆ ಶಾ ಕಣ್ಣು ನೆಟ್ಟಿದ್ದು, ಅವರಿಂದ ಈ ಬಾರಿ ಕ್ಷೇತ್ರಗಳನ್ನು ಕಸಿಯಲೇಬೇಕು ಎಂದು ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.