5:04 PM Sunday1 - February 2026
ಬ್ರೇಕಿಂಗ್ ನ್ಯೂಸ್
ಮೊದಲಿನಂತೆ ಸ್ವತಂತ್ರವಾಗಿ ಸಿನಿಮಾ ಮಾಡಲಾಗುತ್ತಿಲ್ಲ: ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಟ-ನಿರ್ದೇಶಕ ಅನುರಾಗ್ ಕಶ್ಯಪ್ ಇಂದ್ರಿಯ ನಿಗ್ರಹಿಸುವುದೇ ನೈಜ ಜ್ಞಾನ; ಇದುವೇ ಜೀವನ ಮಾರ್ಗ : ಶೃಂಗೇರಿ ಶಾರದಾಪೀಠದ… ಗೃಹ ಸಚಿವರ ರಾಜೀನಾಮೆ, ಪೊಲೀಸ್ ಕಮೀಷನರ್ ಅಮಾನತಿಗೆ ಬಿಜೆಪಿ ಆಗ್ರಹ ಕಾನ್ಫಿಡೆಂಟ್‌ ಗ್ರೂಪ್‌ ಚೇರ್‌ಮೆನ್ ಸಿ.ಜೆ. ರಾಯ್‌ ಗುಂಡಿಕ್ಕಿಕೊಂಡು ಆತ್ಮಹತ್ಯೆ: ಐಟಿ ದಾಳಿಗೆ ಹೆದರಿದರೇ… ಕಾಡಾನೆ ದಾಳಿಯಿಂದ ಅದೃಷ್ಟವಶಾತ್ ತಂದೆ- ಮಗಳು ಜಸ್ಟ್ ಮಿಸ್: ಕೊಡಗಿನಲ್ಲಿ ತಪ್ಪಿದ ಭಾರಿ… ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ವಿ ಬಿ ಜಿ ರಾಮ್… 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಉದ್ಘಾಟನೆ ಕೊಡಗು: ಮುಂದುವರಿದ ಆನೆ- ಮಾನವ ಸಂಘರ್ಷ; ಕಾಡಾನೆ ದಾಳಿಗೆ ಕಾರ್ಮಿಕ ಬಲಿ ಆರ್ಥಿಕ ಬೆಳವಣಿಗೆಗೆ ಕೇಂದ್ರದ ಆರ್ಥಿಕ ನೀತಿಗಳೇ ಕಾರಣ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ… ನಮ್ಮ ಸರ್ಕಾರ ಯಾರ ಪೋನ್ ಟ್ಯಾಪ್ ಮಾಡುವುದಿಲ್ಲ: ಸಿಎಂ ಸಿದ್ದರಾಮಯ್ಯ

ಇತ್ತೀಚಿನ ಸುದ್ದಿ

ಮಂಡಾಡಿ ಬಿರುವೆರ್ ಫ್ರೆಂಡ್ಸ್ : ಅಶಕ್ತ ಕುಟುಂಬಗಳಿಗೆ ಧನ ಸಹಾಯ, ಮಕ್ಕಳಿಗೆ ಪುಸ್ತಕ ವಿತರಣೆ

18/10/2022, 23:06

ಬಂಟ್ವಾಳ(reporter Karnataka.com): ಬಿರುವೆರ್ ಫ್ರೆಂಡ್ಸ್ ಮಂಡಾಡಿ ಮತ್ತು ಮಹಾಮ್ಮಾಯಿ ಫ್ರೆಂಡ್ಸ್ ಮಂಡಾಡಿ ಇದರ ಸಹ ಭಾಗಿತ್ವದಲ್ಲಿ ನವರಾತ್ರಿಯ ಶಾರದಾ ಶೋಭಾಯಾತ್ರೆಗೆ ಹುಲಿವೇಷದ ಸ್ತಬ್ಧ ಚಿತ್ರ ಪ್ರದರ್ಶನ ಮಾಡಲಾಯಿತು.

ಬಂದ ಹಣವನ್ನು ಅಶಕ್ತ ಕುಟುಂಬಗಳಿಗೆ ಧನದ ರೂಪದಲ್ಲಿ ಮತ್ತು ಮಕ್ಕಳಿಗೆ ಪುಸ್ತಕದ ರೂಪದಲ್ಲಿ ವಿತರಿಸಲಾಯಿತು.

ಅರ್ಬಿಗುಡ್ಡೆ ನಿವಾಸಿಗಳಾದ ಲೋಕೇಶ ಮತ್ತು ಭವಾನಿ ಅವರ ಪುತ್ರ ಆಯುಷ್ ಎಂಬ ಬಾಲಕನ ವೈದ್ಯಕೀಯ ಚಿಕಿತ್ಸೆಗಾಗಿ ನೆರವನ್ನು ಸಂಸ್ಥೆಯ ಪದಾಧಿಕಾರಿಗಳ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.

ಸರಕಾರಿ ಪ್ರೌಢಶಾಲೆ ಕೊಯಿಲ ಬಂಟ್ವಾಳ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆಯನ್ನು ಶ್ರೀ ದುರ್ಗಾಂಬಾ ಮಂದಿರ, ಬಿರುವೆರ್ ಫ್ರೆಂಡ್ಸ್ ಮಂಡಾಡಿ,ಮಹಮ್ಮಾಯಿ ಫ್ರೆಂಡ್ಸ್, ಸಹ ಭಾಗಿತ್ವದಲ್ಲಿ ವಿತರಿಸಲಾಯಿತು.
ಮಕ್ಕಳಿಗೆ ಸಿಹಿತಿಂಡಿ ಹಂಚಿ ಮಂದಿರದ ಅರ್ಚಕರಾದ ಪ್ರಶಾಂತ್ ಭಟ್ ರವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.


ಶಾಲಾ ಮುಖ್ಯೋಪಾಧ್ಯಾಯರು, ಸಹೋದ್ಯೋಗಿಗಳು, ಬಿರುವೆರ್ ಫ್ರೆಂಡ್ಸ್ ಮಂಡಾಡಿಯ ಕಾರ್ಯದರ್ಶಿ ಅನಿಲ ಪೂಜಾರಿ ಮಂಡಾಡಿ, ಮಹಾಮ್ಮಾಯಿ ಫ್ರೆಂಡ್ಸ್ ನ ಕಾರ್ಯದರ್ಶಿ ಹರೀಶ್, ಪ್ರಶಾಂತ್, ರತೀಶ್, ಕಿರಣ್ , ಸಂತೋಷ್ ಸಾಕ್ಷಿಯಾದರು.

ಇತ್ತೀಚಿನ ಸುದ್ದಿ

ಜಾಹೀರಾತು