ಇತ್ತೀಚಿನ ಸುದ್ದಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ರಾಜ್ಯಶಾಸ್ತ್ರ ಉಪನ್ಯಾಸಕರ ಒಂದು ದಿನದ ಕಾರ್ಯಾಗಾರ
11/09/2025, 17:51
ಮಂಗಳೂರು(reporterkarnataka.com): ದಕ್ಷಿಣ ಕನ್ನಡ ಜಿಲ್ಲಾ ರಾಜ್ಯಶಾಸ್ತ್ರ ಉಪನ್ಯಾಸಕರ ಒಂದು ದಿವಸದ ಕಾರ್ಯಾಗಾರ ಮತ್ತು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯಶಾಸ್ತ್ರ ಸಂಘದ ಪದಾಧಿಕಾರಿಗಳ ಅಯ್ಕೆ ಕಾರ್ಯಕ್ರಮವು ಮಂಗಳೂರು ಕೊಡಿಯಲ್ ಬೈಲ್ ಬೆಸೆಂಟ್ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಸೈಂಟ್ ಅಲೋಷಿಯಸ್ ಡಿಮ್ಡ್ ವಿಶ್ವವಿದ್ಯಾಲಯದ ಡಾ. ರೋಸ್ ವೀರ ಡಿಸೋಜ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ವಿಭಾಗದ ಉಪನಿರ್ದೇಶಕರಾದ ರಾಜೇಶ್ವರಿ ಎಚ್ ವಹಿಸಿದ್ದರು ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಜಯಾನಂದ ಸುವರ್ಣ, ಬೆಸೆಂಟ್ ನ್ಯಾಷನಲ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ನಾಯಕ್ ರೂಪ್ ಸಿಂಗ್,ದಕ್ಷಿಣ ಕನ್ನಡ ಜಿಲ್ಲಾ ರಾಜ್ಯಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಚಂದ್ರನಾಥ ಎಂ,ಕಾರ್ಯದರ್ಶಿ ದಿವ್ಯಕುಮಾರಿ ಉಪಸ್ಥಿತರಿದ್ದರು. ನೂತನ ಪದಾಧಿಕಾರಿಗಳನ್ನು ಅಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಚಂದ್ರನಾಥ.ಎಂ ಚೇಳೈರು, ಕಾರ್ಯದರ್ಶಿ ರಂಜಿತಾ ತೆಂಕಮಿಜಾರು,ಖಚಾಂಚಿಯಾಗಿ ವನಿತಾ ಮಂಗಳೂರು ಉಪಾಧ್ಯಕ್ಷರಾಗಿ ಮಹಾವೀರ,ಶುಭಾಪೌಲ್,ಸಂದೀಪ್ ಪೂಜಾರಿ,ತಾಲ್ಲೂಕು ಪ್ರತಿನಿಧಿಗಳಾಗಿ ವೆಂಕಟೇಶ್, ದಾಮೋದರ್ ಎನ್, ಜುಬೇದಾ,ವಿಶಾಂತ್ ಶೆಟ್ಟಿ, ಜಯಶ್ರೀ, ಶಿಲ್ಪ, ಭರತ್ ಕುಮಾರ್, ಸುನಿಲ್ ಕುಮಾರ್ ಹಾಗೂ ಸುರೇಶ್ ಎನ್ ರವರನ್ನು ಅಯ್ಕೆ ಮಾಡಲಾಯಿತು ಇದೇ ಸಂದರ್ಭದಲ್ಲಿ ಸೇವೆಯಿಂದ ನಿವೃತ್ತರಾದ ಕಾಟಿಪಳ್ಳ ನಾರಾಯಣ ಗುರು ಕಾಲೇಜಿನ ಪ್ರಾಂಶುಪಾಲರಾದ ಉಮೇಶ್ ಕರ್ಕೇರ ಇವರನ್ನು ಸನ್ಮಾನಿಸಲಾಯಿತು ಜಿಲ್ಲೆಯಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ಅತೀ ಹೆಚ್ಚು ಅಂಕಗಳಿಸಿದ ಸರ್ಕಾರಿ ಪದವಿ ಪೂರ್ವ ಕಾಲೇಜು, ಕೊಕ್ರಡಿಯ ರಶ್ಮಿ, ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಬನಾವತ್ ಮಯುಕ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆಯ ಕಾರ್ತಿಕ್ ಡಿ.ಸಿ , ಶ್ರೀ ಸುಬ್ರಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ಪುನೀತ್ ಪಿ.ಜೆ ಯವರನ್ನು ಅಭಿನಂದಿಸಲಾಯಿತು ದ್ವೀತಿಯ ಪಿಯುಸಿಯಲ್ಲಿ 100% ಅಂಕ ಫಲಿತಾಂಶ ದಾಖಲಿಸಿದ 40 ಉಪನ್ಯಾಸಕರನ್ನು ಗೌರವಿಸಲಾಯಿತು














