5:00 PM Thursday8 - January 2026
ಬ್ರೇಕಿಂಗ್ ನ್ಯೂಸ್
ಅಕ್ರಮ ಗಾಂಜಾ ಮಾರಾಟ: ಅಸ್ಸಾಂ ಮೂಲದ ಇಬ್ಬರು ಆರೋಪಿಗಳ ಬಂಧನ ನಮ್ಮ ಮೆಟ್ರೋದಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ಪಾಸ್: ಎಎಪಿ ಯುವ ಘಟಕದಿಂದ ಸಹಿ ಸಂಗ್ರಹಣ… ಬಾಂಗ್ಲಾದವರು ನುಸುಳುವವರೆಗೆ ಕೇಂದ್ರ ಗೃಹ ಇಲಾಖೆ ನಿದ್ದೆಗೆ ಜಾರಿತ್ತಾ?: ಸಚಿವ ಕೃಷ್ಣ ಬೈರೇಗೌಡ… ಇನ್ಫೋಸಿಸ್ ನಿಂದ 53.5 ಎಕರೆ ಭೂಮಿ ರಿಯಲ್ ಎಸ್ಟೇಟ್ ಸಂಸ್ಥೆಗೆ ಮಾರಾಟ: ತನಿಖೆಗೆ… ಕ್ವಾಂಟಮ್ ತಂತ್ರಜ್ಞಾನ ಮತ್ತು ಸೆಮಿಕಂಡಕ್ಟರ್ ಸಹಭಾಗಿತ್ವಕ್ಕೆ ಪೆನಾಂಗ್ ಉಪಮುಖ್ಯಮಂತ್ರಿ ಒಲವು ಲಾರಿ- ಬೈಕ್ ಡಿಕ್ಕಿ: ಗಾಯಾಳು ಬೈಕ್ ಸವಾರ ಗೋಣಿಕೊಪ್ಪಲು ಲೋಪಮುದ್ರ ಆಸ್ಪತ್ರೆಯಲ್ಲಿ ಸಾವು ಸುದೀರ್ಘ ಅವಧಿಗೆ ಸಿಎಂ ಎಂಬ ದಾಖಲೆ ಜನರ ಆಶೀರ್ವಾದಿಂದ ಸಾಧ್ಯವಾಗಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಕಲೆ ರಾಜ್ಯದ ಸಂಸ್ಕೃತಿಯ ಕನ್ನಡಿ; ಕಲಾವಿದರು,ಕಲಾಸಕ್ತರಿಗೆ ಚಿತ್ರಸಂತೆ ವೇದಿಕೆ ಕಲ್ಪಿಸಿದೆ: ಮುಖ್ಯಮಂತ್ರಿ Kodagu | ಸಾರ್ವಜನಿಕವಾಗಿ ಬಂದೂಕು ಪ್ರದರ್ಶನ: 3 ಮಂದಿ ಆರೋಪಿಗಳ ಬಂಧನ ಸೋಶಿಯಲ್ ಮೀಡಿಯಾ ಪವರ್: 60 ವರ್ಷದ ವೃದ್ದನನ್ನು ಕುಟುಂಬದೊಂದಿಗೆ ಮತ್ತೆ ಒಂದಾಗಿಸಿದ ರೀಲ್ಸ್!

ಇತ್ತೀಚಿನ ಸುದ್ದಿ

ಮನಸ್ಸು ಹುಚ್ಚು ಕುದುರೆಯಂತೆ… ಒಮ್ಮೆ ಕೋಮಲ, ಇನ್ನೊಮ್ಮೆ ಚಂಚಲ, ಮಗದೊಮ್ಮೆ ಭಾವುಕ!!

