ಇತ್ತೀಚಿನ ಸುದ್ದಿ
ಮಂಗಳೂರು ವಿಶ್ವವಿದ್ಯಾಲಯ ಕಾಲೇಜು: ಸದ್ಗುರು ರವಿದಾಸ್ ಕುರಿತ ದಕ್ಷಿಣ ಭಾರತದ ಮೊದಲ ರಾಷ್ಟ್ರೀಯ ವಿಚಾರಗೋಷ್ಠಿ
20/04/2026, 00:41
ಮಂಗಳೂರು(reporterkarnataka.com): ದಕ್ಷಿಣ ಭಾರತದಲ್ಲಿ ಸದ್ಗುರು ರವಿದಾಸ್ ಕುರಿತು ಆಯೋ ಜಿಸಲಾದ ಮೊದಲ ರಾಷ್ಟ್ರೀಯ ವಿಚಾರಗೋಷ್ಠಿ ಮಂಗಳೂರು ವಿಶ್ವವಿದ್ಯಾ ಲಯದ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ನಡೆಯಿತು.
ಅನೇ ಕ ಸಂತರು, ಮಹಾತ್ಮರು ಮತ್ತು ಸದ್ಗುರುಗಳ ಜನ್ಮಭೂಮಿಯಾದ “ಭಾರತ”ವು ಯಾವಾಗಲೂ ತನ್ನ ಜ್ಞಾನದ ಬೆಳಕಿನಿಂದ ಜಗತ್ತನ್ನು ಬೆಳಗಿಸುತ್ತದೆ. ಅಂತಹ ಒಬ್ಬ ಮಹಾನ್ ಸಂತ ಸದ್ಗುರು ರವಿದಾಸ್ ಜಿ ಅವರ 650ನೇ ಜನ್ಮ ಜಯಂತಿಯನ್ನು
2026ರಲ್ಲಿ ಆಚರಿಸಲಾಗುತ್ತಿದೆ. ವಾರಣಾಸಿಯ ಸೀ ರ್ ಗೋ ವರ್ಧ ನಪುರದಲ್ಲಿ ಜನಿಸಿದ ಸಂತ ರವಿದಾಸರು ತಮ್ಮ ವಚನಗಳ
ಮೂಲಕ ಸಾಮಾಜಿಕ ಸಾಮರಸ್ಯತೆಯ ಸಂದೇ ಶವನ್ನು ನೀಡಿದ ಮಹಾನ್ ಸಮಾಜ ಸುಧಾರಕರು. ಅವರ ವಿಚಾರಗಳು ವೇದ
ಮತ್ತು ಉಪನಿಷತ್ತಿನ ವಿಸ್ತರಣೆ.
ಈ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾ ಲಯದ” ಘಟಕ ಕಾಲೇಜು ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾ ಭವನ ದಲ್ಲಿ ಶನಿವಾರ ದಂದು ಒಂದು ದಿನದ ರಾಷ್ಟ್ರೀಯ ವಿಚಾರಗೋಷ್ಠಿಯನ್ನು ಯಶಸ್ವಿಯಾಗಿ ಆಯೋ ಜಿಸಲಾಯಿತು.
ವಿಚಾರಗೋಷ್ಠಿಯನ್ನು ‘ಹೊ ಸ ದಿಗಂತ’ ಕನ್ನಡ ದಿನಪತ್ರಿಕೆಯ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಪಿ.ಎಸ್.
ಪ್ರಕಾಶ್ ಉದ್ಘಾಟಿಸಿ ಮಾತನಾಡಿ, ಇಂದಿನ ಯುವ ಪೀಳಿಗೆಯಲ್ಲಿ ಮಾನವೀಯತೆ ಮತ್ತು ಸಾಮಾಜಿಕ ಸಮರಸತೆಯ
ಅಗತ್ಯತೆಯ ಬಗ್ಗೆ ಅವರು ಹೇಳಿದರು.
ಆಂಧ್ರಪ್ರದೇಶದ ತಿರುಪತಿಯ ಶ್ರೀ ವೆಂಕಟೇ ಶ್ವರ ವಿಶ್ವವಿದ್ಯಾ ಲಯದ ಪ್ರೊ.
ರಾಮಪ್ರಕಾಶ ಅವರು ” ಸಂತ ರವಿದಾಸ್ ಕುರಿತು ದಕ್ಷಿಣ ಭಾರತದಲ್ಲಿ ನಡೆದ ಮೊದಲ ವಿಚಾರಗೋಷ್ಠಿ ಇದು ಎಂದರು.
