ಇತ್ತೀಚಿನ ಸುದ್ದಿ
ಮಂದಾರಬೈಲ್ ಶ್ರೀ ದುರ್ಗಾಪರಮೇಶ್ವರಿ ವೆಂಕಟರಮಣ ದೇವಸ್ಥಾನದಲ್ಲಿ ಫೆ.11ರಂದು ಶ್ರೀನಿವಾಸ ಕಲ್ಯಾಣ ಮಂಗಲೋತ್ಸವ ಕಲ್ಪೋಕ್ತ ಪೂಜೆ
06/02/2024, 18:46
ಮಂಗಳೂರು(reporterkarnataka.com): ನಗರದ ದೇರೆಬೈಲ್ ಕೊಂಚಾಡಿ ಸಮೀಪದ ಮಂದಾರಬೈಲ್ ಶ್ರೀ ದುರ್ಗಾಪರಮೇಶ್ವರಿ ವೆಂಕಟರಮಣ ದೇವಸ್ಥಾನದಲ್ಲಿ ನಡೆದ ಶ್ರೀನಿವಾಸ ಸ್ವಾಮಿ ಕಲ್ಯಾಣ ಮಹೋತ್ಸವದ ಸವಿ ನೆನಪಿಗಾಗಿ ಫೆ.11ರಂದು ಶ್ರೀನಿವಾಸ ಕಲ್ಯಾಣ ಮಂಗಲೋತ್ಸವ ಕಲ್ಪೋಕ್ತ ಪೂಜೆ ನಡೆಯಲಿದೆ.
ಫೆ.11ರಂದು ಸಂಜೆ 5.30ರಿಂದ ರಾತ್ರಿ 8.30ರ ವರೆಗೆ ದೇಗುಲದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀನಿವಾಸ ಸಭಾಭವನದಲ್ಲಿ ಪೂಜೆ ನೆರವೇರಲಿದೆ. ಅಂದು ಸಂಜೆ 5 ಗಂಟೆಗೆ ದೇವಸ್ಥಾನದಆವರಣದಲ್ಲಿ ಭಜನೆ, ಕುಣಿತ ಭಜನೆಯೊಂದಿಗೆ ದಿಬ್ಬಣ ಮೆರವಣಿಗೆ ಆರಂಭವಾಗಲಿದೆ. ಬಳಿಕ ಕಲ್ಪೋಕ್ತ ಪೂಜೆ, ಕಲ್ಯಾಣ ಮಂಗಲೋತ್ಸವ ನಡೆಯಲಿದೆ.