06/10/2024, 21:31

ರಾಜೇಶ್ವರಿ ಕುಮಾರ್ ರಾವ್ ಬೆಂಗಳೂರು

info.reporterkarnataka@gmail.com

ಮನುಷ್ಯನ ದೇಹದ ವಿವಿಧ ಅಂಗಾಂಗಗಳಿಗೆ ರೂಪ ಆಕಾರಗಳಿವೆ. ಆದರೆ ‘ಮನಸ್ಸು’ ಎಂಬ ಭಾಗ ಅದೆಲ್ಲಿ ಅವಿತು ಕುಳಿತಿದೆಯೋ ಆ ಸೃಷ್ಟಿಕರ್ತನೇ ಬಲ್ಲ. ನಮ್ಮ ಪೂರ್ವಜರು ‘ಮನೋನಿಗ್ರಹ’ ಎಂಬ ಸಾಧನೆಯನ್ನು ಕರಗತ ಮಾಡಿಕೊಳ್ಳಲು ಜಪತಪಗಳನ್ನು ಮಾಡುತ್ತಿದ್ದರಂತೆ. ಅವರ ಸಾಧನೆಯನ್ನು ನಿಷ್ಕ್ರಿಯಗೊಳಿಸಲು ವಿವಿಧ ರೀತಿಯ ಪ್ರಲೋಭನೆಗಳು ಅವರ ಕಣ್ಮುಂದೆ ಪ್ರತ್ಯಕ್ಷವಾಗುತ್ತಿದ್ದುವೆಂದು ಪುರಾಣ ಕತೆಗಳಲ್ಲಿ ಉಲ್ಲೇಖಗಳಿವೆ. ನಮ್ಮ ಮನಸ್ಸಿನಲ್ಲಿ ಉದಿಸುವ ಸಂತೋಷ, ದುಃಖ,ಆಸೆ ನಿರಾಸೆ, ಲೋಭ ಮೋಹ ಮದಮತ್ಸರ ಎಂಬಿತ್ಯಾದಿ ಭಾವಗಳ ಉದಯವಾಗುವುದು ಮನಸ್ಸಿನಲ್ಲಿಯೇ.
ಮನುಷ್ಯನ ಮನಸ್ಸು ಹುಚ್ಚು ಕುದುರೆಯಂತೆ. ಒಮ್ಮೆ ಕೋಮಲ, ಇನ್ನೊಮ್ಮೆ ಚಂಚಲ, ಮಗದೊಮ್ಮೆ ಭಾವುಕ.
ಆದರೆ ಬುದ್ಧಿಯ ನಿಲುವು ದೃಢ. ಮನುಷ್ಯ ಸಮಾಜದಲ್ಲಿ ಬದುಕಬೇಕಾದರೆ ಬುದ್ಧಿ ಮನಸ್ಸುಗಳೆರಡರ ಸಾಮರಸ್ಯ ಇರಲೇಬೇಕು. ಆತ ತನ್ನ ನಿಲುವನ್ನು ತಾನೇ ದೃಢಪಡಿಸಿ ಕೊಳ್ಳಬೇಕು.
ಸುತ್ತಲ ಪರಿಸರಕ್ಕೆ ತನ್ನನ್ನು ತಾನೇ ಅಳವಡಿಸಿಕೊಳ್ಳುತ್ತಾ,
ಇತರರ ದಕ್ಷತೆಯ ಹಿಂದಿರುವ ಮನಸ್ಥೈರ್ಯವನ್ನು, ಸೂಕ್ಷ್ಮವಾಗಿ ಅವಲೋಕಿಸಬೇಕು. ತನ್ನ ಬುದ್ದಿಗೆ ತಾನೇ ತಾಲೀಮು ಕೊಟ್ಟು, ಭಾವನೆಗಳನ್ನು ಹಾಗೂ ವರ್ತನೆ
ಯನ್ನು ಸಮರ್ಪಕವಾಗಿ ಅಭಿವ್ಯಕ್ತಿಸುವ ಕಲೆಯನ್ನು ಕರಗತಪಡಿಸಿಕೊಳ್ಳುವುದು ಅನಿವಾರ್ಯ. ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಸ್ವತಂತ್ರ ವ್ಯಕ್ತಿತ್ವ ಇದೆ,
ಮತ್ತು ಇರಲೇಬೇಕು. ಒಂದೇ ತಂದೆತಾಯಿಗಳು ಜನ್ಮಕೊಟ್ಟ ಮಕ್ಕಳು ರೂಪದಲ್ಲಾಗಲೀ, ಗುಣದಲ್ಲಾಗಲೀ ಸ್ವಭಾವದಲ್ಲಾಗಲೀ ಒಬ್ಬರಂತೆ ಇನ್ನೊಬ್ಬರಿಲ್ಲ. ಆದರೆ ನಮ್ಮ ಸಂಸ್ಕಾರ, ವಿದ್ಯೆ, ಅನುಭವ, ಪರಿಸರಕ್ಕೆ ‌ಅನುಗುಣವಾಗಿ , ಸ್ವಭಾವ, ಮಾತು, ವರ್ತನೆಗಳಲ್ಲಿ ‘ ಕೂಡುವ, ಕಳೆಯುವ ‘ಪ್ರಕ್ರಿಯೆ ಸಹಜವಾಗಿ, ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಮನುಷ್ಯ ಸ್ವಭಾವ,ಸಂದರ್ಭಕ್ಕೆ ತಕ್ಕಂತೆ
