ಇತ್ತೀಚಿನ ಸುದ್ದಿ
Mangaluru | ಸೈಂಟ್ ತೆರೆಸಾ ಆಫ್ ಲಿಶುಕ್ಸ್ ಅವರ ಸಂತ ಪದವಿಯ ಶತಮಾನೋತ್ಸವ
08/11/2025, 10:03
ಮಂಗಳೂರು(reporterkarnataka.com): ಸೈಂಟ್ ತೆರೆಸಾ ಆಫ್ ಲಿಶುಕ್ಸ್ ಅವರಿಗೆ ಸಂತ ಪದವಿ ಪ್ರಾಪ್ತವಾಗಿ ನೂರು ವರ್ಷಗಳಾಗಿದ್ದು, ಶತಮಾನೋತ್ಸವ ಸಂಭ್ರಮದ ಬಲಿ ಪೂಜೆಯು ನವೆಂಬರ್ 9 ರಂದು ಅಪರಾಹ್ನ 3.30ಕ್ಕೆ ನಗರದ ಬೆಂದೂರು ಸೈಂಟ್ ಸೆಬಾಸ್ಟಿಯನ್ ಚರ್ಚಿನಲ್ಲಿ ನಡೆಯಲಿದೆ.

ಮಂಗಳೂರು ಬಿಷಪ್ ಅತಿ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ ಅವರು ಬಲಿ ಪೂಜೆಯ ಮುಖ್ಯ ಕಾರ್ಮಿಕತ್ವ ವಹಿಸುವರು.
ಒಸಿಡಿ ಅಂದರೆ ಕಾರ್ಮೆಲ್ ಸಂಸ್ಥೆಯ ಧರ್ಮಗುರುಗಳು ಮತ್ತು ಧರ್ಮ ಭಗಿನಿಯರು, ಅಪೋಸ್ತಲಿಕ್ ಕಾರ್ಮೆಲ್, ಬೆಥನಿ ಮತ್ತು ಸಿ. ಎಸ್.ಎಸ್. ಟಿ. ಸಂಸ್ಥೆಯ ಹಾಗೂ ಕ್ರೈಸ್ತ ವಿಶ್ವಾಸಿಗಳ ಸಂಘ ಸಂಸ್ಥೆಗಳು ಸೇರಿಕೊಂಡು ಸಂಯುಕ್ತವಾಗಿ ಈ ಬಲಿ ಪೂಜೆಯನ್ನು ಆಯೋಜನೆ ಮಾಡಿವೆ.
ಬಲಿ ಪೂಜೆಯ ಬಳಿಕ ಸಭಾ ಕಾರ್ಯಕ್ರಮದಲ್ಲಿ ಬಿಷಪ್ ಅತಿ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ, ಕಾರ್ಮೆಲ್ ಸಂಸ್ಥೆಯ ಕರ್ನಾಟಕ – ಗೋವಾ ಪ್ರಾಂತ್ಯದ ಪ್ರೊವಿನ್ಶಿಯಲ್ ಅತಿ ವಂದನೀಯ ಫಾ. ಸಿಲ್ವೆಸ್ಟರ್ ಡಿ ಸೋಜಾ, ಬೆಥನಿ ಸಂಸ್ಥೆಯ ಸುಪೀರಿಯರ್ ಜನರಲ್ ಅತಿ ವಂದನೀಯ ಸಿಸ್ಟರ್ ರೋಸ್ ಸೆಲಿನ್, ಅಪೋಸ್ತಲಿಕ್ ಕಾರ್ಮೆಲ್ ಸಂಸ್ಥೆಯ ಪ್ರೊವಿನ್ಶಿಯಲ್ ಅತಿ ವಂದನೀಯ ಸಿಸ್ಟರ್ ಮರಿಯಾ ನವೀನಾ, ಸಿಸ್ಟರ್ ಲಿಲ್ಲಿ ಪಿರೇರಾ, ಮಾಜಿ ಶಾಸಕ ಜೆ.ಆರ್. ಲೋಬೊ, ಎಪಿಸ್ಕೋಪಲ್ ವಿಕಾರ್ ಅತಿ ವಂದನೀಯ ಫಾ. ಡೇನಿಯಲ್ ವೇಗಸ್, ಕಾರ್ಯಕ್ರಮದ ಸಂಚಾಲಕ ಕಾರ್ಮೆಲ್ ಸಂಸ್ಥೆಯ ಗುರು ವಂದನೀಯ ಫಾ. ಡೊಮಿನಿಕ್ ವಾಸ್ ಅವರು ಅತಿಥಿಗಳಾಗಿ ಭಾಗವಹಿಸುವರು.
ಸಭಾ ಕಾರ್ಯಕ್ರಮದ ಬಳಿಕ ಕಾರ್ಮೆಲ್ ಸಂಸ್ಥೆಯ ಗುರು ಫಾ. ನೆಲ್ಸನ್ ಪಿಂಟೊ ವಿರಚಿತ ಮಾಂಡ್ ಸೊಭಾಣ್ ಪ್ರಸ್ತುತ ಪಡಿಸುವ ಸೈಂಟ್ ತೆರೆಸಾ ಆಫ್ ಚೈಲ್ಡ್ ಜೀಸಸ್ ಅವರ ಜೀವನ ಮತ್ತು ಆಧ್ಯಾತ್ಮಿಕತೆ ಕುರಿತ ಕೊಂಕಣಿ ನಾಟಕ ಪ್ರದರ್ಶನಗೊಳ್ಳಲಿದೆ.