ಧಾರವಾಡದ ಕರ್ನಾಟಕ ವಿಶ್ವವಿದ್ಯಾ ಲಯದ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಸೀತಾರಾಮ್ ಪವಾರ್
ಅವರು ರವಿದಾಸ, ಕಬೀರ ದಾಸ ಹಾಗೂ ಕರ್ನಾಟಕದ ಬಸವಣ್ಣ, ಶಿಶುನಾಳ್ ಶರೀಫ ಮುಂತಾದ ಸಂತರ ಪರಂಪರೆಯ
ಮಹತ್ವವನ್ನು ವಿವರಿಸಿದರು.
*ವಿಷಯ ಮಂಡನೆ ಮತ್ತು ಗೋಷ್ಠಿಗಳು:*
ಉದ್ಘಾಟನೆಯ ನಂತರ ನಾಲ್ಕು ಪ್ರಮುಖ ಗೋ ಷ್ಠಿಗಳು ನಡೆದವು: **ಮೊದಲ ಗೋಷ್ಠಿ:** ದೆಹಲಿಯ ಅಖಿಲ ಭಾರತ
ಮಹಾಬೌದ್ಧಿಕ ಪ್ರಮುಖ ಸುಧೀರ್ ಜಿ ಅವರು “ಸಾಂಸ್ಕೃತಿಕ ಸಮರಸತೆಯ ಹರಿಕಾರ ಸದ್ಗುರು ರವಿದಾಸ್” ವಿಷಯದ ಬಗ್ಗೆ
ಮಾತನಾಡಿದರು. ಭಾರತೀ ಯ ರೆಡ್ಕ್ರಾಸ್ ಸೊ ಸೈ ಟಿಯ ಅಧ್ಯಕ್ಷ ಸಿ.ಎ. ಶಾಂತಾರಾಮ್ ಶೆಟ್ಟಿ ಅವರು ಗೋಷ್ಠಿಯ ಅಧ್ಯಕ್ಷತೆ
ವಹಿಸಿದ್ದರು. ಎರಡನೇ ಗೋಷ್ಠಿಯಲ್ಲಿ ತಿರುಪತಿಯ ಪ್ರೊ. ರಾಮಪ್ರಕಾಶ ಜಿ ಅವರು “ಸಮಾಜ ಸುಧಾರಕ ಸಂತ ರವಿದಾಸ” ಈ
ವಿಷಯದ ಬಗ್ಗೆ ವಿಶ್ಲೇಷಿಸಿದರು. ಮಂಗಳೂರು ವಿಶ್ವವಿದ್ಯಾ ಲಯ ಕಾಲೇಜಿನ ವಾಣಿಜ್ಯ ವಿಭಾಗದ ಪ್ರೊ. ಸುಭಾಷಿಣಿ ಶ್ರೀ ವತ್ಸ ಈ
ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಮೂರನೇ ಗೋ ಷ್ಠಿಯನ್ನು ಕೇರಳದ ಕೇಂದ್ರೀಯ ವಿಶ್ವವಿದ್ಯಾ ಲಯದ ಪ್ರೊ . ತಾರೂ ಪವಾರ
ಅವರು “ಮಾನವತಾವಾದಿ ಸಂತ ರವಿದಾಸ ” ಎಂಬ ವಿಷಯದ ಕುರಿತು ಮಾತನಾಡಿದರು. ವಿಶ್ವವಿದ್ಯಾ ಲಯ ಕಾಲೇಜಿನ ಹಿಂದಿ
ವಿಭಾಗದ ಪ್ರೊ. ಸುಮಾ ಟಿ.ಆರ್. ಅವರು ಈ ಗೋ ಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ನಾಲ್ಕನೇ ಗೋಷ್ಠಿಯಲ್ಲಿ ಪುಣೆಯ
ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯದ ಅಮೋಲ್ ರಾಜಾಭಾಯಿ ವಾಘ್ಮಾ ರೆ ಅವರು “ಸಾಮಾಜಿಕ ಸಮಾನತೆಯ ಹರಿಕಾರ ಸಂತ ರವಿದಾಸ ” ಬಗ್ಗೆ ತಮ್ಮ ವಿಚಾರದ ಬೆಳಕು ಚೆಲ್ಲಿದರು ಹಾಗು ಸದ್ಗುರು ರವಿದಾಸರ ಪದಗಳ ಗಾಯನ ಮಾಡಿದರು.
ಬೆಸೆಂಟ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಡಾ. ರೂಪಸಿಂಗ್ ನಾಯಕ ಈ ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದರು.