ಬದಲಾವಣೆಯಾಗುತ್ತಾ ಹೋಗುತ್ತದೆ. ಮನುಷ್ಯನ ಮನಸ್ಸಿನ ಪದರು ಪದರುಗಳನ್ನು ಬಿಡಿಸುತ್ತಾ ಹೋದಂತೆ ಎಂತಹಾ ವಿಚಿತ್ರ ಅನುಭವಗಳಾಗುತ್ತದೆ ಗೊತ್ತೇ! ಹಳೆಯ ಯಾವ ಘಟನೆಯನ್ನಾದರೂ ನೆನಪಿಸಿಕೊಳ್ಳಿ. ಯಾವ ಸೆಕ್ರೆಟರಿ, ಅಥವಾ ಕಂಪ್ಯೂಟರಿನ ನೆರವೂ ಇಲ್ಲದೆಆ ಘಟನೆ ನಮ್ಮ ಕಣ್ಣೆದುರು ತನ್ನ ವರ್ಣರಂಜಿತ ಚಿತ್ರ.. ಪಾತ್ರಗಳೊಂದಿಗೆ ಧುತ್ತೆಂದು ಪ್ರತ್ಯಕ್ಷವಾಗುತ್ತದೆ.ಆ ಘಟನೆಯ ಸುತ್ತ ಹೆಣೆದಿದ್ದ ಸುಖ ಅಥವಾ ದುಃಖದ ಅನುಭವ ಯಥಾವತ್ತಾಗಿ ಪುನರಾವರ್ತನೆಯಾಗುತ್ತಾ, ನಮ್ಮ ತುಟಿಯಲ್ಲಿ ನಗುವಿನೆಳೆಯೋ ಕಣ್ಣಂಚಿನಲ್ಲಿ ಕಂಬನಿಯೋ ಆಗಿ ಗೋಚರಿಸಬಹುದು. ಕೇಳುವ ಕಿವಿಗಳಿದ್ದರಂತೂ ಘಟನೆಗೆ ರೆಕ್ಕೆ ಪುಕ್ಕವೂ ಹುಟ್ಟಿಕೊಳ್ಳುತ್ತವೆ. ಆ ಗುಂಗಿನಿಂದ ವಾಸ್ತವ ಪ್ರಪಂಚಕ್ಕೆ ಬರಲು ಬಹಳಷ್ಟು ಸಮಯವೇ ಬೇಕು.
ಬುದ್ಧಿ ಮನಸ್ಸುಗಳಲ್ಲಿರುವ ಅವ್ಯಕ್ತ ಖಜಾನೆ,ಅಥವಾ
ಕಸದ ಬುಟ್ಟಿ…ನೆನಪುಗಳು. ಎದುರಿಗಿರುವವರನ್ನು ಗುರುತಿಸಲಾಗದಷ್ಟು ವಯಸ್ಸಾಗಿ, ಕಣ್ಣು ಮಂಜಾದ
ಹಣ್ಣು ಹಣ್ಣು ಮುದುಕ..ಬಾಲ್ಯದಲ್ಲಿ ಯಾವಾಗಲೋ
ನಡೆದಿದ್ದ ಯಾವುದೋ ಘಟನೆಯನ್ನು ಯಥಾವತ್ತಾಗಿ
ಕಣ್ಣಿಗೆ ಕಟ್ಟುವಂತೆ ವರ್ಣಿಸುವುದನ್ನು ನಾವೆಲ್ಲಾ ಕೇಳಿದ್ದೇವೆ. ಆತ ತಾನು ಜೇಬಿನಲ್ಲಿಟ್ಟ,ಅಥವಾ ತಲೆಗೆ ಏರಿಸಿಕೊಂಡ ಕನ್ನಡಕವನ್ನು ಮನೆಯೆಲ್ಲಾ ಹುಡುಕಾಡು ತ್ತಾನೆ. ಆದರೆ, ಹಳೆಯ..ಬಾಲ್ಯದ,ತುಂಬುಯೌವನದ ಮೋಜು ಮಸ್ತಿ,ಸಾಧನೆ,ಸೋಲು ,ಯಾರೋ ಮಾಡಿದ ಅವಮಾನಗಳನ್ನು ಮುಚ್ಚಿಟ್ಟ– ಬಚ್ಚಿಟ್ಟ ಮಿದುಳಿನ ಮೂಲೆಯ ಸಂದೂಕ ತೆರೆದು ಧಪಧಪನೆ ಸುರಿದು ಬಿಡುತ್ತಾನೆ.ಅದೇ ಸುಪ್ತ ಮನಸ್ಸಿನ ಶಕ್ತಿ.. ನಿಗೂಢತೆ.

ಇತ್ತೀಚಿನ ಸುದ್ದಿ

ಜಾಹೀರಾತು