ಇತ್ತೀಚಿನ ಸುದ್ದಿ
ಮಂಗಳೂರಿನಲ್ಲಿ ಹವಾಮಾನ ವೈಪರೀತ್ಯ: ಕಲ್ಲಿಕೋಟೆ ಏರ್ ಪೋರ್ಟ್ ನಲ್ಲಿ ಇಳಿದ ವಿಮಾನ
25/09/2021, 23:29
ಮಂಗಳೂರು(reporterkarnataka.com): ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ದುಬೈ ಹಾಗೂ ದಮಾಮ್ ನಿಂದ ಹೊರಟ ಎರಡು ವಿಮಾನಗಳು ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯದೆ ಕೇರಳದ ಕಲ್ಲಿಕೋಟೆಯಲ್ಲಿ ಲ್ಯಾಂಡ್ ಆಗಿದೆ.
ದಮಾಮ್ ನಿಂದ 150 ಮಂದಿ ಪ್ರಯಾಣಿಕರನ್ನು ಹೊತ್ತ ವಿಮಾನ ಬೆಳಗ್ಗಿನ ಜಾವ 4.30ಕ್ಕೆ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಮಂಗಳೂರಿನಲ್ಲಿ ಮಂಜು ಹಾಗೂ ಮೋಡ ಮುಸುಕಿದ ವಾತಾವರಣ ಇದ್ದ ಕಾರಣ ಬ್ಯಾಡ್ ಲೈಟ್ ಕಾರಣದಿಂದ ವಿಮಾನವನ್ನು ಮಂಗಳೂರಿನಲ್ಲಿ ಇಳಿಸದೆ ಕಲ್ಲಿಕೋಟೆ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು. ದುಬೈಯಿಂದ ಹೊರಟ ವಿಮಾನ ಕೂಡ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಕಲ್ಲಿಕೋಟೆಯಲ್ಲಿ ಇಳಿಸಲಾಯಿತು.
ಕಲ್ಲಿಕೋಟೆಯಲ್ಲಿ ವಿಮಾನ ಪ್ರಯಾಣಿಕರಿಗೆ ಸರಿಯಾದ ವ್ಯವಸ್ಥೆ ಮಾಡಿಲ್ಲ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.