**ಸಮಾರೋಪ ಸಮಾರಂಭ:**
ಸಮಾರೋಪ ಸಮಾರಂಭದಲ್ಲಿ ಹುಬ್ಬಳ್ಳಿಯ ಕರ್ನಾಟಕ ವಿಜ್ಞಾ ನ ಕಾಲೇ ಜಿನ ಪ್ರಾಂಶುಪಾಲರು ಮತ್ತು ಕರ್ನಾಟಕ
ಮಹಾವಿದ್ಯಾ ಲಯದ ಶಿಕ್ಷಕ ಸಂಘದ ಉಪಾಧ್ಯಕ್ಷ ಸಂದೀ ಪ್ ಬೂದಿಹಾಳ ಹಾಗೂ ಬ್ಯಾಂಕ್ ಆಫ್ ಬರೋಡಾದ ರಾಜಭಾಷಾ
ವಿಭಾಗದ ಡಾ. ಬಾಲಮುರುಗನ್ ಅವರು ಇಂದಿನ ಸಮಾಜಕ್ಕೆ ರವಿದಾಸ ಅವರ ವಿಚಾರಗಳ ಅಗತ್ಯತೆಯನ್ನು ಒತ್ತಿ
ಹೇ ಳಿದರು.
ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರೊ ತರು ಪವಾರ ಸಮಾರೋಪ ಭಾಷಣವನ್ನು ಮಾಡಿದರು.
**ಸಂಘಟನೆ ಮತ್ತು ಭವಿಷ್ಯದ ಯೋಜನೆ**
ಈ ವಿಚಾರಗೋಷ್ಠಿಯನ್ನು ಮಂಗಳೂರು ವಿಶ್ವವಿದ್ಯಾ ಲಯದ ಹಿಂದಿ ವಿಭಾಗ, ಕರ್ನಾ ಟಕ ರಾಜ್ಯ ಕಾಲೇ ಜು ಶಿಕ್ಷಕ ಸಂಘ
(ಮಂಗಳೂರು ವಿಭಾಗ), ಮಂಗಳೂರು ವಿಶ್ವವಿದ್ಯಾ ಲಯ ಹಿಂದಿ ಅಧ್ಯಾಪಕ ಸಂಘ ಮತ್ತು ಬ್ಯಾಂಕ್ ಆಫ್ ಬರೋಡಾ ಇವುಗಳ
ಸಂಯುಕ್ತಆಶ್ರಯದಲ್ಲಿ ಆಯೋಜಿಸಲಾಗಿತ್ತು. ಪ್ರೊ. ನಾಗರತ್ನ ರಾವ್ ಅವರು ಕಾರ್ಯಕ್ರಮದ ಪ್ರಮುಖ ರುವಾಗಿಯಾಗಿದ್ದರು.
ವಿಚಾರಗೋಷ್ಠಿಯಲ್ಲಿ 60 ಪ್ರಾಧ್ಯಾಪಕರು ಮತ್ತು 50 ವಿದ್ಯಾರ್ಥಿಗಳು ಸಕ್ರಿಯ್ವಾ ಗಿ ಭಾಗವಹಿಸಿದ್ದರು. ಮಂಗಳೂರು
ವಿಶ್ವವಿದ್ಯಾಲಯದ ಹಿಂದಿ ಸ್ನಾತಕೋತ್ತರ ವಿದ್ಯಾರ್ಥಿ ಗಳಿಂದ ಸಂತ ರವಿದಾಸ ಅವರ ಜೀವನ ಮತ್ತು ವಚನಗಳ ಕುರಿತು ಚಿತ್ರ
ಪ್ರದರ್ಶ ನ ಏರ್ಪ ಡಿಸಲಾಗಿತ್ತು.
**ಮುಂದಿನ ಯೋಜನೆ:**
ಮುಂದಿನ ವರ್ಷ ದ ರವಿದಾಸ್ ಜಯಂತಿ ಆಚರಿಸುವುದೊಳಗೆ ವಿವಿಧ ಶಾಲೆ-ಕಾಲೇಜುಗಳಲ್ಲಿ ಸಂತ ರವಿದಾಸರ ವಿಚಾರಗಳನ್ನು
ಪ್ರಚುರಪಡಿಸಲು ಸುಮಾರು 100 ವಿಶೇಷ ಉಪನ್ಯಾಸ ಮಾಲೆಗಳನ್ನು ಆಯೋ ಜಿಸಲು ಕರ್ನಾಟಕ ಮಹಾವಿದ್ಯಾಲಯ ಶಿಕ್ಷಕ
ಸಂಘ ಯೋಜಿಸಿದೆ. ಇದರ ಸಂಯೋಜನೆಯನ್ನು ಪ್ರೊ. ನಾಗರತ್ನ ಎನ್. ರಾವ್ ಅವರು ನಿರ್ವ ಹಿಸಲಿದ್ದಾರೆ.












